ಸುದ್ದಿವಿಜಯ, ಜಗಳೂರು: ದಾವಣಗೆರೆಯಲ್ಲಿ ಇದೇ ಡಿ.23 ಮತ್ತು 24 ರಂದು ಎರಡು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಕಾರ್ಯಕ್ರಮಕ್ಕೆ 22 ಗ್ರಾಪಂಗಳಿಂದ ತಲಾ ಒಂದೊಂದು ಬಸ್ ಮತ್ತು ಪಟ್ಟಣದಲ್ಲಿ 4 ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವೀರಶೈವ-ಲಿಂಗಾಯತ ತಾ.ಅಧ್ಯಕ್ಷ ಶಿವನಗೌಡ್ರು ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 24ನೇ ಮಹಾಸಭಾ ಕಾರ್ಯಕ್ರಮಕ್ಕೆ ಜಗಳೂರು ತಾಲೂಕಿನಿಂದ 25ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದರೆ 50 ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ತಾಲೂಕು ವೀರಶೈವ ಲಿಂಗಾಯ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.
ಕಾರ್ಯದರ್ಶಿ ಹಾಗೂ ಪಪಂ ಮಾಜಿ ಅಧ್ಯಕ್ಷ ವೈ.ಎನ್.ಮಂಜುನಾಥ್ ಮಾತನಾಡಿ, ಬರುವ ಎಲ್ಲ ಜನರಿಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಮಹಾಸಭಾ ಕಾರ್ಯಕ್ರಮ ಯಶಸ್ವಿಯಾಗಲು ಸಮುದಾಯದಿಂದ ಸಾಕಷ್ಟು ಜನ ಬರಬೇಕು ಎಂದು ಮನವಿ ಮಾಡಿದರು.
ಮುಖಂಡ ಎಂ.ಎಸ್.ಪಾಟೀಲ್ ಮಾತನಾಡಿ, ವೀರಶೈವ-ಲಿಂಗಾಯತ ಎಲ್ಲ ಒಳ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಹಕ್ಕೊತ್ತಾಯ ಮಾಡುವ ಉದ್ದೇಶವಾಗಿದ್ದು ಸಮುದಾಯದಿಂದ ನಿರೀಕ್ಷೆಗೂ ಮೀರಿ ಜನ ಆಗಮಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಮಹಿಳಾ ಅಧ್ಯಕ್ಷೆ ರೇಖಾ ಶಿವಕುಮಾರ್, ಗೋಡೆ ಪ್ರಕಾಶ್, ಮುಸ್ಟೂರು ಪ್ರಕಾಶ್, ನಾಗರಾಜ್, ದೊಣೆಹಳ್ಳಿ ಮುಸ್ಟೂರಪ್ಪ, ಮೆದಗಿನಕೆರೆ ವೀರೇಂದ್ರ ಪಾಟೀಲ್ ಸೇರಿದಂತೆ ಅನೇಕರು ಇದ್ದರು.