ಸುದ್ದಿವಿಜಯ, ದಾವಣಗೆರೆ: (ವಿಶೇಷ)ಸ್ತ್ರೀ ಎಂದರೆ ಪೂಜ್ಯ ಭಾವನೆ, ದುಷ್ಟ ಶಕ್ತಿ ಸಂಹಾರಕ್ಕೆ ದುರ್ಗೆ, ಚಾಮುಂಡಿ ಅವತಾರ ತಾಲಿದ್ದು ನಮಗೆಲ್ಲ ಗೊತ್ತಿರುವ ವಿಷಯ, ಆದರೆ ಮೆಡಿಕಲ್ ವ್ಯಾಮೋಹಕ್ಕೆ ಬಿದ್ದು ಕಟ್ಟಿಕೊಂಡ ಸಾತ್ವಿಕ ಪತಿಯನ್ನೇ ಕೊಲ್ಲಿಸಿದ ಪಾಪಿ ಪತ್ನಿಯ ಸ್ಟೋರಿ ಇದು.
ಈಕೆ ಹೆಸರು… ಶ್ವೇತಾ (28) ವರ್ಷ ದಾವಣಗೆರೆ ನಗರದ ಹಗೆದಿಬ್ಬ ವೃತ್ತದ ಸಮೀಪದ ಬುದ್ಧಬಸವ ನಗರದ ನಿವಾಸಿಯಾಗಿದ್ದು, ಇದೇ ಏರಿಯಾದ ಪ್ರಿಯತಮ ಚಂದ್ರಶೇಖರ್‌ಗೋಸ್ಕರ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಬೈಚವಳ್ಳಿ ಗ್ರಾಮದ ತಾಳಿ ಕಟ್ಟಿದ ಗಂಡ ಮಹಾಂತೇಶನನ್ನು ರಾತ್ರಿ ಹೀನಾಯವಾಗಿ ಕೊಲೆ ಮಾಡಿದ್ದಾಳೆ.
ಮಹಾಂತೇಶ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ನಿವಾಸಿಯಾಗಿದ್ದು, ದಾವಣಗೆರೆಯಲ್ಲಿ ಶ್ವೇತಾಳನ್ನು ವಿವಾಹವಾಗಿದ್ದರು.
ತನ್ನ ಜೀವನಕ್ಕೋಸ್ಕರ ಊರಿನಲ್ಲಿ ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶ್ವೇತಾ ಮತ್ತು ಮಹಾಂತೇಶ್ ದಂಪತಿಗೆ ಅವಳಿ ಮಕ್ಕಳಿದ್ದರು. ಚಂದ್ರಶೇಖರ-ಮಹಾಂತೇಶ ಅವರ ಬಾಲ್ಯಸ್ನೇಹಿತನಾಗಿದ್ದ.
ಚಂದ್ರಶೇಖರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಶ್ವೇತಾ ವಕೀಲರೊಬ್ಬರ ಕಚೇರಿಯಲ್ಲಿ ಸಹಾಯಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಹೀಗಿರುವಾಗ ಚಂದ್ರಶೇಖರ್ ಹಾಗೂ ಶ್ವೇತಾ ನಡುವೆ ಪ್ರೇಮಾಂಕುರವಾಗಿದೆ. ಇವರಿಬ್ಬರಿಗೆ ಗಂಡ ಮಹಾಂತೇಶ್ ಅಡ್ಡಿಯಾಗಿದ್ದ. ಅದಕ್ಕಾಗಿ ತನ್ನ ಪ್ರಿಯಕರನ ಜತೆ ಶ್ವೇತಾ ತನ್ನ ಗಂಡನನ್ನು ಕೊಲೆ ಮಾಡುವುದಕ್ಕಾಗಿ ಪ್ಲಾನ್ ರೂಪಿಸುತ್ತಾಳೆ. ನಂತರ ತನ್ನ ಗಂಡ ಮಹಾಂತೇಶ್‌ನನ್ನು ದಾವಣಗೆರೆಗೆ ಕರೆಸಿಕೊಳ್ಳುತ್ತಾಳೆ. ನಂತರ ನಡೆದಿದ್ದೇ ಟ್ವೀಸ್ಟ್.
