ಜಗಳೂರು: ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ ಪತ್ರದ ವಿರುದ್ದ ಪ್ರತಿಭಟನೆ!

Suddivijaya
Suddivijaya November 22, 2022
Updated 2022/11/22 at 4:17 AM

ಸುದ್ದಿವಿಜಯ, ಜಗಳೂರು: ಬೇಡ ಜಂಗಮರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡಿರುವುದನ್ನು ವಿರೋಧಿಸಿ  ಅಧಿಕಾರಿಗಳ ವಿರುದ್ದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಇಲ್ಲಿನ ತಾಲೂಕು ಕಚೇರಿಗೆ ಆಗಮಿಸಿದ ದಸಂಸ ಕಾರ್ಯಕರ್ತರು ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇಲಾಖೆಯಿಂದ ಎಸ್ಸಿ ಜಾತಿ ಪ್ರಮಾಣಪತ್ರ ನೀಡಿರುವುದು ಬೆಳಕಿಗೆ ಬಂದಿದೆ.

ಇದು ಕಾನೂನು ಬಾಹಿರವಾಗಿದೆ. ಅನುಷಾ ಅವರಿಗೆ ಈಗಾಗಲೇ ನೀಡಿದ ಎಸ್ಸಿ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿ ಮುಂಬರುವ ದಿನಗಳಲ್ಲಿ ಎಸ್ಸಿ ಜಾತಿ ಪ್ರಮಾಣಪತ್ರವನ್ನು ಬೇಡ ಜಂಗಮರಿಗೆ ನೀಡದಂತೆ ತಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಸೂಚನೆ ನೀಡಬೇಕು, ಎಸ್ಸಿ ಜಾತಿ ಪ್ರಮಾಣಪತ್ರ ನೀಡಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ನೀಡಿದ ಪ್ರಮಾಣಪತ್ರವನ್ನು ಹಿಂಪಡೆದು ಎಸ್ಸಿ ಜನಾಂಗದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ತಹಸೀಲ್ದಾರ್ ಸಂತೋಷ್‍ಕುಮಾರ್ ಅವರಿಗೆ ಮನವಿ ಮಾಡಿದರು.

ಪ.ಜಾತಿಯಲ್ಲಿ ನೂರಾರು ಉಪ ಜಾತಿಗಳಿವೆ. ಇವರಿಗೆ ಸಕರಾರದಿಂದ ಸಿಗಬೇಕಾದ ಸೌಕರ್ಯಗಳು ಸಿಗುತ್ತಿಲ್ಲ. ಉನ್ನತ ಸಮಾದಲ್ಲಿರುವ ಬೇಡ ಜಂಗಮರಿಗೆ ಪ. ಜಾತಿ ಪ್ರಮಾಣ ಪತ್ರ ನೀಡುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

  ಜಗಳೂರಿನಲ್ಲಿ ಸೋಮವಾರ ಬೇಡ ಜಂಗಮರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡಿರುವುದನ್ನು ವಿರೋಧಿಸಿ ಅಧಿಕಾರಿಗಳ ವಿರುದ್ದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
  ಜಗಳೂರಿನಲ್ಲಿ ಸೋಮವಾರ ಬೇಡ ಜಂಗಮರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡಿರುವುದನ್ನು ವಿರೋಧಿಸಿ ಅಧಿಕಾರಿಗಳ ವಿರುದ್ದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಪಟ್ಟಣದ ಶರಣಬಸವೇಶ್ವರ ಬಡಾವಣೆಯ ಪಿ.ಎಂ.ಅನುಷಾ ತಂದೆ ಚಂದ್ರಶೇಖರಯ್ಯ ಎಂಬುವವರಿಗೆ ಕಂದಾಯ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಯಾಗಬೇಕಿದ್ದು ಪಜಾತಿ ಪವರ್ಗದವರಿಗೆ ಭೂಮಿ ಮಂಜೂರಾತಿ ಮಾಡಿದ ಈ ಭೂಮಿಯನ್ನು ಪರಭಾರೆ ಮಾಡಬಾರದೆಂಬ ನಿಯಮವಿದ್ದರೂ ಸಹ ಬಡವರಿಗೆ ದೊರೆತ ಜಮೀನನ್ನು ಉಳ್ಳವರು ಹಣದಾಸೆ ತೋರಿಸಿ ಖರೀದಿಸಿ ಬೀದಿ ಪಾಲು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಣವಂತರು ಖರೀದಿಸಿದ ಇಂತಹ ಜಮೀನುಗಳನ್ನು ಹಿಂಪಡೆಯಲು ಪಿಟಿಸಿಎಲ್ ಕಾಯ್ದೆಯಡಿ ಅವಕಾಶ ಇದ್ದರೂ ಸಹ ಇತ್ತೀಚಿಗೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯದ ಹೈಕೋರ್ಟ್‍ಗಳಲ್ಲಿ ಪಿಟಿಸಿಎಲ್ ಕೇಸುಗಳು ವಜಾಗೊಳ್ಳುತ್ತಿವೆ, ಆದ್ದರಿಂದ ಪಿಟಿಸಿಎಲ್ ಕಾಯ್ದೆ ಪೂರ್ವನ್ವಯವಾಗುವಂತೆ ಮುಖ್ಯಮಂತ್ರಿಗಳು, ಕಂದಾಯ ಮಂತ್ರಿಗಳು ತಿದ್ದುಪಡಿ ತಂದು ದಲಿತರಿಗೆ ಭೂ ಹಕ್ಕು ಹೊಂದಲು ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಜಿ.ಎಚ್.ಶಂಭುಲಿಂಗಪ್ಪ, ತಾಲೂಕಾಧ್ಯಕ್ಷರಾದ ಮಲ್ಲೇಶ್ ಪೂಜಾರ್, ಮಾಚಿಕೆರೆ ಸತೀಶ್, ಮುಖಂಡರಾದ ಗೌರಿಪುರ ಕುಬೇರಪ್ಪ, ಓಬಣ್ಣ, ಪೂಜಾರಿ ಸಿದ್ದಪ್ಪ, ರಾಜಶೇಖರ್, ಧನ್ಯಕುಮಾರ್, ಬಿ.ಕುಮಾರ್, ಕುಬೇಂದ್ರಪ್ಪ, ಶಿವಮೂರ್ತಿ, ವೆಂಕಟೇಶ್, ಬಿ.ಉಮೇಶ್, ಶಿವಣ್ಣ, ನಿಂಗಪ್ಪ, ಚಂದ್ರಪ್ಪ, ಮಂಜುನಾಥ್, ಹನುಮಂತಪ್ಪ, ರಂಗಪ್ಪ, ಪ್ರಹ್ಲಾದ್, ದುರುಗಪ್ಪ, ಗೋವಿಂದ್ ಸೇರಿದಂತೆ ಮತ್ತಿತರರು ಹಾಜರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!