ಸುದ್ದಿವಿಜಯ, ಜಗಳೂರು: ಪ್ರಸ್ತುತ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ್ದು, ಆಡಳಿತ ಪಕ್ಷದ ಮುಖಂಡರಿಗೆ ಇದೊಂದು ಆಶಾದಾಯಕ ಬಜೆಟ್ ಆಗಿದೆ. ಆದರೆ ವಿರೋಧ ಪಕ್ಷದ ಮುಖಂಡರಿಗೆ ನಿರಾಶಾದಾಯಕ ಬಜೆಟ್ ಆಗಿದೆ.ಆಯವ್ಯಯದ ಕುರಿತು ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಚ್.ಪಿ.ರಾಜೇಶ್ ಸುದ್ದಿವಿಜಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ರಾಜ್ಯದ ಜನತೆಯ ಅಭ್ಯುದಯಕ್ಕಾಗಿ ಮಂಡನೆಯಾಗಿದೆ. ಈ ಮುಂಗಡ ಪತ್ರದಲ್ಲಿ ಎಲ್ಲಾ ವರ್ಗದ ಜನರ ಹಿತ ಕಾಯುವ ಜನ ಸ್ನೇಹಿ ಬಜೆಟ್ ಇದಾಗಿದೆ.
ಸಂತ ಸೇವಾ ಲಾಲ್ ಅವರ ಜನ್ಮ ಸ್ಥಳವಾದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪವನ್ನು ಅಭಿವೃದ್ಧಿ ಪಡಿಸಲು 5 ಕೋಟಿ ರೂ, ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿರುವ ಷಹಾಜಿ ಮಹಾರಾಜ್ ಮಹರಾಜ್ ಸಮಾಧಿ ಸ್ಥಳವನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿಲು ಮುಂದಾಗಿದ್ದಾರೆ.
ಜೊತೆಗೆ ಸಾಮಾಜಿಕ, ಸಾಂಸ್ಕøತಿಕ, ಮೂಲ ಸೌಕರ್ಯ, ಮಹಿಳಾ ಕಲ್ಯಾಣ, ವಿದ್ಯಾರ್ಥಿನಿಯರಿಗೆ ಉಚಿತ ವಿದ್ಯುತ್ ಪಾಸ್ ಹೀಗೆ ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಪ್ರಗತಿಪರ ಮುಂದಾಲೋಚನೆಯ ಬಜೆಟ್ ಇದಾಗಿದೆ. ಕ್ಷೇತ್ರದ 57 ಕೆರೆ ತುಂಬಿಸುವ ಪ್ರಾಜಕ್ಟ್ ಈ ವರ್ಷವೇ ಮುಕ್ತಾಯಗೊಳಿಸುವ ಭರವಸೆಯನ್ನು ಸಿಎಂ ನಿಡಿದ್ದಾರೆ. ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಎಸ್.ವಿ.ರಾಮಚಂದ್ರ, ಶಾಸಕ
—
ನಿರಾಶಾದಾಯಕ ಬಜೆಟ್
ಅಭಿವೃದ್ಧಿಗೆ ಒತ್ತು ಕೊಡದೇ ಕೇವಲ ಚುನಾವಣೆಯನ್ನು ಉದ್ದೆಶವಾಗಿಟ್ಟುಕೊಂಡು ಮಂಡಿಸಿರುವ ಬಜೆಟ್ ಇದಾಗಿದೆ. ಗ್ರಾಮೀನ ಜನರ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತಹ ವಸ್ತು ಸ್ಥಿತಿ ಬಜೆಟ್ ಮಂಡಿಸಬೇಕಿತ್ತು. ಆದರೆ ಇದು ಜನ ಸಾಮಾನ್ಯರಿಗೆ ಮುಟ್ಟದ ಮುಂಗಡ ಪತ್ರವಾಗಿದೆ. ಬಜೆಟ್‍ನಲ್ಲಿ ಹಿಂದಿನ ಘೋಷಣೆಗಳನ್ನೇ ಈ ಬಜೆಟ್‍ನಲ್ಲಿ ಮುದ್ರಿಸಲಾಗಿದೆ. ಇದೊಂದು ನಿರರ್ಥಕ ಬಜೆಟ್.
-ಎಚ್.ಪಿ.ರಾಜೇಶ್, ಮಾಜಿ ಶಾಸಕರು.