ಸುದ್ದಿವಿಜಯ, ಜಗಳೂರು:ತಾಲೂಕಿನ ಬಿಳಿಚೋಡು ಗ್ರಾಮದ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.
ಡಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದರ ಹಿಂದೆ ಸಾವಿರಾರು ಜನರ ತ್ಯಾಗ,ಬಲಿದಾನವಿದೆ. ಅವರ ಹೋರಾಟವಿಲ್ಲದೆ ಹೋಗಿದ್ದರೇ ಈಗಲೂ ಬ್ರಿಟಿಷರ ಕಪಿಮುಷ್ಠಿಯಲ್ಲಿ ಬದುಕಬೇಕಾಗಿತ್ತು ಎಂದರು.
ಏಳು ದಶಕಗಳ ನಂತರ ಭಾರತ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಗೆ ಇಡಿ ದೇಶವಲ್ಲದೆ ಸಹೋದರ ದೇಶಗಳಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಟ ನಡೆಸಿ ಬೆಂಬಲಿಸಿದ್ದಾರೆ ಇದೊಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬ್ಯಾಂಕ್ ವ್ಯವಸ್ಥಾಪಕ ಕೆ.ಎಸ್ ಈಶ್ವರಪ್ಪ,ಸಿಬ್ಬಂದಿಗಳಾದ ಅಶೋಕ್,ಎನ್.ಪಾಟೀಲ್ ಸೇರಿದಂತೆ ಮತ್ತಿತರಿದ್ದರು.