Suddivijaya|Kannada News|31-05-2023
ಸುದ್ದಿವಿಜಯ ಜಗಳೂರು.ಸರ್ಕಾರಿ ಶಾಲೆಗಳ ಉಳುವಿಗಾಗಿ ಸರ್ಕಾರ ಹತ್ತಾರು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಚೆನ್ನಾಗಿ ಅಭ್ಯಸಿಸಬೇಕೆಂದು ಎಸ್ ಡಿ ಎಂ ಸಿ ಅಧ್ಯಕ್ಷ ಸಂತೋಷ್ ಹೇಳಿದರು.
ತಾಲೂಕಿನ ಗುರುಸಿದ್ದನಗೌಡ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಬಡವರು, ಹಿಂದುಳಿದವ ವರ್ಗದ ಮಕ್ಕಳೆ ಹೆಚ್ಚಾಗಿ ಅಭ್ಯಾಸ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸಬಲರು ಖಾಸಗಿ ಶಾಲೆಗಳನ್ನು ಹೆಚ್ಚು ಶುಲ್ಕು ಕಟ್ಟಿ ಓದಿಸುತ್ತಾರೆ. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಸಾಧನೆ ಮಾಡಿದ್ದಾರೆ. ಹಾಗಾಗಿ ಪಾಲಕರು ಖಾಸಗಿ ಶಾಲೆಯ ವ್ಯಾಮೋಹ ಬಿಡಬೇಕು ಎಂದು ಸಲಹೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಕೆ.ಎಸ್. ರವಿಕುಮಾರ್ಮಾತನಾಡಿ , ಸರ್ಕಾರಿ ಶಾಲೆಗಳಲ್ಲಿ ಪಠ್ಯ ಪುಸ್ತಕ, ಶೂ ಸಾಕ್ಸ್, ಸಮವಸ್ತ್ರ ಶಿಕ್ಷಣ ಉಚಿತವಾಗಿ ದೊರೆಯುತ್ತಿದ್ದು, ಮಕ್ಕಳು ಸಂತಸದಿಂದ ಕಲಿಯಲು ಶಿಶು ಸ್ನೇಹಿ ಪರಿಸರವಿದ್ದು ಕಲಿಕೆಗೆ ಪೂರಕವಾಗಿದೆ ಎಂದರು.
ಶಾಲಾ ಶಿಕ್ಷಕರಾದ ಸಮೀರಾಖಾನಂ ಮಾತನಾಡಿ, 6 ವರ್ಷದ ಎಲ್ಲಾ ಮಕ್ಕಳು ತಪ್ಪದೆ ಶಾಲೆಗೆ ಹಾಜರಾಗಲು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಅರ್ಚನಾ ಹಾಗೂ ಎಸ್ ಡಿ ಎಂ ಸಿ ಸದಸ್ಯೆ ನೀಲಾಂಬಿಕೆ ಅವರು ಬಣ ಬಣ್ಣದ ರಂಗೋಲಿ ಬಿಡಿಸಿ ಶಾಲೆಗೆ ಮೆರಗು ತಂದರು.
ಶಾಲಾ ಮಕ್ಕಳನ್ನು ಹೂ ಗುಚ್ಛ ನೀಡಿ ಬರಮಾಡಿಕೊಂಡರು.
ಶಾಲೆಯ ಮಕ್ಕಳಿಗೆ ಸಿಹಿಯೂಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಶಿಕ್ಷಣಾಭಿಮಾನಿಗಳಾದ ಚಂದ್ರಪ್ಪ, ನಾಗೇಂದ್ರಪ್ಪ , ಅಂಗನವಾಡಿ ಸಹಾಯಕಿ ಬಾಲಮ್ಮ ಸೇರಿದಂತೆ ಮತ್ತಿತರಿದ್ದರು.
ಜಗಳೂರು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ, ರಜೆ ಮುಗಿಸಿ ಶಾಲೆಗೆ ಬಂದ ಮಕ್ಕಳಿಗೆ ಅದ್ದೂರಿ ಸ್ವಾಗತ, ಮಕ್ಕಳಿಗೆ ಸಹಿ ಹಂಚಿ ಸಂಭ್ರಮ