ಸರ್ಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಉಪಕರಣ ನೀಡಿದ ಕೊಡುಗೈ ಧಾನಿಗಳು.

Suddivijaya
Suddivijaya April 8, 2023
Updated 2023/04/08 at 1:42 PM

Suddivijaya|Kannada News |08-04-2023

ಸುದ್ದಿವಿಜಯ,ಜಗಳೂರು:ಸರ್ಕಾರಿ ಕನ್ನಡ ಶಾಲೆಗಳು ಇತಿಹಾಸ, ಪರಂಪರೆಯನ್ನು ಹೊಂದಿವೆ. ಇಲ್ಲಿ ಅಕ್ಷರ ಜ್ಞಾನ ಕಲಿತವರು ಉನ್ನತ ಸ್ಥಾನಮಾನದಲ್ಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣ ಇಲಾಖೆ ಸಂಯೋಜಕ ಡಿ.ಡಿ.ಹಾಲಪ್ಪ ಹೇಳಿದರು.ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಶನಿವಾರ ದಾನಿಗಳು ಕೊಡುಗೆ ನೀಡಿದ ಸ್ಮಾರ್ಟ್ ಕ್ಲಾಸ್ ಉಪಕರಣಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಆಕರ್ಷಣೀಯ ಖಾಸಗಿ ಶಾಲೆಗಳ ವ್ಯಾಮೋಹದಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಂದ ದೂರ ಉಳಿಯುತ್ತಿದ್ದಾರೆ. ಅದಕ್ಕಿಂತಲೂ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿದೆ ಎಂಬುವುದನ್ನು ಅರಿತುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಶಾಲೆಯಲ್ಲಿ ಕಲಿತ ಪಠ್ಯಗಳನ್ನು ಒಮ್ಮೆ ಮನೆಯಲ್ಲಿ ಓದಿದರೇ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡ ಶಾಲೆಗಳನ್ನು ಉಳಿಸಿ ಎಂದು ಮನವಿ ಮಾಡಿದರು.

ನನ್ನ ಶಾಲೆ ನನ್ನ ಕೊಡುಗೆ’ ಕಾರ್ಯಕ್ರಮ ಅಡಿ ಕಟ್ಟಿಗೆಹಳ್ಳಿ ಗ್ರಾಮಸ್ಥರೇ ಹಣ ಮತ್ತು ಸಂಪನ್ಮೂಲ ಕ್ರೂಡೀಕರಿಸಿ ಸರ್ಕಾರಿ ಶಾಲೆಗೆ ಬೃಹತ್ ಎಲ್‌ಇಡಿ ಮತ್ತು ಟವಿ ಪರದೆಯ ಕೊಡುಗೆ ನೀಡಿ ಆ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿರುವುದು ಶ್ಲಾಘನೀಯ ಎಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ ಮಾತನಾಡಿ, ಗ್ರಾಮೀಣ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೆಚ್ಚು ಕಾಣಲು ಸಾಧ್ಯ. ಕಟ್ಟಿಗೆಹಳ್ಳಿ ಗ್ರಾಮಸ್ಥರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಒತ್ತು ನೀಡುವ ಜತೆಗೆ ಶಾಲೆಯ ಅಭಿವೃದ್ದಿ ಮಾಡುತ್ತಿರುವುದು ಸಂತಸವಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತೇಶ್ ಮಾತನಾಡಿ, ಯಾವ ಊರಿನಲ್ಲಿ ಶಾಲೆಯ ಘಂಟೆಗಿಂತ ದೇವಸ್ಥಾನದ ಘಂಟೆ ಭಾರಿಸುತ್ತದೆಯೋ ಆ ಗ್ರಾಮದಲ್ಲಿ ಅಜ್ಞಾನಿಗಳು, ಮೂಢರು ಹೆಚ್ಚಾಗಿರುತ್ತಾರೆ. ಅದೇ ಗ್ರಾಮದಲ್ಲಿ ಶಾಲೆಯ ಘಂಟೆ ಜೋರಾಗಿ ಭಾರಿಸಿದರೆ ಆ ಊರಿನಲ್ಲಿ ಸುಶಿಕ್ಷಿತರು, ವಿದ್ಯಾವಂತರು ಜಾಸ್ತಿ ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೇಳಿದ ಮಾತು ಅಕ್ಷರಶಃ ಸತ್ಯ. ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಸರಕಾರಿ ಮಾದರಿ ಶಾಲೆಗೆ ಜನರೇ ದೇಣಿಗೆ ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕೂಬಾನಾಯ್ಕ್ ಮಾತನಾಡಿದರು, ಸಹ ಶಿಕ್ಷಕ ಗೋವಿಂದಪ್ಪ, ತಿಪ್ಪೇಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಎಲ್.ಎನ್.ಶಿವಕುಮಾರ್, ಮಾಜಿ ಅಧ್ಯಕ್ಷ ಬಸವರಾಜ್, ಸಿದ್ದನಗೌಡ, ಎನ್.ಎಸ್.ಸೋಮನಗೌಡರು, ಶಿವಕುಮಾರ್ ಗೌಡ್ರು, ಗ್ರಾಪಂ ಸದಸ್ಯರಾದ ಭಾರತಿ ಮಂಜುನಾಥ್, ಎಸ್‌ಡಿಎಂಸಿ ಸದಸ್ಯ ರಾಜು, ಮಂಜುನಾಥ್, ಟಿಪಿಒ ಸುರೇಶ್ ರೆಡ್ಡಿ, ಆಂಜನೇಯ ನಾಯ್ಕ್,ಸ್ಸಿಆರ್ ಪಿ ರಾಜಶೇಖರ್, ನಾಗರಾಜ್, ಶಾಮರಾವ್, ಕೆ.ಬಿ.ಮಂಜುನಾಥ್, ಅರಿಶಿಣಗುಂಡಿ ರಾಮಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕೊಡುಗೈಧಾನಿಗಳು:

ಕಟ್ಟಿಗೆಹಳ್ಳಿ ಸರಕಾರಿ ಮಾದರಿ ಶಾಲೆಗೆ ಚನ್ನನಗೌಡ, ಎನ್.ಎಸ್.ಶರಣಪ್ಪ, ರಂಗನಾಥ್ ಕಸ್ಟ್ರಕ್ಷನ್ ಮಾಲೀಕರಾದ ಚಂದ್ರಶೇಖರ್ ಅವರು ಸ್ಮಾಟ್ ಕ್ಲಾಸ್ ಉಪಕರಣಗಳ ಖರೀದಿಗೆ ಹಣ ಸಹಾಯ ಮಾಡಿದರು. ಗ್ರಾಮಸ್ಥರಿಂದ ೨೫ ನೂತನ ಡೆಸ್ಕ್ ಖರೀದಿಗೆ ೨೫ ಸಾವಿರ ಹಣದ ನೆರವು ನೀಡಿ ಸರಕಾರಿ ಶಾಲೆ ಅಭಿವೃದ್ಧಿಗೆ ನೆರವಾಗಿದ್ದಾರೆ.

 

ಜಗಳೂರು  ಕಟ್ಟಿಗೆಹಳ್ಳಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಉಪಕರಣ ವಿತರಣೆ, ಗ್ರಾಮದವರಿಂದ ಕೊಡುಗೆ, ಸ್ಮಾರ್ಟ್ ಕ್ಲಾಸ್ ಉಪಕರಣಕ್ಕೆ ಚಾಲನೆ

Share this Article
Leave a comment

Leave a Reply

Your email address will not be published. Required fields are marked *

error: Content is protected !!