ದಾಖಲೆಯಿಲ್ಲದೇ ಸಾಗಾಣೆಯಾಗುತ್ತಿದ್ದ ಹಣದ ಬ್ಯಾಗ್ ಜಪ್ತಿ 

Suddivijaya
Suddivijaya April 5, 2023
Updated 2023/04/05 at 12:25 PM

ಸುದ್ದಿವಿಜಯ, ದಾವಣಗೆರೆ: ತಾಲ್ಲೂಕಿನ ಹೊರವಲಯದ ಬೇತೂರು ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹32,32,008ವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಈ ಪ್ರದೇಶದಲ್ಲಿ ಎಸ್‌ಎಸ್‌ಟಿ (ಸ್ಟ್ಯಾಟಟಿಕ್ಸ್ ಸರ್ವೆಲೆನ್ಸ್‌ ಟೀಮ್) ಪ್ರವೀಣ್‌ಕುಮಾರ್ ಅವರ ತಂಡ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಹಣ ಪತ್ತೆಯಾಗಿದೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರಿಗೆ ಸೇರಿದ ಹಣ ಇದಾಗಿದ್ದು, ಸ್ವಸಹಾಯ ಸಂಘಗಳಿಂದ ವಸೂಲು ಮಾಡಿರುವ ಹಣ ಎಂದು ಸ್ಪಷ್ಟನೆ ನೀಡಿದ್ದಾರೆ.

₹10 ಲಕ್ಷಕ್ಕೂ ಹೆಚ್ಚು ಹಣ ಇದ್ದುದರಿಂದ ಆದಾಯ ತೆರಿಗೆ ಇಲಾಖೆಯವರಿಗೆ ಒಪ್ಪಿಸಲಾಗಿದೆ. ಅವರು ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಚುನಾವಣಾಧಿಕಾರಿ ರೇಣುಕಾ ತಿಳಿಸಿದ್ದಾರೆ.‌

Share this Article
Leave a comment

Leave a Reply

Your email address will not be published. Required fields are marked *

error: Content is protected !!