ಸುದ್ದಿವಿಜಯ, ಜಗಳೂರು: ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಪಂ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಟಿ.ಒ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷೆಯಾಗಿ ಬೇಬಿ ನಾಗರಾಜ್ ವಿಜಯಶಾಲಿಯಾಗಿದ್ದಾರೆ.
ಒಟ್ಟು 20ಮಂದಿ ಸದಸ್ಯರಿರುವ ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಅವದಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲು ನಿಗದಿಯಾಗಿತ್ತು.
ಅದರಂತೆ ಗುರುವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಟಿ.ಒ ಶ್ರೀನಿವಾಸ್, ಶಾಂತಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಬೇಬಿ ನಾಗರಾಜ್, ವಿಶಾಲಾಕ್ಷಿ ನಾಮ ಪತ್ರ ಸಲ್ಲಿಸಿದರು.
ಇದರಲ್ಲಿ ಟಿ.ಒ ಶ್ರೀನಿವಾಸ್ ಬೇಬಿ ನಾಗರಾಜ್ ತಲಾ 11 ಮತಗಳನ್ನು ಪಡೆದು ಗೆಲುವು ಸಾಧಿಸಿದರು, ಶಾಂತಮ್ಮ, ವಿಶಾಲಾಕ್ಷಿ ತಲಾ 9 ಮತಗಳನ್ನು ಪಡೆದು ಪರಾಜಿತಗೊಂಡರು.
ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ಕುಮಾರ್ ಕರ್ತವ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿ. ಆರ್ ಇಂದ್ರೇಶ್, ಅರವಿಂದ್ ಪಾಟೀಲ್, ಚಿಕ್ಕಮಲ್ಲನಹೊಳೆ ವಿರೇಶ್,
ಹಿರೇಮಲ್ಲನಹೊಳೆ ರೇವಣ್ಣ ಬಾಣೇಶ್, ಚಿಕ್ಕಮಲ್ಲನಹೊಳೆ ನಾಗರಾಜಯ್ಯ, ಮಲ್ಲಾಪುರ ವೆಂಕಟೇಶ, ಅಮರೇಂದ್ರಪ್ಪ, ಯಲ್ಲಪ್ಪ, ಮಾಜಿ ಉಪಾಧ್ಯಕ್ಷ ತಾಯಿಟೋಣಿ ಮಂಜುನಾಥ, ಚಿಕ್ಕಮಲ್ಲನಹೊಳೆ ಮಾಜಿ ಗ್ರಾ ಪಂ ಸದಸ್ಯ ನಾಗರಾಜ್.
ಜಾತಯ್ಯ, ಮಹಾಲಿಂಗಪ್ಪ ಜೆ. ಎಚ್ಎಂ ಹೊಳೆ, ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ,ಕಾಮೇಶ್, ಸತ್ಯಪ್ಪ, ದೊಣ್ಣೆಹಳ್ಳಿ ನಾಗಪ್ಪ, ರಘು ಜಾಗ್ವರ್ ಸೇರಿದಂತೆ ಮತ್ತಿತರಿದ್ದರು.