ಸುದ್ದಿವಿಜಯ ಜಗಳೂರು.ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮದ ಬಿಎ ವಿದ್ಯಾರ್ಥಿ ಬಸವರಾಜ್ (೨೦) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಂಜಮ್ಮ ಬಸವರಾಜ್ ಇವರ ಮೂರನೇ ಮಗ ಬಸವರಾಜ್ ಜಗಳೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು, ಎಂದಿನಂತೆ ಬೆಳಗ್ಗೆ ಕಾಲೇಜಿಗೆ ಹೋಗಿ ಬಂದಿದ್ದ, ನಿನ್ನೆ ದಿನವೆಲ್ಲಾ ಮನೆಯವರೊಂದಿಗೆ ಚನ್ನಾಗಿ ಇದ್ದವನು ರಾತ್ರಿ ತನ್ನ ಹಳೆಯ ಮನೆಯಲ್ಲಿ ನೇಣು ಬಿಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಳೆಯ ಮನೆಯಲ್ಲಿದ್ದ ಈ ಕುಟುಂಬ ಹೊಸ ಮನೆ ಕಟ್ಟುತ್ತಿದ್ದಾರೆ. ಅವರ ಕುಟುಂಬದವರು ಬೇರೊಂದು ಮನೆಯಲ್ಲಿ ವಾಸವಿದ್ದು. ಬಸವರಾಜ್ ಮಾತ್ರ ತನ್ನ ಸ್ನೇಹಿತರೊಂದಿಗೆ ಪ್ರತಿ ದಿನ ರಾತ್ರಿ ಹಳೆಯ ಮನೆಯಲ್ಲಿಯೇ ಮಲಗುತ್ತಿದ್ದರು. ನಿನ್ನೆ ದಿನ ಮಾತ್ರ ಎಲ್ಲ ಸ್ನೇಹಿತರಿಗೆ ಇವತ್ತು ನಿಮ್ಮ ಮನೆಗಳಲ್ಲಿಯೇ ಮಲಗಿಕೊಳ್ಳಿರಿ ಎಂದು ಹೇಳಿ ಈ ರೀತಿಯಾಗಿ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