ಬಿದರಕೆರೆ ಎಫ್‍ಪಿಒ ಮೂಲಕ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ!

Suddivijaya
Suddivijaya November 18, 2022
Updated 2022/11/18 at 3:10 PM

ಸುದ್ದಿವಿಜಯ, ಜಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅಮೃತ ರೈತ ಉತ್ಪಾದಕ ಕಂಪನಿಗಳಲ್ಲಿ ಮುಂಚೂಣೆಯಲ್ಲಿರುವ ಜಗಳೂರು ತಾಲೂಕಿನ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ರೈತರಿಂದ ನೇರವಾಗಿ ಸರಕಾರ ನಿಗದಿಪಡಿಸಿದ ದರಕ್ಕೆ ಮೆಕ್ಕೆಜೋಳ ಖರೀದಿ ಆರಂಭಿಸಿದೆ.

ರೈತರು ಮಧ್ಯವರ್ತಿಗಳ ಕಪಿಮುಷ್ಠಿಯಿಂದ ತಪ್ಪಿಸುವ ಉದ್ದೇಶದಿಂದ ಮತ್ತು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ದೃಷ್ಟಿಯಿಂದ ಬಿದರಕೆರೆ, ಕಲ್ಲೇದೇವರಪುರ, ತೋರಣಗಟ್ಟೆ, ಗುತ್ತಿದುರ್ಗ ಮತ್ತು ಬಿಸ್ತುವಳ್ಳಿ ಗ್ರಾಪಂ ಒಳಗೊಂಡಂತೆ 35 ಹಳ್ಳಿಗಳ ರೈತರಿಗೆ ಈ ಕಂಪನಿ ಸಹಕಾರಿಯಾಗಿದೆ.

ಸೂಕ್ತಬೆಲೆ: ರೈತರಿದ್ದಲ್ಲಿ ನೇರವಾಗಿ ಮೆಕ್ಕೆಜೋಳ ಖರೀದಿಸುತ್ತಿದ್ದು ನಿಗದಿತ ದರ ನೀಡುತ್ತಿರುವುದರಿಂದ ರೈತರು ಆರ್ಥಿಕವಾಗಿ ಲಾಭವಾಗಲಿದೆ. ಸಾಗಾಣಿಕೆ ವೆಚ್ಚ, ಅಮಾಲಿ, ಕಮಿಷನ್ ಇಲ್ಲದೇ ಮೆಕ್ಕೆಜೋಳ ಖರೀದಿಸಲಾಗಿದೆ. ರಾಜ್ಯದ ಪ್ರತಿಷ್ಠಿತ ಮೆಕ್ಕೆಜೋಳ ಖರೀದಿ ಕಂಪನಿಗಳಾದ ಡಿಜಿಟಲ್ ಸಾಥಿ, ಕಾರ್ಗಿಲ್ ಮತ್ತು ಆರೈಕೆ ಆಗ್ರೋ ಇಂಡಸ್ಟ್ರೀಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿದರಕೆರೆ ಎಫ್‍ಪಿಒ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್ ತಿಳಿಸಿದರು.

ಜಗಳೂರು ತಾಲೂಕಿನ ಬಿದರಕೆರೆ ಎಫ್‍ಪಿಒ ದಿಂದ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ ಮಾಡಲಾಯಿತು.
ಜಗಳೂರು ತಾಲೂಕಿನ ಬಿದರಕೆರೆ ಎಫ್‍ಪಿಒ ದಿಂದ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ ಮಾಡಲಾಯಿತು.

ಬಿದರಕೆರೆ, ಕಟ್ಟಿಗೆಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಉತ್ಕøಷ್ಟ ಮಟ್ಟದ ಮೆಕ್ಕೆಜೊಳ ಬೆಳೆದಿದ್ದು ಈಗಾಗಲೇ ಒಂದೇ ದಿನ 12 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೆಕ್ಕೆಜೋಳ ಖರೀದಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ಟಾಟ್‍ಅಪ್ ಯೋಜನೆಯನ್ನು ಅರ್ಥಿಮಾಡಿಕೊಳ್ಳಬೇಕು. ತಾವು ಬೆಳೆದ ಉತ್ಪನ್ನಗಳಿಗೆ ಉತ್ತಮ ದರ ಸಿಗಬೇಕಾದರೆ ಮೊದಲು ಮಧ್ಯವರ್ತಿಗಳ ಕಪಿಮುಷ್ಟಿಯಿಂದ ತಾವು ಹೊರಬರಬೇಕು. ಎಫ್‍ಪಿಓಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರೆ ನೇರವಾಗಿ ರೈತರಿಗೆ ಲಾಭವಾಗಲಿದೆ ಎಂದು ಅವರು ತಿಳಿಸಿದರು.

ಮೆಕ್ಕೆಜೋಳಕ್ಕೆ ನ್ಯಾಯಯುತ ಬೆಲೆ ಕೊಡಿಸುವ ಜವಾಬ್ದಾರಿ
ಐಸಿಎಆರ್ ತಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲಿ 17 ಎಫ್‍ಪಿಒ ಆರಂಭ ಮತ್ತು ಮೂರು ವರ್ಷಗಳ ವರೆಗೆ ಕಂಪನಿಗಳ ಉಸ್ತುವಾರಿಯನ್ನು ರಾಜ್ಯ ಸರಕಾರ ನೀಡಿದೆ. ಈಗಾಗಲೇ ಬಿದರಕೆರೆ ಎಫ್‍ಪಿಒ 70 ಲಕ್ಷ ಇನ್‍ಪುಟ್ ಮತ್ತು 1 ಕೋಟಿಗೂ ಹೆಚ್ಚು ಔಟ್‍ಪುಟ್ ವ್ಯವಹಾರ ಮಾಡಿದೆ. ರೈತರು ಬೆಳೆದ ಮೆಕ್ಕೆಜೋಳಕ್ಕೆ ನ್ಯಾಯಯುತ ಬೆಲೆ ಕೊಡಿಸುವ ಜವಾಬ್ದಾರಿ ಈ ಕಂಪನಿಗಳ ಮೇಲಿದೆ. ಈ ಕಂಪನಿಗಳ ಮೂಲಕ ನೇರವಾಗಿ ಮಾರಾಟ ಮಾಡಿದರೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಎಫ್‍ಪಿಒ ಉಸ್ತುವಾರಿ ಕೆವಿಕೆ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ ತಿಳಿಸಿದರು.

ಜೆಎಲ್‍ಆರ್‍ಚಿತ್ರ4ಎ: ಜಗಳೂರು ತಾಲೂಕಿನ ಬಿದರಕೆರೆ ಎಫ್‍ಪಿಒ ದಿಂದ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ ಮಾಡಲಾಯಿತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!