ಸುದ್ದಿವಿಜಯ,ಜಗಳೂರು: 2023ನೇ ಸಾಲಿನಲ್ಲಿ ಮಳೆಗಾಲ ಕುಂಟಿತವಾಗಿ ಇಡೀ ದೇಶವೇ ಅಲ್ಲೋಲ ಕಲ್ಲೋಲವಾಗಿತ್ತು. ಅದರಲ್ಲೂ ಕರ್ನಾಟಕದಾದ್ಯಂತ ಬರಗಾಲ ಬಿಟ್ಟು ಬಿಡದೇ ಕಾಡಿತ್ತು.
ಮಳೆ ಇಲ್ಲದೇ ಕಂಗಾಲಾಗಿರುವ ರೈತರು ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮೇ ತಿಂಗಳ ಮಧ್ಯಭಾಗ ಸಮೀಪಿಸುತ್ತಿದ್ದರೂ ರಾಜ್ಯಾದ್ಯಂತ ಸಮರ್ಪಕ ಮಳೆಯಾಗಿಲ್ಲ.
ಅಲ್ಲಲ್ಲಿ ಕೊಂಚ ಮಳೆಯಾದರೂ ಅಷ್ಟಾಗಿ ಪರಿಣಾಮಕಾರಿಯಾಗಿ ಬಿದ್ದಿಲ್ಲ. ಆದರೂ ಭರವಸೆ ಕಳೆದುಕೊಳ್ಳದ ರೈತರು ಮಳೆಗಾಗಿ ಕಾಯುತ್ತಿದ್ದಾರೆ.
ಪ್ರಸ್ತುತ ವರ್ಷ ಮಳೆ ಪ್ರಮಾಣ ಎಷ್ಟು:
ಯುಗಾದಿ ನಂತರ ಆರಂಭವಾದ ಅಶ್ವಿನಿ (14/4/2024) ಮಳೆ ರೈತರಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿತ್ತು. ಆದರೆ ದೇಶದಾದ್ಯಂತ ಉಷ್ಣ ಮಾರುತದ ಎಫೆಕ್ಟ್ನಿಂದ ಕಳೆದ ಒಂದು ತಿಂಗಳಿನಿಂದ ಮಳೆ ಬರಲೇ ಇಲ್ಲ.ಭರಣಿ ಮಳೆ (27/4/2024) ಆರಂಭವಾದರೂ ಸಾಮಾನ್ಯ ಮಳೆ ಎಂದು ವರದಿ ಹೇಳಿತ್ತು. ಆದರೆ ಸಾಮಾನ್ಯವಾದ ಮಳೆಯೂ ಬರಲಿಲ್ಲ.
ಕೃತಿಕಾ ಮಳೆ (11/5/2024) ರಿಂದ ಆರಂಭವಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಕೊಡಗು ಸೇರಿದಂತೆ ಅಲ್ಲಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದೆ. ಕೃತಿಕಾ ಮಳೆ ಉತ್ತಮ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ವರದಿ ದೃಢಪಡಿಸಿದೆ.
ಮುಂಬರುವ ದಿನಗಳಲ್ಲಿ ಯಾವ ಮಳೆ ಹೆಚ್ಚು, ಕಡಿಮೆ
ರೋಹಿಣಿ (24/5/2024) ಸಾಮಾನ್ಯ
ಮೃಗಶಿರಾ (7/6/2024) ಸಾಮಾನ್ಯ
ಆರಿದ್ರಾ ಮಳೆ (21/6/2024) ಸಾಮಾನ್ಯ
ಪುನರ್ವಸು (5/7/2024) ಸಾಮಾನ್ಯ
ಪುಷ್ಯ (19/7/2024) ಉತ್ತಮ ಮಳೆ
ಆಶ್ಲೇಷ ಮಳೆ (2/08/2024) ಸಾಮಾನ್ಯ
ಮಘ ಮಳೆ (16/8/2024) ಉತ್ತಮ
ಹುಬ್ಬ ಮಳೆ (30/08/2024) ಸಾಮಾನ್ಯ
ಉತ್ತರ ಮಳೆ (13/9/2024) ಸಾಮಾನ್ಯ
ಹಸ್ತ ಮಳೆ (26/07/2024) ಉತ್ತಮ
ಚಿತ್ತ ಮಳೆ (10/10/2024) ಉತ್ತಮ
ಸ್ವಾತಿ ಮಳೆ (23/10/2024) ಸಾಮಾನ್ಯ
ವಿಶಾಖ ಮಳೆ (6/11/2024) ಸಾಮಾನ್ಯ
ಮಳೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.