ಶ್ವೇತಾ ಮೊದಲು ತನ್ನ ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸುತ್ತಾಳೆ. ಅದರಂತೆ ಮಾ. 23 ರಂದು ದಾವಣಗೆರೆ ರಿಂಗ್ ರಸ್ತೆಯಲ್ಲಿ ಮಹಾಂತೇಶ್‌ನ ಕತ್ತು ಕೊಯ್ದು, ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡುತ್ತಾರೆ. ಮೊದಲು ಶ್ವೇತಾ ಹಾಗು ಚಂದ್ರಶೇಖರ್ ಇಬ್ಬರು ಸೇರಿ ಶ್ವೇತಾಳ ಮನೆಗೆ ಮಹಾಂತೇಶ್‌ನನ್ನು ಮೊದಲು ರಾತ್ರಿ ವೇಳೆ ಕರೆಸಿಕೊಳ್ಳುತ್ತಾಳೆ.
ಹೆಂಡತಿ ಮೇಲೆ ಕಣ್ಣು ಹಾಕಿದ್ದ ಬಾಲ್ಯ ಸ್ನೇಹಿತ :
ಮಹಾಂತೇಶರನ್ನು ಕರೆದುಕೊಂಡು ಹೋಗಿದ್ದ ಇಬ್ಬರು ಮೊದಲು ಹೊಟ್ಟೆ ತುಂಬಾ ಕುಡಿಸುತ್ತಾರೆ. ಬಳಿಕ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಂದು ಹಾಕುತ್ತಾರೆ. ಅಲ್ಲದೇ ಪ್ರಿಯಕರ ಚಂದ್ರಶೇಖರ ತನ್ನ ಬಾಲ್ಯ ಸ್ನೇಹಿತ ಎಂದು ನೋಡದೇ ಮಹಾಂತೇಶ್ ಶವದ ಮೇಲೆ ಖಾರದಪುಡಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕುತ್ತಾನೆ. ಅಲ್ಲದೇ ಕುತ್ತಿಗೆ ಚಾಕುವಿನಿಂದ ಕತ್ತರಿಸುತ್ತಾನೆ.
ಬೆಳಗ್ಗೆ ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಹೊಯ್ಸಳ ವಾಹನದ ಸಿಬ್ಬಂದಿ ಇನ್ನೂ ಉಸಿರಾಡುತ್ತಿದ್ದ ಮಹಾಂತೇಶ್‌ನ್ನು ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿದ್ದು, ಮಾರ್ಗಮಧ್ಯೆ ಮೃತಪಟ್ಟಿದ್ದರು.
ಎಸ್ಪಿ ಸಿ.ಬಿ.ರಿಷ್ಯಂತ್ ನೇತೃತ್ವದಲ್ಲಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಗಾಳಕ್ಕೆ ಬಿದ್ದ ಪ್ರೇಮಿಗಳು
ಈ ಸಂದರ್ಭದಲ್ಲಿ ಎಸ್ಪಿ ಸಿ.ಬಿ.ರಿಷ್ಯಂತ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ತಂಡ ರಚನೆಯಾಗುತ್ತದೆ.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಲು ಮುಂದಾಗುತ್ತಾರೆ. ಮೊದಲು ಮೃತವ್ಯಕ್ತಿ ಬೆರಳು ಮುದ್ರೆಯನ್ನು ತೆಗೆದುಕೊಂಡು ಅದರಿಂದ ಮಾಹಿತಿ ಕಲೆ ಹಾಕುತ್ತಾರೆ.
ಇದಾದ ಬಳಿಕ ಮಹಾಂತೇಶ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಬೈಚವಳ್ಳಿ ಗ್ರಾಮದ ನಿವಾಸಿ ಎಂದು ಗೊತ್ತಾಗುತ್ತದೆ. ತನಿಖೆ ಮುಂದುವರೆಸಿದ ಪೊಲೀಸ್ ತಂಡ ಇದೀಗ ಶ್ವೇತಾ ಹಾಗೂ ಪ್ರಿಯಕರ ಚಂದ್ರಶೇಖರ್ ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ.
ಆರೋಪಿಗಳಿಂದ ಕೊಲೆಗೆ ಬಳಸಿದ್ದ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ 2 ದ್ವಿಚಕ್ರ ವಾಹನಗಳು, 2 ಮೊಬೈಲ್ ಪೋನ್, 1 ಚಾಕು, ಬಿಯರ್ ಬಾಟಲ್ ಹಾಗು ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ ತಾಳಿ ಕಟ್ಟಿದ ಗಂಡನನ್ನು ತನ್ನ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ ಪತ್ನಿಯನ್ನು ಪರಲೋಕಕ್ಕೆ ಹೋಗಿರುವ ಮಹಾಂತೇಶ್ ಕ್ಷಮಿಸೋದಿಲ್ಲ…