Suddivijaya|Kannada News|29-04-2023
ಸುದ್ದಿವಿಜಯ ಜಗಳೂರು.ಬಡತನ, ಕಷ್ಟಗಳ ನಡುವೆಯೂ ವಿದ್ಯಾರ್ಥಿಯೊರ್ವ ಛಲ ಬಿಡದೇ ಓದಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 569 ಅಂಕಗಳನ್ನು ಪಡೆದು ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.
ಹೌದು. ದಾವಣೆಗೆರೆ ಜಿಲ್ಲೆ ಜಗಳೂರು ತಾಲೂಕಿನ ಕುಗ್ರಾಮ ಚಿಕ್ಕಮ್ಮನಹಟ್ಟಿ ಗ್ರಾಮದ ಬಿ.ಆರ್ ಸುಧಾಮಣಿ ಕಾಟಪ್ಪ ಇವರ ಪುತ್ರ ಕೆ.ಚೇತನ್ ಕುಮಾರ್ ದ್ವಿತೀಯ ಪಿಯುಸಿಯಲ್ಲಿ 569 ಅಂಕಗಳಿಸಿ ಉತ್ತೀರ್ಣನಾಗುವ ಮೂಲಕ ಬಡ ವಿಧ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.
ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಬಡತನ ಶಾಪವಲ್ಲ. ಬಡತನವನ್ನು ಮೆಟ್ಟಿ ನಿಂತರೆ ಸಾಧನೆಯ ಹಾದಿ ದೂರವಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ.
ನನ್ನ ತಂದೆ ತಾಯಿ ಕಷ್ಟಪಟ್ಟು ದುಡಿದು ನನ್ನ ಉತ್ತಮ ಕಾಲೇಜಿಗೆ ಸೇರಿಸಿ ಶಿಕ್ಷಣ ಕೊಡಿಸಿದ್ದಾರೆ. ನಾನು ಚನ್ನಾಗಿ ಓದಿ ಗೌರವ ತರಬೇಕು, ಸಮಾಜದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ಸೇವೆ ಮಾಡಬೇಕು ಎನ್ನುವ ಅಂಬಲವಿದೆ. ತುಂಬಾ ಖುಷಿಯಾಗುತ್ತಿದೆ ಎಂದು ವಿದ್ಯಾರ್ಥಿ ಕೆ.ಚೇತನ್ ಕುಮಾರ್ ಹಂಚಿಕೊಂಡಿದ್ದಾನೆ.
ದಾವಣಗೆರೆಯ ಬ್ರಾಹ್ಮೀ ಅಕಾಡಮೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಚೇತನ್ ಕುಮಾರ್ ಪಾಲಕರು ಪಡುತ್ತಿದ್ದ ಕಷ್ಟವನ್ನು ಕಣ್ಣಾರೆ ಕಂಡು ಓದಿದ ಫಲವಾಗಿ ರ್ಯಾಂಕ್ ಪಡೆದು ಕಾಲೇಜು ಮತ್ತು ಗ್ರಾಮಕ್ಕೆ ಗೌರವ ತಂದುಕೊಟ್ಟಿದ್ದಾನೆ.