ಸುದ್ದಿವಿಜಯ,ಜಗಳೂರು.ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನತೆ ಟಾರ್ಗೇಟ್ ಪೂರ್ಣಗೊಳಿಸದೇ ಕೇವಲ ಸಬೂಬು ಹೇಳಿಕೊಂಡು ದಿನ ಕಳೆಯುವುದಾದರೇ ಅಭಿವೃದ್ದಿ ಹೇಗೆ ಸಾದ್ಯ ಎಂದು ಜಿ.ಪಂ ಡಾ. ಚನ್ನಪ್ಪ ಪಿಡಿಒಗಳನ್ನು ನೀರು ಇಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 22 ಗ್ರಾಮ ಪಂಚಾಯಿತಿಗಳಲ್ಲಿ ಮುಸ್ಟೂರು ಗ್ರಾ.ಪಂ ಹೊರತುಪಡಿಸಿದರೆ ಉಳಿದ ಗ್ರಾ,ಪಂಗಳಲ್ಲಿ ನಿಗದಿತ ಗುರಿ ಮುಟ್ಟುವಲ್ಲಿ ಅಧಿಕಾರಿಗಳು ವೈಫಲ್ಯ ಕಂಡಿದ್ದಾರೆ ಎಂದು ಅಸಮಾಧನವ್ಯಕ್ತಪಡಿಸಿದರು.
ದ್ಯೋಗ ಖಾತ್ರಿ ಯೋಜನೆ ಕೂಲಿಕಾರರಿಗೆ ತುಂಬ ಸಹಕಾರಿಯಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಮಾನವ ದಿನಗಳನ್ನು ಹೆಚ್ಚಳಪಡಿಸುವಂತೆ ಕಳೆದ ತಿಂಗಳು ಸೂಚನೆ ನೀಡಲಾಗಿತ್ತು. ಕೇವಲ ಕುಂಟು ನೆಪ ಹೇಳಿಕೊಂಡು ಹೋದರೆ ಜನರು ನಿಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಆದ್ದರಿಂದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ. ಅಭಿವೃದ್ದಿ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ ಆದರೆ ತಾವೂಗಳು ಸರಿಯಾಗಿ ಪಂಚಾಯಿತಿಗಳಿಗೂ ಹೋಗದೇ ಕಾಲಹರಣ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಿಡಿಗಳ ಕೊರತೆಯಿಂದ ಎರಡ್ಮೂರು ಗ್ರಾ.ಪಂಗಳ ಜವಾಬ್ದಾರಿ ನೀಡಿ ಜತೆಗೆ ಕಾರ್ಯದರ್ಶಿ ಸೇರಿದಂತೆ ಇತರೆ ಹೆಚ್ಚುವರಿ ಸಿಬ್ಬಂದಿಗಳನ್ನು ಕೊಡಲಾಗಿದೆ. ಆನ್‌ಲೈನ್ ಎಂಟ್ರಿ ಮಾಡಲು ಡಾಟಾ ಎಂಟ್ರಿಗಳಿದ್ದಾರೆ. ಪಿಡಿಒಗಳ ಜವಾಬ್ದಾರಿಯನ್ನಾ ನಿಭಾಯಿಸಿದರೆ ಯಾವ ಸಮಸ್ಯೆಗಳು ಇರುವುದಿಲ್ಲ ಎಂದರು.
ತಾಂತ್ರಿಕ ಇಂಜಿನಿಯರ್‌ಗಳಿಗೆ ಎಚ್ಚರಿಕೆ:
ಗ್ರಾ.ಪಂಗಳಿಗೆ ನೇಮಕವಾಗಿರುವ ತಾಂತ್ರಿಕ ಸಹಾಯಕ ಇಂಜಿನಿಯರ್‌ಗಳು ಕಚೇರಿಯಲ್ಲಿ ಕುಳಿತುಕೊಳ್ಳಲು ಕಳಿಸಿಲ್ಲ. ಪ್ರತಿ ಗ್ರಾ.ಪಂಗಳಿಗೆ ತೆರಳಿ ನರೇಗಾದಡಿ ಕೂಲಿಕಾರರಿಗೆ ಜಾಗ ಹುಡುಕಿ ಕೆಲಸ ನೀಡಬೇಕು, ಒಬ್ಬೊಬ್ಬ ಕೂಲಿಕಾರರಿಗೆ ವಿಸ್ತೀರ್ಣ ನಿಗದಿ ಮಾಡಿಕೊಡಬೇಕು, ಅಲ್ಲಿನ ಕುಂದು ಕೊರತೆಗಳನ್ನು ಅಧಿಕಾರಿಗಳಿಗೆ ವರದಿ ನೀಡಬೇಕು, ತಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬಿಟ್ಟು ಹೋಗಿ, ಸಾಕಷ್ಟು ಜನರು ಕೆಲಸಕ್ಕಾಗಿ ಕಾಯುತ್ತಿದ್ದಾರೆ ಅವರಿಗೆ ಅವಕಾಶ ನೀಡಿದರೆ ಮಾಡಿಕೊಂಡು ಹೋಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪಿಡಿಒ ಕೊಟ್ರೇಶ್ ನೋಟಿಸ್ ಜಾರಿ:
ನಮ್ಮ ಪ್ರಶ್ನೆಗೆ ಸಮಾಜಾಯಿಷ ನೀಡಿದರೆ ನಾನು ಕೇಳುವುದಿಲ್ಲ. ಎಷ್ಟು ಬಾರಿ ಸಭೆ ನಡೆಸಿ ಮಾಹಿತಿ ನೀಡಿದರು ಪ್ರಯೋಜನವಾಗಿಲ್ಲ. ಕೊಟ್ಟಿರುವ ಕೆಲಸವನ್ನು ಪೂರ್ಣಗೊಳಿಸದೆ ಕೇವಲ ಸುಳ್ಳು ಹೇಳಿಕೊಂಡು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಪಿಡಿಒ ಕೊಟ್ರೇಶ್ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸಿಇಒ ಡಾ. ಚನ್ನಪ್ಪ ಇಒಗೆ ಸೂಚನೆ ನೀಡಿದರು.
