ಸುದ್ದಿವಿಜಯ, ಜಗಳೂರು: ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಲು ಗಾಂಧೀಜಿ ಅವರು ಆಯ್ಕೆ ಮಾಡಿದ್ದು ಅಹಿಂಸಾತ್ಮಕ ಹಾದಿ ಎಂದು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ. ತಿಪ್ಪೇಸ್ವಾಮಿ ಹೇಳಿದರು.
ಮಹಾತ್ಮಗಾಂಧಿ ಅವರ ಜಯಂತಿಯ ಅಂಗವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಿಸಿ ಮಾತನಾಡಿದರು.
ಪ್ರತಿ ವರ್ಷ ಅಕ್ಟೋಬರ್ 2 ರಂದು ರಾಷ್ಟ್ರಕ್ಕೆ ಅವರ ಕೊಡುಗೆಗಳನ್ನು ಗೌರವಿಸಲು ರಾಷ್ಟ್ರೀಯ ರಜಾದಿನವನ್ನು ಆಚರಿಸಲಾಗುತ್ತದೆ. ಜೂನ್ 15, 2007 ರಂದು, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅವರ ಗೌರವಾರ್ಥವಾಗಿ ಅಕ್ಟೋಬರ್ 2 ಅನ್ನು ಅಂತರಾಷ್ಟ್ರೀಯ ಅಹಿಂಸಾ ದಿನ ಎಂದು ಘೋಷಿಸಿತು. ಈ ದಿನವು ಶಾಂತಿ, ಸಹಿಷ್ಣುತೆ, ತಿಳುವಳಿಕೆ ಮತ್ತು ಅಹಿಂಸೆಯ ಸಂಸ್ಕøತಿಯನ್ನು ಸುರಕ್ಷಿತಗೊಳಿಸುವ ಗುರಿಯೊಂದಿಗೆ ಅಹಿಂಸೆಯ ಪರಿಕಲ್ಪನೆಯ ಸಾರ್ವತ್ರಿಕ ಮಹತ್ವವನ್ನು ಗೌರವಿಸುತ್ತದೆ. ಗಾಂಧಿ ಜಯಂತಿಯಂದು, ಭಾರತದ ವಿಮೋಚನಾ ಹೋರಾಟ ಮತ್ತು ಸ್ವಾತಂತ್ರ್ಯ ಚಳವಳಿಗೆ ಅವರು ನೀಡಿದ ಪ್ರಮುಖ ಕೊಡುಗೆಗಳನ್ನು ಜನರು ಸ್ಮರಿಸುತ್ತಾರೆ ಎಂದರು.
ತಮ್ಮ ಹೋರಾಟದಿಂದ ಯಾವುದೇ ಜೀವ ಹಾನಿ ಆಗಬಾರದೆಂದು ಗಾಂಧಿ ಬಯಸಿದ್ದವರು. ಅವರ ಅಹಿಂಸಾತ್ಮಕ ವಿಧಾನವು ಪ್ರಪಂಚದಾದ್ಯಂತ ಹಲವಾರು ನಾಗರಿಕ ಹಕ್ಕುಗಳ ಅಭಿಯಾನಗಳ ಮೇಲೆ ಪ್ರಭಾವ ಬೀರಿತು. ಗಾಂಧಿಯವರು ಧಾರ್ಮಿಕ ಬಹುತ್ವದಲ್ಲಿ ಅಚಲ ನಂಬಿಕೆ ಹೊಂದಿದ್ದರು. ಭಾರತವು ಜಾತ್ಯತೀತ ರಾಷ್ಟ್ರವಾಗಬೇಕೆಂದು ಅವರು ಬಯಸಿದ್ದರು ಮತ್ತು ಅದನ್ನು ಸಾಕಾರಗೊಳಿಸಲು ಶ್ರಮಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಂಗಣ್ಣ, ಕಾರ್ಯದರ್ಶಿಬಿ.ಎಸ್ ಹಾಲಪ್ಪ, ಮುಖಂಡರಾದ ಕೆ. ಕೃಷ್ಣಮೂರ್ತಿ, ಎಂ.ಆರ್ ಪ್ರಕಾಶ್, ಲಕ್ಷ್ಮಣ್‍ರೆಡ್ಡಿ, ಮಂಜುನಾಥಯ್ಯ, ತಿಮ್ಮಣ್ಣ, ಸಿದ್ದಣ್ಣ, ಕಾಟಪ್ಪ, ಡಿ.ಎಸ್ ಮಹಾಸ್ವಾಮಿ ಸೇರಿದಂತೆ ಮತ್ತಿತರಿದ್ದರು.