ಸುದ್ದಿವಿಜಯ, ಜಗಳೂರು: ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳನ್ನು ಅಪೌಷ್ಠಿಕತೆಯಿಂದ ದೂರ ಮಾಡಲು ಸರಕಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಮೊಟ್ಟೆ, ಬಾಳೆಹಣ್ಣ, ಚುಕ್ಕಿಯನ್ನು ಶುಕ್ರವಾರ ತಾಲ್ಲೂಕಿನ ಹಿರೇಮಲ್ಲನಹೊಳೆ ಸರಕಾರಿ ಶಾಲೆಗಳ ಮಕ್ಕಳಿಗೆ ವಿತರಿಸಲಾಯಿತು.
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಹಮ್ಮಿಕೊಂಡಿದ್ದ ಮಧ್ಯಾಹ್ನದ ಉಪಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಜೆ. ಮಹಾಲಿಂಗಪ್ಪ, ವಿದ್ಯಾರ್ಥಿಗಳಲ್ಲಿ ಉಂಟಾಗುತ್ತಿರುವ ಅಪೌಷ್ಟಿಕತೆ ಹೊಗಲಾಡಿಸಲು.
ಸರಕಾರ ಮೊದಲು ಒಂದರಿಂದ ಎಂಟನೆ ತರಗತಿಯವರೆಗೂ ವಾರಕ್ಕೆ ಒಂದು ಬಾರಿ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಮೊಟ್ಟೆ ತಿನ್ನದೆ ಇರುವ ಮಕ್ಕಳಿಗೆ ಬಾಳೆ ಹಣ್ಣು ಅಥಾವ ಶೇಂಗಾ ಚಿಕ್ಕಿ ವಿತರಣೆ ಮಾಡಿ ಎಂದು ತಿಳಿಸಿತ್ತು.
ಅದರೆ ಈ ವರ್ಷದಿಂದ 9 ಮತ್ತು 10ನೆ ತರಗತಿ ಮಕ್ಕಳಿಗೂ ಸಹ ಮೊಟ್ಟೆ ಬಾಳೆ ಹಣ್ಣು ವಿತರಣೆ ಮಾಡಲು ಸರಕಾರ ಸೂಚನೆ ಮಾಡಿದ್ದು ಉತ್ತಮವಾದ ಬೆಳೆವಣಿಗೆ ಎಂದರು.
ಸರಕಾರಿ ಶಾಲೆಗಳ ಪ್ರಗತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಸರಕಾರ ಕೊಡುತ್ತಿದೆ.
ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುವುದು ಸಾಬೀತು ಮಾಡುವ ಶಕ್ತಿ ಶಿಕ್ಷಕರಲ್ಲಿದೆ.
ಸರಕಾರ ಕೊಡುವ ಸಂಬಳಕ್ಕಾದರೂ ಗೌರವಿಸಿ ಕೆಲಸ ಮಾಡಿದರೆ ಕೆಲವೇ ವರ್ಷಗಳಲ್ಲಿ ಸರಕಾರಿ ಶಾಲೆಗಳ ಚಿತ್ರಣವೇ ಬದಲಾವಣೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಡಶಾಲೆಯ ಮುಖ್ಯಶಿಕ್ಷಕ ಪ್ರಕಾಶ್, ಶಿಕ್ಷಕರಾದ ಪ್ರಶಾಂತ್ ಸ್ವಾಮಿ, ದೈಹಿಕ ಮಂಜುನಾಥ, ಅತಿಥಿ ಶಿಕ್ಷಕರಾದ ಮಹೇಶ್, ಎಸ್‍ಡಿಎಮ್‍ಸಿ ಸದಸ್ಯರಾದ ಜಿ.ಟಿ ಕುಮಾರಸ್ವಾಮಿ, ಶೇಖರಪ್ಪ, ಚಂದ್ರಪ್ಪ ,ಬಸಮ್ಮ, ಹಾಲೆಹಳ್ಳಿ, ತಿಪ್ಪೇಸ್ವಾಮಿ ಸೇರಿದಂತೆ ಮತ್ತಿರರಿದ್ದರು.