ಸುದ್ದಿವಿಜಯ,ದೆಹಲಿ:ಭತ್ತದ ಮೇಲಿನ ಬೆಂಬಲ ಬೆಲೆಯನ್ನು 2023-24ನೇ ಬೆಳೆ ವರ್ಷಕ್ಕೆ ಪ್ರತಿ ಕ್ವಿಂಟಲ್‍ಗೆ 143 ಹೆಚ್ಚಿಸಲಾಗಿದೆ. ಇದರಿಂದಾಗಿ ಭತ್ತದ ಎಂಎಸ್‍ಪಿ ಪ್ರತಿ ಕ್ವಿಂಟಲ್‍ಗೆ 2,183 ರೂಗೆ ಏರಿಕೆಯಾಗಿದೆ. ಈ ಏರಿಕೆಯು ಒಂದು ದಶಕದ ಅವಧಿಯಲ್ಲಿ ಆಗಿರುವ ಎರಡನೇ ಅತಿ ಹೆಚ್ಚಿನ ಏರಿಕೆ. ಈ ಹಿಂದೆ 2018-19ರಲ್ಲಿ ಕ್ವಿಂಟಲ್‍ಗೆ ಎಂಎಸ್‍ಪಿಯನ್ನು 200ರೂ ಗೆ ಹೆಚ್ಚಿಸಲಾಗಿತ್ತು.
ಕೇಂದ್ರ ಸರಕಾರದ ಬೆಲೆ ಸಲಹಾ ಸಂಸ್ಥೆಯಾಗಿರುವ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಶಿಫಾರಸ್ಸುಗಳನ್ನು ಆಧರಿಸಿ ಕಾಲಕಾಲಕ್ಕೆ ಎಂಎಸ್‍ಪಿ ನಿಗದಿಪಡಿಸಲಾಗುತ್ತಿದೆ. ಈ ಬಾರಿಯ ಮುಂಗಾರು ಬೆಳೆಗೆ ನಿಗದಿಪಡಿಸಿರುವ ಎಂಎಸ್‍ಪಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಗಿರಷ್ಠ ಮಟ್ಟದ್ದಾಗಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
ಹೆಸರು ಕಾಳು ಎಂಎಸ್‍ಪಿ ಯನ್ನು 2023-24ನೇ ಬೆಳೆ ವರ್ಷಕ್ಕೆ ಗರಿಷ್ಠ ಶೇ.10.4 ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಪ್ರತಿ ಕ್ವಿಂಟಲ್ ಎಂಎಸ್‍ಪಿ 8,558ಕ್ಕೆ ಹೆಚ್ಚಳವಾಗಿದೆ. ಕಳೆದ ಬಾರಿ ಇದು ಕ್ವಿಂಟಲ್‍ಗೆ 7755 ಇತ್ತು.
ಊಟದ ಜೋಳ (ಹೈಬ್ರಿಟ್) ಮಾಲದಂಡೆ ಜೋಳದ ಎಂಎಸ್‍ಪಿಯನ್ನು ಕ್ರಮವಾಗಿ ಶೇ.7 ಮತ್ತು 7085ರಷ್ಟು ಹೆಚ್ಚಿಸಲಾಗಿದೆ. ಮೆಕ್ಕೆಜೋಳ ಮೇಲಿನ ಎಂಎಸ್‍ಪಿಯನ್ನು ಶೇ.65.ರಷ್ಟು ಏರಿಕೆ ಮಾಡಲಾಗಿದ್ದೆ. ಹೀಗಾಗಿ 2,090ಕ್ಕೆ ತಲುಒಇದೆ. ರಾಗಿ ಮೇಲಿನ ಎಂಎಸ್‍ಪಿ ಶೇ.7.49ರಷ್ಟು ಹೆಚ್ಚಾಗಿ 3,846ಕ್ಕೆ ತಲುಪಿದೆ.
ರೈತರು ಭತ್ತವನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವಂತೆ ಉತ್ತೇಜನ ನೀಡಲು ಮತ್ತು ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧರಕ್ಕೆ ಬರಲಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ತಿಳಿಸಿದೆ. 2023-24ನೇ ಮುಂಗಾರು ಬೆಳೆಗಳಿಗೆ ಎಂಎಸ್‍ಪಿಯನ್ನು ಶೇ.5.3ರಿಂದ 10.35ರವರೆಗೆ ಹೆಚ್ಚಿಸಲಾಗಿದೆ. ಬೆಲೆಯ ಲೆಕ್ಕದಲ್ಲಿ ಕ್ವಿಂಟಲ್‍ಗೆ 128 ರಿಂದ 805ರವರೆಗೆ ಏರಿಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಎಂಎಸ್‍ಪಿ ಹೆಚ್ಚಿಸಲು ಒಪ್ಪಿಗೆ ನೀಡಿದೆ.