ಇಂಜಿನಿಯರ್‌ಗಳಿಗೆ ಟಾರ್ಗೇಟ್ ನೀಡಿ:
ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಒಬ್ಬೊಬ್ಬ ಇಂಜಿನಿಯರ್‌ಗಳು ಕನಿಷ್ಠ ಹತ್ತು ಕಾಮಗಾರಿಗಳ ಕ್ರಿಯಾಯೋಜನೆಗಳನ್ನು ಸಿದ್ದಪಡಿಸಿಕೊಂಡು ಇರಬೇಕು, ಯಾವುದೇ ಕೂಲಿಕಾರ ೬ ಫಾರಂ ಅರ್ಜಿ ನೀಡಿದ ಕೂಡಲೇ ಕೆಲಸ ಕೊಡಬೇಕು, ಕೆಲಸ ಮಾಡಲು ಜಾಗವಿಲ್ಲದಿದ್ದರೆ ಅದನ್ನು ಹುಡುಕಿ ಕೊಡುವ ಜವಾಬ್ದಾರಿ ತಾಂತ್ರಿಕ ಇಂಜಿನಿಯರ್‌ಗಳದ್ದಾಗಿದೆ ಎಂದು ಸಿಇಒ ಟಾರ್ಗೇಟ್ ನೀಡಿದರು.
ಜಗಳೂರು ಶೇ.೯೯.೧ ರಷ್ಟು ಆಧಾರ್ ಲಿಂಕ್:
ಕೆಲಸ ಮಾಡುವ ಕೂಲಿಕಾರರ ಉದ್ಯೋಗ ಚೀಟಿಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅದರಂತೆ ಜಗಳೂರು ಶೇ.೯೯.೧ರಷ್ಟು ಲಿಂಕ್ ಮಾಡಿದೆ ಆದರೆ ಕೂಲಿಕಾರರು ಕೆಲಸಕ್ಕೆ ಬರಲು ಹಿಂದೆ ಸರಿಯುತ್ತಿದ್ದಾರೆ, ಕೂಡಲೇ ಜನರಿಗೆ ಮನವರಿಕೆ ಮಾಡಿ ಕೂಲಿ ಕೆಲಸ ನೀಡಬೇಕು ಎಂದು ಸಿಇಒ ಸಲಹೆ ನೀಡಿದರು.
ಪಿಡಿಒ ಶಶೀಧರ್ ಪಟೇಲ್‌ಗೆ ತರಾಟೆ:
ಪಲ್ಲಾಗಟ್ಟೆ ಮತ್ತು ದಿದ್ದಿಗಿ ಗ್ರಾ.ಪಂಗಳಲ್ಲಿ ಯಾವುದೇ ಕೆಲಸಗಳು ನಡೆದಿಲ. ಪಲ್ಲಾಗಟ್ಟೆಯಲ್ಲಿ ಕೇವಲ ೮೪ ಮಾನವ ದಿನಗಳಾಗಿರುವುದಕ್ಕೆ ನಾಚಿಕೆಯಾಗಬೇಕು, ಸಾವಿರಾರು ಕೂಲಿಕಾರರಿದ್ದಾರೆ ಆದರೆ ಅವರಿಗೆ ಸ್ಪಂದಿಸಿ ಕೆಲಸ ನೀಡಲಾಗದೇ ನಮಗೆ ಸುಳ್ಳು ಹೇಳುತ್ತೀಯಾ ಎಂದು ಗ್ರಾ.ಪಂ ಇಡಿಒ ಶಶೀಧರ್ ಪಟೇಲ್ ಅವರನ್ನು ಸಿಇಒ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಜಿ.ಪಂ ಡಿ.ಎಸ್ ಡಾ. ಮೇಜರ್ ಹರ್ಷ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಎಪಿಒ ಸುಮಲತಾ, ತಾ.ಪಂ ಪ್ರಬಾರ ಇಒ ಚಂದ್ರಶೇಖರ್ ಸೇರಿದಂತೆ ಮತ್ತಿತರಿದ್ದರು.