ಜಗಳೂರು: ನಾಟಕಗಳ ಜೀವಂತಿಗೆ ಪ್ರೋತ್ಸಾಹ ಅಗತ್ಯ: ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ!

Suddivijaya
Suddivijaya December 15, 2022
Updated 2022/12/15 at 1:00 PM

ಸುದ್ದಿವಿಜಯ, ಜಗಳೂರು: ನವ ಮಾಧ್ಯಮಗಳು ಮತ್ತು ಧಾರವಾಹಿಗಳ ಭರಾಟೆಯ ಮಧ್ಯೆ ಗ್ರಾಮೀಣ ಪ್ರದೇಶದಲ್ಲಿ ನಾಟಕ ಜೀವಂತ ಕಲೆಗೆ ಪ್ರೋತ್ಸಾಹ ಅಗತ್ಯ ಎಂದು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ಬಸವೇಶ್ವರ ನಾಟ್ಯಕಲಾಸಂಘದಿಂದ ಬಸವೇಶ್ವರ, ತಿಮ್ಮಪ್ಪ, ದುಗಾರ್ಂಭಿಕ ದೇವಿ ಕಾರ್ತಿಕೋತ್ಸವದ ಅಂಗವಾಗಿ ‘ಪ್ರೇಮ ಕದನ’ ಸಾಮಾಜಿಕ ನಾಟಕ ಅಭಿನಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೊಳಂಬ ರಾಜ ಮನೆತನದ ಆಳ್ವಿಕೆ ಕಾಲಘಟ್ಟದಲ್ಲಿ ಕೆರೆ ಕೋಡಿಬಳಿ ನಿರ್ಮಿಸಿದ ಬಸವೇಶ್ವರ ದೇವಸ್ಥಾನ ನೆರೆಹೊರೆಯ ಗ್ರಾಮಗಳ ಆರಾಧ್ಯ ದೈವವಾಗಿದೆ. ವಿವಿಧ ಸಮುದಾಯದ ಭಕ್ತರು ಪ್ರತಿ ವರ್ಷ ವಿಜೃಂಭಣೆಯಿಂದ ಕಾರ್ತಿಕೋತ್ಸವವನ್ನು ಆಚರಿಸುತ್ತಿರುವುದು ಸಾಮರಸ್ಯತೆ ಮತ್ತು ಏಕಮುಖ ಧಾರ್ಮಿಕ ಭಾವನೆಗೆ ಸಾಕ್ಷೀಕರಿಸಿದಂತಿದೆ ಎಂದು ಪ್ರಶಂಸಿದರು.

 ಜಗಳೂರು ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ನಡೆದ ಸಾಮಾಜಿಕ ನಾಟಕವನ್ನು ಕಾಂಗ್ರೆಸ್ ಮುಖಂಡ ಚಿಕ್ಕಮ್ನನಹಟ್ಟಿ ದೇವೇಂದ್ರಪ್ಪ ಉದ್ಘಾಸಿದರು.
 ಜಗಳೂರು ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ನಡೆದ ಸಾಮಾಜಿಕ ನಾಟಕವನ್ನು ಕಾಂಗ್ರೆಸ್ ಮುಖಂಡ ಚಿಕ್ಕಮ್ನನಹಟ್ಟಿ ದೇವೇಂದ್ರಪ್ಪ ಉದ್ಘಾಸಿದರು.

ದೈವ ಅನುಗ್ರಹ ಹಾಗೂ ವರುಣನ ಕೃಪೆಯಿಂದ ಗ್ರಾಮಕ್ಕೆ ಹೊಂದಿಕೊಂಡಿರುವ ಅರಸೀಕೆರೆ ಕೆರೆ ಕೋಡಿ ಬಿದ್ದಿರುವುದು ಸಂತೋಷದ ವಿಷಯ. ಅಂತರ್ಜಲ ಹೆಚ್ಚಳವಾಗಿ ಸಮೃದ್ದಿ ಬೆಳೆ ನಿರೀಕ್ಷೆಯಲ್ಲಿರುವ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದರು.

ಇದೇ ವೇಳೆ ನಾಟ್ಯಕಲಾಸಂಘಕ್ಕೆ ವೈಯಕ್ತಿಕವಾಗಿ ಹತ್ತು ಸಾವಿರ ನಗದು ಪ್ರೋತ್ಸಾಹ ಧನ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಕವಿತಾ ವಿರೇಶ್,ಸದಸ್ಯರಾದ ಅಂಬರೇಶ್,ಚಿಕ್ಕಬ್ಬಳ್ಳಿ ನಾಗರಾಜ್, ಮುಖಂಡರಾದತುಪ್ಪದಹಳ್ಳಿಹನುಮಂತಪ್ಪ,ಕಾಂ.ಗುಡಿಹಳ್ಳಿಹಾಲೇಶ್,ಎಂ.ಗುರುಸಿದ್ದಪ್ಪ, ಜಿ.ರುದ್ರಪ್ಪ, ಎಸ್.ಬಸವರಾಜ್, ಸಿ.ವಿರೇಶ್,ಕಲ್ಲೇಶಪ್ಪ, ಪರಮೇಶ್, ಜಿ.ಮಲ್ಲಿಕಾರ್ಜುನ್,ನಾಗಪ್ಪ,ಯು.ಎನ್.ಬಸಯ್ಯ, ಕೆ.ಮಂಜುನಾಥಾಚಾರಿ, ಪಂಪಾಪತಿ, ಷಡಕಪ್ಪ, ಅಣಜಿಗೆರೆ ಗ್ರಾ.ಪಂ ಮಾಜಿ ಅಧ್ಯಕ್ಷ ಟಿ.ಶಿವಣ್ಣ,ವಕೀಲ ಕೆರೆ,ಮಹಾಂತೇಶ್,ವೀರಬಸಪ್ಪ,ರಾಮಣ್ಣ,ಸೇರಿದಂತೆ ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!