ಸುದ್ದಿವಿಜಯ, ದಾವಣಗೆರೆ: ನನ್ನ ಮೊಬೈಲ್‍ನಲ್ಲಿ ಮೇಸೆಜ್ ಬಿರ್ತಿಲ್ಲ. ಬ್ಯಾಲೆನ್ಸ್ ಚಕ್ ಮಾಡೋಕೂ ಆಗ್ತಿಲ್ಲ. ಸ್ವಲ್ಪ ನೋಡಿ ಚಕ್ ಮಾಡಪ್ಪ ಅಂತ ಮೊಬೈಲ್ ಕೊಟ್ಟದ್ದೇ ತಡ, ಅದನ್ನು ಸರಿಮಾಡುವುದಾಗಿ ನಂಬಿಸಿ ರೂ.1 ಲಕ್ಷ ವಂಚನೆ ಮಾಡಿರುವ ಘಟನೆ ತಾಲ್ಲೂಕಿನ ಆಲೂರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ರುದ್ರಾನಾಯ್ಕ್ ವಂಚನೆಗೆ ಒಳಗಾದವರು. ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ನಿಮಗೆ ಬ್ಯಾಂಕ್‍ನಿಂದ ಬರುವ ಎಸ್‍ಎಂಎಸ್‍ಗಳಲ್ಲಿ ತೊಂದರೆ ಇದ್ದು, ಅದನ್ನು ಸರಿ ಮಾಡುವುದಾಗಿ ಹೇಳಿ ಲಿಂಕ್ ಅನ್ನು ಕಳುಹಿಸಿದ್ದ.
ಆ ಲಿಂಕ್ ಅನ್ನು ತೆರೆದು ಅದರಲ್ಲಿ ಕೇಳಿದ್ದ ಮಾಹಿತಿಯನ್ನು ರುದ್ರಾನಾಯ್ಕ್ ನೀಡಿದ್ದರು. ಕೆಲ ದಿನಗಳ ನಂತರ ಅವರ ಎರಡು ಬ್ಯಾಂಕ್ ಖಾತೆಗಳಲ್ಲಿ ಒಂದು ಖಾತೆಯಿಂದ ? 59,000 ಹಾಗೂ ಇನ್ನೊಂದು ಖಾತೆಯಿಂದ ? 41,000 ಕಡಿತಗೊಂಡಿತ್ತು. ಈ ಸಂಬಂಧ ಅವರು ದಾವಣಗೆರೆಯ ಸಿಇಎನ್ ಅಪರಾಧ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಾರ್ವಜನಿಕರೇ ದಯಮಾಡಿ ಸೈಬರ್ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಯಾರಾದ್ರೂ ಒಟಿಪಿ , ಬ್ಯಾಂಕ್ ಆಧಾರ್ ಲಿಂಕ್ ಮಾಡಿಕೊಡ್ತಿನಿ, ಬ್ಯಾಂಕ್‍ನಿಂದ ಮ್ಯಾನೇಜರ್ ಕಾಲ್ ಮಾಡ್ತಿದ್ದೀನಿ ಎಂದು ಸುಳ್ಳು ಹೇಳಿ ಓಟಿಪಿ ಹೇಳಿ ಎಂದು ಕೇಳಿದ್ರೆ ದಯಮಾಡಿ ಪೊಲೀಸರಿಗೆ ಮಾಹಿತಿ ತಿಳಿಸಿ. ಇಲ್ಲ ಅಂದ್ರೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿ ಆಗುತ್ತೆ ಎಚ್ಚರ.