ಸುದ್ದಿವಿಜಯ, ಭರಮಸಾಗರ: ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಮುಳ್ಳು ಹಂದಿಯೊಂದು ಪ್ರತ್ಯಕ್ಷವಾಗಿದ್ದು ಗುರುವಾರ ಪಟ್ಟಣದ ಪೆಟ್ರೋಲ್ ಬಂಕ್‍ಗೆ ನುಗ್ಗಿ ಜನರಲ್ಲಿ ಆಂತಕ ಸೃಷ್ಟಿಸಿತ್ತು.
ವಿಷಯ ತಿಳಿದ ಯುವ ಮುಖಂಡ ಎಸ್‍ಎಂಎಲ್ ಪ್ರವೀಣ್ ಮತ್ತು ಸಂತೋಷ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದು ಸೆರೆಹಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೆಟ್ರೋಲ್ ಬಂಕ್ ಗೆ ನುಗ್ಗಿದ ಮುಳ್ಳು ಹಂದಿಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಳ್ಳು ಹಂದಿ ಸೆರೆಹಿಡಿಯಲು ಹರಸಾಸಪಟ್ಟರು. ನಂತರ ಸ್ಥಳಕ್ಕೆ ಆಗಮಿಸಿದ ಉಪವಲಯ ಅರಣ್ಯ ಅಧಿಕಾರಿ ಟಿ.ಬಿ. ರುದ್ರಮನಿ, ಅರಣ್ಯ ಇಲಾಖೆ ಸಬ್ಬಂದಿಗೆ ಮಾರ್ಗದರ್ಶನ ನೀಡಿ ಬಲೆ ಬೀಡಿ ಸೆರೆ ಹಿಡಿದರು.
ನಂತರ ಮಾತನಾಡಿದ ಅವರು, ಈ ಮುಳ್ಳಂದಿಯೋ ಗ್ರಾಮಕ್ಕೆ ದಾರಿ ತಪ್ಪಿ ಬಂದಿರಬಹುದು. ಸಾಮಾನ್ಯವಾಗಿ ಹಳ್ಳಗಳ ಸಮೀಪ ಇವು ಕಾಣಿಸಿಕೊಳ್ಳುತ್ತವೆ.
ಇವು ರಾತ್ರಿ ವೇಳೆ ಮಾತ್ರ ಆಹಾರಕ್ಕಾಗಿ ಹೊರಬರುತ್ತವೆ. ಸುಮಾರು 10 ರಿಂದ 15 ಕೆಜಿ ಈ ಪ್ರಾಣಿ ತೂಕವಿರುತ್ತವೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೇಘನ ಸುರೇಶ್ ನಿರಂಜನ್ ಕೆಪಿ ಹರೀಶ್ ಭರಮಸಾಗರ ಪೆÇಲೀಸ್ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.