ಸುದ್ದಿವಿಜಯ ಜಗಳೂರು.
ಕೋವಿಡ್ ನಲ್ಲಿ ರಾಜ್ಯದ 107 ಪತ್ರಕರ್ತರು ಮೃತಪಟ್ಟಿದ್ದು, ಇದರಲ್ಲಿ 55 ಮಂದಿ ಪತ್ರಕರ್ತರಿಗೆ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಹಣವನ್ನು ಕೊಡಿಸಲಾಗಿದೆ ಎಂದು ಕ.ರಾ.ಕಾ.ನಿ.ಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಕಛೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
1892 ಡಿ.ವಿ ಗುಂಡಪ್ಪ ಅವರು ಹುಟ್ಟು ಹಾಕಿದ ಸಂಘವಾಗಿದ್ದು ಶತಮಾನೋತ್ಸವದ ಹೊಸ್ತಿಲಲ್ಲಿದೆ. ರಾಜ್ಯದ ಉದ್ದಗಲಕ್ಕೂ ಸದಸ್ಯರನ್ನು ಹೊಂದಿದ ಬೃಹತ್ ಸಂಘಟನೆ ಯಾಗಿದ್ದು, ದೇಶದ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೊಂದು ವೃತ್ತಿಪರ ಸಂಘಟನೆಯಾಗಿದೆ, ಕೆಲವರು ಸಂಘಟನೆಯ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ವೃತ್ತಿಗೆ ಸಂಬಂಧಪಟ್ಟವರು ಮಾತ್ರ ಇರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.
ಕೋವಿಡ್ ನಲ್ಲಿ ಮಾದ್ಯಮ ಸಂಸ್ಥೆಗಳೇ ಮುಚ್ಚಿ ಹೋಗುವ ಹಂತಕ್ಕೆ ಬಂದಿತ್ತು. 37 ಲಕ್ಷ ಠೇವಣಿ ಮಾಡಲಾಗಿದೆ. ಆಪತ್ದ್ಭಾಂಧವ ಗ್ರೂಫ್ ಕೆಡಬ್ಲ್ಯುಜೆಮಾಡಿದೆ. ಇದರ ಮೂಲಕ ಕಷ್ಟದಲ್ಲಿರುವ ಪತ್ರಕರ್ತರ ಕುಟುಂಬಗಳಿಗೆ ನೆರವು ನೀಡಲಾಗಿದೆ ಎಂದರು.
ಪತ್ರಿಕೆಗಳ ಜಾಹಿರಾತು ಬಿಲ್ 56ಕೋ ಬಾಕಿ ಇತ್ತು. ಬಿಎಸ್ ವೈ ಅವರಿಗೆ ಮನವರಿಕೆ ಮಾಡಿಕೊಟ್ಟು ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡಿದ ಕೀರ್ತಿ ನಮ್ಮ ಕೆಡಬ್ಲ್ಯುಜೆ ಸಲ್ಲುತ್ತದೆ ಎಂದರು.
120ಕ್ಕೂ ಹೆಚ್ಚು ತಾಲೂಕುಗಳಲ್ಲಿ ಸಂಘದ ಕಚೇರಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಲೋಕೇಶ್ ಮಾತನಾಡಿ, 92ನೇ ವರ್ಷ ತುಂಬಿ ನೂರು ವರ್ಷದ ಹೊಸ್ತಿಲಲ್ಲಿದೆ. 8ಸಾವಿರ ಸದಸ್ಯರನ್ನು ಹೊಂದಿರುವ ದೊಡ್ಡ ಸಂಘವಾಗಿದೆ ಎಂದರು.
ಯಾವುದೇ ಸಮಸ್ಯೆ ಇದ್ದರು ಶಿವಾನಂದ ತಗಡೂರು ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಾಗಿದ್ದಾರೆ. ಕೋವಿಡ್ ಸಂದರ್ಭ ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಿದ್ದಾರೆ ಎಂದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಏಕಾಂತಪ್ಪ ಮಾತನಾಡಿ, ಜಿಲ್ಲೆಯ ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಅನಾರೋಗ್ಯದಲ್ಲಿದ್ದಾರೆ ಅವರ ಮಾಹಿತಿ ನೀಡಲಾಗುವುದು ಸರ್ಕಾರದಿಂದ ಪರಿಹಾರ ಕೊಡಿಸುವ ಕೆಲಸ ಮಾಡಬೇಕು ಎಂದು ರಾಜ್ಯಾಧ್ಯಕ್ಣರಿಗೆ ಮನವಿ ಮಾಡಿದರು.
ಕಾ.ನಿ.ಪ. ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮಾತನಾಡಿದರು.
ಈ ಸಂದರ್ಭದಲ್ಲಿ ಕಾ.ನಿ.ಪ. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕುರುದ್ದೀನ್, ರಾಜ್ಯ ಸಮಿತಿ ಸದಸ್ಯ ಚಂದ್ರಪ್ಪ, ದೊಡ್ಡಮನಿ ಬಸವರಾಜ್ ಇದ್ದರು.