ಸುದ್ದಿವಿಜಯ, ಜಗಳೂರು: ಕನ್ನಡದ ಚುಟುಕು ಸಾಹಿತ್ಯ ಬ್ರಹ್ಮ ಎಂದೇ ಹೆಸರಾಗಿದ್ದ ದಿನಕರ ದೇಸಾಯಿ ಅವರು ಕನ್ನಡ ಸಾಹಿತ್ಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದವರು ಅವರಂತೆ ಮಕ್ಕಳು ಚುಟುಕು ಸಾಹಿತ್ಯ ರಚಿಸಿ ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ಪಾನಮುಕ್ತ ಅಭಿಯಾನದ ರುವಾರಿ ಕೆ.ಕೃಷ್ಣಮೂರ್ತಿ ವಿದ್ಯಾರ್ಥಿಗಳಿಗೆ ಹೇಳಿದರು.
ತಾಲ್ಲೂಕಿನ ಕಲ್ಲೆದೇವರಪುರ ಗ್ರಾಮದ ಕಲ್ಲೇಶ್ವರ ಗ್ರಾಮಂತರ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ನಮ್ಮ ಮೇಷ್ಟ್ರು ಎಂಬ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುದ್ದಣ್ಣನ ಮನೋರಮೆ ಕಾವ್ಯದಲ್ಲಿ ದುಡಿದು ಬಸವಳಿದು ಬಂದ ಗಂಡನಿಗೆ ಹೆಂಡತಿ ಉಪಚರಿಸುವ ರೀತಿಯನ್ನು ಉದ್ಘರಿಸಲಾಗಿದೆ. ಮಹಾ ಜ್ಞಾನಿಗಳದ ರನ್ನ, ಪೊನ್ನ, ಹರಿಹರ, ವಾಲ್ಮೀಕಿ, ಕುವೆಂಪು ರಂತಹ ಮಹಾನ್ ವ್ಯಕ್ತಿಗಳು ಮಾಹಾಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಅದೇ ರೀತಿ ಚುಟುಕು ಸಾಹಿತ್ಯದಲ್ಲಿ ದಿನಕರ ದೇಸಾಯಿ ಅವರು ರಚಿಸಿರುವ ಚುಟುಕು ಸಾಹಿತ್ಯವು ಅಪಾರವಾದ ಜ್ಞಾನ ಮತ್ತು ಅರ್ಥಗಳನ್ನು ನೀಡುತ್ತವೆ.
ಶಿಕ್ಷಕರು ನಾನು ಜ್ಞಾನು ಎಂದು ಭಾವಿಸದೇ ಮಕ್ಕಳನ್ನು ಮುನ್ನಡೆಸಿಕೊಂಡು ಹೋಗುವ ನಾವಿಕನಂತೆ ಇರಬೇಕು. ಮಕ್ಕಳನ್ನು ಜ್ಞಾನಗಳನ್ನಾಗಿ ಮಾಡಬೇಕಾದರೆ ಮಕ್ಕಳಲ್ಲಿ ಮಕ್ಕಳಾಗಿ ಇರಬೇಕು ಎಂದು ಮಾರ್ಡನ್ ರಾಮಾಯಣದ ಉಪಮೆಯನ್ನು ಉದಾಹರಣೆಯಾಗಿ ಹೇಳುವ ಮೂಲಕ ಮಕ್ಕಳನ್ನು ಮನ ರಂಚಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಟಿ.ಎರಿಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಕನ್ನಡ ಹಾಸುಕೊಕ್ಕಾಗಬೇಕಾದರೆ ಪತ್ರಿಕೆಗಳು ಮತ್ತು ಪುಸ್ತಕಗಳ ಅಭ್ಯಾಸ ಮಾಡಬೇಕು. 12 ಶತಮಾನದ ಶರಣರ ವಚನಗಳನ್ನು ಅಭ್ಯಾಸ ಮಾಡಿ ಎಂದು ಹೇಳಿದರು. ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕೆ ಬಿ.ಟಿ.ಗೀತಾ ಮಂಜು ಚಿತ್ರದುರ್ಗ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಬಸವರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲ್ಲೇದೇವರ ಗ್ರಾ,ಪಂ ಅಧ್ಯಕ್ಷರಾದ ವಸಂತಕುಮಾರಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಚಂದ್ರಮ್ಮ ಮಹೇಶ್, ಗ್ರಾಪಂ ಸದಸ್ಯರಾದ ಕೆ.ಟಿ. ಬಡಯ್ಯ, ನಾಗಮ್ಮ, ವಿಮಲಾಕ್ಷಿ, ಡಿ.ಸಿ ಮಲ್ಲಿಕಾರ್ಜುನ್, ಡಾ.ರಾಜಪ್ಪ ನಿಬಗೂರು, ಸಿ.ಆರ್.ಪಿ ಅಂಜಿನಪ್ಪ ಇದಿಯಪ್ಪ, ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ವೀರಣ್ಣ, ಮುಖ್ಯ ಶಿಕ್ಷಕರಾದ ರಮೇಶ್ ನಾಯ್ಕ್, ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕ ಉಮೇಶ್, ದೈಹಿಕ ಶಿಕ್ಷಣ ಶಿಕ್ಷಕ ತಿಪ್ಪೇಸ್ವಾಮಿ, ನಾಗರಾಜ್ ನಾಯ್ಕ, ಟಿ.ಚೈತ್ರ, ಭಾರತ್ ಮಾತಾ, ಸತ್ಯ ನಾರಾಯಣರೆಡ್ಡಿ, ವರಲಕ್ಷ್ಮಿ, ಅನಂತ್ ಸೇರಿದಂತೆ ಶಾಲಾ ಮಕ್ಕಳು ಇದ್ದರು.