Suddivijaya|Kannada News |06-04-2023
ಸುದ್ದಿವಿಜಯ, ಜಗಳೂರು:ಜಗಳೂರು ಪಟ್ಟಣದ ಜೆ.ಎಂ ಇಮಾಂ ಪ್ರೌಢ ಶಾಲೆಗೆ ತಾಲೂಕು ಮತ್ತು ಜಿಲ್ಲಾ ಲಯನ್ಸ್ ಕ್ಲಬ್ ಗಳಿಂದ ಉಚಿತವಾಗಿ ವಾಟರ್ ಫಿಲ್ಟರ್ ವಿತರಣೆ ಮಾಡಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಜಗಳೂರಿನ ಇಮ್ಮಣ್ಣ ಲನೆಂದು ಕರೆಯುವ ಜೆ.ಎಂ ಇಮಾಂ ಸಾಹೇಬರು ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅವರು ನಿರ್ಮಿಸಿದ ಕೆರೆಗಳಿಂದ ಅಂತರ್ಜಲ ಮರಪೂರಣಗೊಂಡು ಜೀವ ಜಲವಾಗಿದೆ ಅಂತಹ ಮಹಾನ್ ನಾಯಕ ಜಗಳೂರಿನಲ್ಲಿ ಹುಟ್ಟಿದ್ದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಅವರ ಹೆಸರಿನಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊರ ತರುತ್ತಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲೂ ಪ್ರತಿ ವರ್ಷ ನೂರರಷ್ಟು ಫಲಿತಾಂಶ ಪಡೆಯುತ್ತಿದೆ. ಮಕ್ಕಳಿಗೆ ಶುದ್ದವಾದ ನೀರು ಕೊಡುವುದಕ್ಕಾಗಿ ಲಯನ್ಸ್ ಕ್ಲಬ್ ನಿಂದ ವಾಟರ್ ಫಿಲ್ಟರ್ ಕೊಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಲಯನ್ಸ ಕ್ಲಬ್ ಕಾರ್ಯದರ್ಶಿ ಡಾ. ಅನಿರುದ್, ಖಜಾಂಚಿ ಶಾಹೀನ ಬೇಗಂ, ಅಮ್ಮ ಲಯನ್ಸ್ ಕ್ಲಬ್ ಅಧ್ಯಕ್ಷೆ ಆಶಾ, ಕಾರ್ಯದರ್ಶಿ ಸವಿತ, ಮಂಜುಳ ಹಲಿಮಾಬಿ , ಇಮಾಂ ಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರಿ, ಶಿಲ್ಪ , ನಾಗರಾಜ್,ಶಂಕರ್ ಸೇರಿದಂತೆ ಮತ್ತಿತರಿದ್ದರು.