ದಾವಣಗೆರೆ: ರೈಲ್ವೆ ಪೊಲೀಸರ ಭರ್ಜರಿ ಭೇಟಿ

Suddivijaya
Suddivijaya September 6, 2023
Updated 2023/09/06 at 2:55 AM

ಸುದ್ದಿವಿಜಯ, ದಾವಣಗೆರೆ: ಮಹಾನಗರ ರೈಲ್ವೇ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ಕಳುವಾಗಿದ್ದ 34 ಗ್ರಾಂ ತೂಕದ ಬಂಗಾರದ 01 ಕೈ ಉಂಗುರ ಮತ್ತು 03 ಬಂಗಾರದ ಬಳೆಗಳು ಮತ್ತು ಒಂದು ಐಫೆÇೀನ್ ಮೊಬೈಲ್  ಫೋನ್ ಸೇರಿ 2.16 ಲಕ್ಷ ರೂ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಆಟೋ ಡ್ರೈವರ್ ಸಲ್ಮಾನ್ @ಬಚ್ಚೆ @ಹಸೇನ್ ಶಿವಮೊಗ್ಗದ ಕೋಟೆ ಗಂಗೂರು ಗ್ರಾಮದವನಾಗಿದ್ದು ಈತನಿಂದ ಠಾಣಾ ಪ್ರಕರಣದಲ್ಲಿ ಕಳವಾಗಿದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಬೆಂಗಳೂರು ರೈಲ್ವೇ ಉಪ ವಿಭಾಗದ ಡಿವೈಎಸ್‍ಪಿ ರವಿಕುಮಾರ್ ಸೂಕ್ತ ಮಾರ್ಗದರ್ಶನದಲ್ಲಿ ಠಾಣಾ ಪ್ರಕರಣದ ತನಿಖಾಧಿಕಾರಿ ಕೆ.ಟಿ.ಅಣ್ಣಯ್ಯ, ಸಿಬ್ಬಂದಿ ಜಿ.ನಾಗರಾಜು, ದಿನೇಶ್, ಹರೀಶ್ ಡಿ, ಹನುಮಂತಪ್ಪ ಭಜಂತ್ರಿ, ಈರನಾಗಪ್ಪ, ಬಿ.ಎನ್.ಹಾಲೇಶ್, ಟಿ.ಆರ್. ಚೇತನ್ ಟಿ ಆರ್, ಹಾಲೇಶ್ ಬಿ ಜೆ, ತಿಪ್ಪೇಸ್ವಾಮಿ ಜಿ, ಸುನೀಲ್ ಆರ್, ಮಂಜುನಾಥ್ ಭೋವಿ, ಚೇತನ್ .ಬಿ .ಎನ್.

ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿರವರಾದ ಈಶ್ವರೇಗೌಡ, ಬರ್ಕತ್ ಅಲಿ, ಮತ್ತು ದಾವಣಗೆರೆ ನಗರದ ಸ್ಮಾರ್ಟ್ ಸಿಟಿ ಕಮಾಂಡೆಂಟ್ ಕಚೇರಿಯ ಸಿಬ್ಬಂದಿರವರಾದ ಮಾರುತಿ ಮತ್ತು ದೇವರಾಜ್

ಹಾಗೂ ದಾವಣಗೆರೆ ನಗರದ ಎಸ್. ಬಿ. ಐ ಮಂಡಿಪೇಟೆ ಬ್ರಾಂಚ್ ಬ್ಯಾಂಕ್ ಮ್ಯಾನೇಜರ್ ಅಮಿತ್ ಸಾಹು, ಸಾರಸ್ವತ ಬ್ಯಾಂಕ್ ಮ್ಯಾನೇಜ ನವೀನ್ ಕುಂದಾಪುರ, ಜಯಂತ್ ಪಾಟೀಲ್ ಇವರುಗಳ ತಾಂತ್ರಿಕ ಮಾಹಿತಿಯ ಆಧಾರದ ಮೇರೆಗೆ ಠಾಣಾ ಪ್ರಕರಣದಲ್ಲಿ ಕಳವಾಗಿದ್ದ ಕಳವು ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡುವಲ್ಲಿ ಯಶಸ್ವಿಯಾದ ದಾವಣಗೆರೆ ರೈಲ್ವೆ ಪೆÇಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೆÇಲೀಸ್ ಅಧೀಕ್ಷಕರಾದ ಐಪಿಎಸ್ ಎಸ್.ಕೆ.ಸೌಮ್ಯಲತಾ ಶ್ಲಾಘಿಗಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!