ಜಗಳೂರು:ಮಕ್ಕಳ ರಕ್ಷಣಾ ಯೋಜನೆ ಸಮಗ್ರ ಜಾರಿಗೆ ಕ್ರಮ:ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್

Suddivijaya
Suddivijaya March 4, 2023
Updated 2023/03/04 at 11:58 AM

ಸುದ್ದಿವಿಜಯ, ಜಗಳೂರು: ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಮಾರ್ಗ ಸೂಚಿಗಳ ಅನ್ವಯ ಗ್ರಾಮಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಕಾರ್ಯವನ್ನು ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಯೋಜನೆ ಮತ್ತು ಮಾನಿಟರಿಂಗ್ ಸಮಿತಿಗೆ ವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಮದ ಅನುಸಾರ ಸಮಗ್ರ ಯೋಜನೆ ಜಾರಿಗೆ ತಾಲೂಕು ಆಡಳಿತ ಬದ್ಧವಾಗಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ ಮಿಷನ್ ವಾತ್ಸಲ್ಯ ಅಡಿ ನಡೆದ ಕಾರ್ಯಕ್ರಮ ಮತ್ತು 2023ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಕಲ್ಯಾಣ, ಬಾಲ ನ್ಯಾಯಮಂಡಳಿ, ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿ, ಬಾಲಕರ ಮತ್ತು ಬಾಲಕಿಯರ ಬಾಲಮಂದಿರ, ಅನುಪಾಲನಗೃಹಗಳು, ಪ್ರಧಾನ ಮಂತ್ರಿ ಮಕ್ಕಳ ಜಾಗೃತಿ ಯೋಜನೆ,

ದತ್ತು ಕಾರ್ಯಕ್ರಮಗಳು ಹೀಗೆ ಅನೇಕ ಅಷನುಷ್ಠಾನಗೊಂಡ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕಾಗಿಯೇ 1098 ಉಚಿತ ಸಹಾಯವಾಣಿ ಕೇಂದ್ರವಿದ್ದು ದೌರ್ಜನ್ಯಕ್ಕೊಳಗಾದ ಮಕ್ಕಳು, ಪೋಷಕರು ಕರೆ ಮಾಡಿದರೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಜಾಗೃತಿ ವಹಿಸಲಿದ್ದಾರೆ ಎಂದರು.

ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಕ್ಕಳ ರಕ್ಷಣಾ ಘಟಕದಿಂದ ಮಿಷನ್ ವಾತ್ಸಲ್ಯ ಕಾರ್ಯಕ್ರಮ ಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಕ್ಕಳ ರಕ್ಷಣಾ ಘಟಕದಿಂದ ಮಿಷನ್ ವಾತ್ಸಲ್ಯ ಕಾರ್ಯಕ್ರಮ ಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ,ಮಹೇಶ್ವರಪ್ಪ ಮಾತನಾಡಿ, ಇಂದಿಗೂ ಗ್ರಾಮೀಣ ಪ್ರದೇಶ, ಪೇಟೆ ಪಟ್ಟಣಗಳಲ್ಲಿ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದ್ದು, ಮಕ್ಕಳ ರಕ್ಷಣಾ ಘಟಕ ಅಂತಹ ಮಕ್ಕಳ ರಕ್ಷಣೆಗೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಇನ್‍ಸ್ಪೆಕ್ಟರ್ ಶ್ರೀನಿವಾಸ್ ಮಾತನಾಡಿ, ಮಕ್ಕಳ ರಕ್ಷಣೆಗಾಗಿಯೇ ಪೊಲೀಸ್ ಇಲಾಖೆಯಲ್ಲಿ ಮಕ್ಕಳ ಕಲ್ಯಾಣಾಧಿಕಾರಿ ಎಂದೆ ಪ್ರತ್ಯೇಕ ವಿಭಾಗ ರಚಿಸಿ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ನೇರವಾಗಿ ಸಂಪರ್ಕಿಸಿ ಎಂದರು. ಕಾರ್ಯಕ್ರಮದಲ್ಲಿ ತಾಪಂ ನೂತನ ಇಒ ಟಿ.ಆರ್.ಮಲ್ಲಾಡದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ವೀರೇಶ್, ಈಶ್ವರ್ ಸೇರಿದಂತೆ ಅನೇಕರು ಇದ್ದರು.

ಫಲಾನುಭವಿಗಳ ಸಮಾವೇಶ:
ತಾಲೂಕಿನ 22 ಗ್ರಾಪಂಗಳಲ್ಲಿ ವಸತಿ ಯೋಜನೆ ಸೇರಿದಂತೆ ಸರಕಾರದ ವಿವಿಧ ಯೋಜನೆಗಳನ್ನು ಪಡೆದ ಫಲಾನುಭವಿಗಳ ಸಮಾವೇಶವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಫಲಾನುಭವಿಗಳನ್ನು ಕರೆದೊಯ್ಯಲು ಪ್ರತಿ ಗ್ರಾಪಂಗೆ ಒಂದೊಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಫಲಾನುಭವಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ತಾಪಂ ನೂತನ ಇಒ ಟಿ.ಆರ್.ಮಲ್ಲಾಡದ ತಿಳಿಸಿದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!