ಸುದ್ದಿವಿಜಯ, ಜಗಳೂರು: ಭಾನುವಾರ ಸಂಜೆ ಸುರಿದ ಮಿಂಚು, ಗುಡುಗು ಸಹಿತ ಭಾರಿ ಮಳೆಗೆ ತಾಲೂಕಿನ ಹಲವೆಡೆ ಮಳೆಯಾಗಿದೆ.
ತಾಲೂಕಿನ ಅಶ್ವತ್ಥರೆಡ್ಡಿ ಬಡಾವಣೆ, ಗೋಪಗೊಂಡನಹಳ್ಳಿ, ಬಿಸ್ತುವಳ್ಳಿ, ರಸ್ತೆಮಾಕುಂಟೆ, ರಸ್ತೆ ಮಾಕುಂಟೆ ಗೊಲ್ಲರಹಟ್ಟಿ, ಕೊಣಚಗಲ್ಲು ರಂಗಸ್ವಾಮಿ ಬೆಟ್ಟ, ಕೊರಟಗೆರೆ, ಗುತ್ತಿದುರ್ಗ, ಸಾಗಲಗಟ್ಟೆ, ಮೆಗಿನಕೆರೆ, ಮಾಳಮ್ಮನಹಳ್ಳಿ, ರಸ್ತೆ ಮಾಚಿಕೆರೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಿರುಮಳೆಯಾಗಿದೆ.
ಜಗಳೂರು, ಬಿದರಕೆರೆ ಮಾರ್ಗವಾಗಿ ಹೋಗುವ ಬಿಸ್ತುವಳ್ಳಿ ಗ್ರಾಮದ ಬಳಿ ಸರಕಾರಿ ಶಾಲೆಯ ಕಾಪೌಂಡ್ ನಲ್ಲಿದ್ದ ಬೃಹತ್ ಮರ ಧರೆಗುರುಳಿದೆ. ಅದೇ ಮಾರ್ಗದಲ್ಲಿ ಮತ್ತೆರಡು ಮರಗಳು ರಸ್ತೆಗೆ ಉರುಳಿವೆ. ಹೀಗಾಗಿ ಸಂಚಾರ ವ್ಯತ್ಯಾಯ ಉಂಟಾಗಿತ್ತು.
ತಗ್ಗು ಪ್ರದೇಶಗಳಲ್ಲಿ ನೀರು ತುಂಬಿತ್ತು. ಹೊಲಗಳಲ್ಲಿ ನೀರಿನಬಹರಿವು ಕಂಡು ಬಂತು. ತಾಲೂಕಿನ ಅನೇಕ ಹಳ್ಳಿಗಳಲ್ಲಿ ಮಖೆಯಾಗಿದ್ದು, ರಾತ್ರಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.