ಸುದ್ದಿವಿಜಯ,ಜಗಳೂರು: ಪಟ್ಟಣದ ಆಟೋ ಚಾಲಕರು ಪ್ರಯಾಣಿಕರಿಂದ ಸಂಯಮದಿಂದ ವರ್ತಿಸಬೇಕು. ಕಾನೂನು ಪಾಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಗಳೂರು ಪಟ್ಟಣದ ಠಾಣೆಯ ಪಿಎಸ್‍ಐ ಮಹೇಶ್ ಹೊಸಪೇಟ ಕಾನೂನು ಪಾಠ ಹೇಳಿದರು.
ಪಟ್ಟಣದ ಬಯಲುರಂಗ ಮಂದಿರದಲ್ಲಿ ಶುಕ್ರವಾರ ನಡೆದ ಆಟೋಚಾಲಕರಿಗೆ ಕಾನೂನು ಪಾರಿಪಾಲನಾ ಸಭೆ ಕರೆದು ಆಟೋ ಚಾಲಕರಿಗೆ ಕಾನೂನು ಪಾಲಿಸುವಂತೆ ಸೂಚನೆ ನೀಡಿದರು. ರಾತ್ರಿವೇಳೆ ಆಟೋ ಚಾಲನೆ ಮಾಡುವ ಆಟೋ ಚಾಲಕರು ಠಾಣೆಗೆ ನಿಮ್ಮ ದಾಖಲೆಗಳನ್ನು ಸಲ್ಲಿಸಬೇಕು.
ಡ್ರೈವಿಂಗ್ ಲೈಸೆನ್ಸ್, ಇಶ್ಯೂರೆನ್ಸ್ ಮತ್ತಿತರ ದಾಖಲೆಗಳಿಲ್ಲದೇ ಆಟೋ ಓಡಿಸಿದರೆ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೋ ಚಾಲಕರು ಹೆಚ್ಚು ಮಕ್ಕಳನ್ನು ಕೂರಿಸಿಕೊಂಡು ಕರೆದೊಯ್ದರೆ ಅಂತಹ ಆಟೋ ಚಾಲಕರ ವಿರುದ್ಧ ಕೇಸ್ ದಾಖಲಿಸಲಾಗುವುದು. ಹಳ್ಳಿಗಳಿಂದ ಬರುವ ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುವ ಆರೋಪ ಬಂದಿದೆ.
ಅಂತಹ ಆಟೋ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ನಿಗದಿ ಪಡಿಸಿದ ಆಟೋ ನಿಲ್ದಾಣದಲ್ಲೇ ಆಟೋಗಳನ್ನು ನಿಲ್ಲಿಸಬೇಕು. ಅತಿವೇಗದಲ್ಲಿ ಚಾಲನೆ ಮಾಡಿ, ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಕೇಸ್‍ದಾಖಲಿಸುವ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಟ್ಟಣದ 80ಕ್ಕೂ ಹೆಚ್ಚು ಆಟೋ ಚಾಲಕರು ಭಾಗಿಯಾಗಿ ಪಿಎಸ್‍ಐ ಮಹಾಂತೇಶ್ ಹೊಸಪೇಟ ಅವರ ಕಾನೂನು ಪಾಲನೆ ಬಗ್ಗೆ ಮತ್ತು ಅವರ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ಆನಂದ್ ಬಸವರಾಜ್, ಸಂಚಾರಿ ಪೊಲೀಸ್ ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಗಳೂರು ಪಟ್ಟಣದ ಬಯಲು ರಂಗ ಮಂದಿರದಲ್ಲಿ ಆಟೋಚಲಾಕರ ಸಭೆ ಕರೆದು ಪಿಎಸ್‍ಐ ಮಹೇಶ್ ಹೊಸಪೇಟ ಸಂಚಾರಿ ನಿಯಮಗಳ ಪಾಲಿಸಲು ಸೂಚಿಸಿದರು.