ಸುದ್ದಿವಿಜಯ, ಜಗಳೂರು: ಅಮೃತ ಸರೋವರ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿಯೂ 75 ಕೆರೆಗಳನ್ನು ಅಮೃತ ಸರೋವರಗಳನ್ನಾಗಿ ರೂಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಹೀಗಾಗಿ ಗಡಿಗ್ರಾಮ ಸಿದ್ದಿಹಳ್ಳಿಯಲ್ಲಿ ನಿರ್ಮಾಣವಾಗಿರುವ ಅಮೃತ ಸರೋವರ ರೈತರಿಗೆ ವರದಾನವಾಗಲಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಉಪಜಂಟಿ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಹೇಳಿದರು.
ಅಮೃತ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಎಂಜಿಎನ್‍ಆರ್‍ಇಜಿಎ ಅಡಿಯಲ್ಲಿ ತಾಲೂಕಿನ ಗಡಿ ಗ್ರಾಪಂ ಮುಸ್ಟೂರಿನ ಸಿದ್ದಿಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದ್ದ 8.20 ಲಕ್ಷ ವೆಚ್ಚದ ಅಮೃತ ಸರೋವರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಕೃಷಿ ಇಲಾಖೆಯಲ್ಲಿ ಸಾಕಷ್ಟು ನೂತನ ಯೋಜನೆಗಳು ಜಾರಿಗೆ ಬಂದಿವೆ. ಅದರಲ್ಲಿ ಇಲಾಖೆಯಲ್ಲಿ ಕೃಷಿ ಯಾಂತ್ರಿಕರಣ, ತುಂತುರು ನೀರಾವರಿ ಯೋಜನೆ, ರಾಷ್ಟ್ರೀಯ ಆಹಾರಭದ್ರತಾ ಯೋಜನೆ.
ಮಣ್ಣಿನ ಸತ್ವಹೆಚ್ಚಿಸುವ ಕಾರ್ಯಕ್ರಮಗಳು ಜಾರಿಯಲ್ಲಿವೆ. ರೈತ ಶಕ್ತಿಯೋಜನೆ, ರೈತ ವಿದ್ಯಾ ನಿಧಿ ಯೋಜನೆಗಳಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಲು ನಮ್ಮ ಇಲಾಖೆಯ ಕೆಲಸವಾಗಿದೆ. ಅಮೃತ ಸರೋವರವನ್ನು ಹಾಳು ಮಾಡದಂತೆ ಸದುಪಯೋಗ ಪಡಿಸಿಕೊಳ್ಳಿ ಎಂದು ರೈತರಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಲ ನಿರ್ದೇಶಕ ಮಿಥುನ್ ಕಿಮಾವತ್ ಮಾತನಾಡಿ, ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿವೆ. ಸರಕಾರ ಜಾರಿಗೆ ತಂದ ಯೋಜನೆಗಳನ್ನು ಅವರ ಅಭಿವೃದ್ಧಿಗಾಗಿಯೇ ಬಳಕೆಯಾಗುತ್ತಿವೆ. ಅಮೃತ ಸರೋವರ ನಿರ್ಮಾಣದಿಂದ ದನಕರುಗಳಿಗೆ ನೀರು ಮತ್ತು ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದರು.
ಅಮೃತ ಸರೋವರದ ಮುಂದೆ 75ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಮೂಡಲಮಾಚಿಕೆರೆ ಗ್ರಾಮದ ಮಾಜಿ ಸೈನಿಕ ಪ್ರಸನ್ನಕುಮಾರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಸ್ಟೂರು ಗ್ರಾಪಂ ಅಧ್ಯಕ್ಷರಾದ ಶ್ರುತಿ ಪ್ರಕಾಶ್, ಉಪಾಧ್ಯಕ್ಷ ಸಾಕಮ್ಮ, ಕೃಷಿ ಅಧಿಕಾರಿಗಳಾದ ಗಿರೀಶ್, ಕೃಷ್ಣಪ್ಪ, ಬೀರಪ್ಪ, ಹರ್ಷ, ರಾಕೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.