ವಿಕಲಚೇನರ ಅಭಿವೃದ್ಧಿಗೆ ಹತ್ತು ಲಕ್ಷ ರೂ. ಭರವಸೆ: ಶಾಸಕ ಎಸ್.ವಿ.ರಾಮಚಂದ್ರ!

Suddivijaya
Suddivijaya December 3, 2022
Updated 2022/12/03 at 1:21 PM

ಸುದ್ದಿವಿಜಯ, ಜಗಳೂರು: ವಿಕಲಚೇತನರ ಅಭಿವೃದ್ಧಿಗೆ ನಮ್ಮ ಸರಕಾರದ ಬದ್ಧವಾಗಿದ್ದು ಅವರ ಅಭಿವೃದ್ಧಿಗೆ ನಮ್ಮ ಸರಕಾರದ ಸದಾ ಸಿದ್ಧವಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಭಾಗಿತ್ವದಲ್ಲಿ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿವ್ಯಾಂಗರು ಅಪಾರ ಪ್ರತಿಭಾವಂತರಾಗಿರುತ್ತಾರೆ. ಅವರಿಗೆ ಸೂಕ್ತ ರೀತಿಯಲ್ಲಿ ಅವಕಾಶ ಮತ್ತು ಪೆÇ್ರೀತ್ಸಾಹ ನೀಡಿದರೆ ಅಸಮಾನ್ಯ ರೀತಿಯಲ್ಲಿ ಸಾಧನೆಗೈಯುತ್ತಾರೆ ಅವರನ್ನು ಜೊತೆ ಜೊತೆಯಾಗಿ ಕರೆದುಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಿಮ್ಮ ಸಹಪಾಠಿಗಳು ಯಾರಾದರು ವಿಕಲಚೇತನರಿದ್ದರೆ ಅವರಿಗೆ ಸಹಾಯ ಮಾಡಿ ಎಂದು ಕಾರ್ಯಕ್ರಮದಲ್ಲಿ ನರೆದಿದ್ದ ವಿದ್ಯಾರ್ಥಿಗಳಿಗೆ ಶಾಸಕರು ಕಿವಿ ಮಾತು ಹೇಳಿದರು.

ಶಾಸಕರ ನಿಧಿಯಿಂದ 10 ಲಕ್ಷ ವೆಚ್ಚದಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳನ್ನು ನೀಡಲು ನಾನು ಸಿದ್ಧನಿದ್ದೇನೆ. ದಯವಿಟ್ಟು ಅರ್ಹ ಪಲಾನುಭವಿಗಳ ಪಟ್ಟಿ ನೀಡಿ ವಿಕಲಚೇತನರಿಗೆ ಮಾಡುವ ಸೇವೆ ಎಂದಿಗೂ ಮೋಸವಾಗುವುದಿಲ್ಲ.

ಜಗಳೂರು ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿದರು.
ಜಗಳೂರು ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷ ಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿದರು.

ಮುಂದಿನ ಬಾರಿಯು ನಾನೇ ಶಾಸಕನಾಗಿ ಬಂದು ನಿಮ್ಮ ಸೇವೆ ಮಾಡುತ್ತೇನೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು. ಇದೇ ತಿಂಗಳು ಗುರುಭವನದಲ್ಲಿ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ತಾಲ್ಲೂಕಿನ ಎಲ್ಲಾ ವಿಕಲಚೇತನರು ಕಾರ್ಯಕ್ರಮದಲ್ಲಿ ಭಾಗವಹಿಸಲು ಮನವಿ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್, ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಡಿ.ಡಿ.ಹಾಲೇಶ್, ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ, ನೇತ್ರ ತಜ್ಞೆ ಡಾ. ಸವಿತಾ, ಕೀಲುಮೂಳೆ ತಜ್ಞ ಡಾ. ಷಣ್ಮುಖ ಕ್ಷೇತ್ರ ಸಮೂಹ ಸಂಪನ್ಮೂಲ ಅಧಕಾರಿಗಳಾದ ಸತೀಶ್, ಆಂಜನೇಯ ನಾಯಕ್, ಕೆ.ಎಸ್.ಮಂಜಣ್ಣ, ಕ್ಷೇತ್ರ ಸಂಪನ್ಮೂಲ ವಿಶೇಷ ಶಿಕ್ಷಕರಾದ ನಾಗಲಿಂಗಪ್ಪ ಸ್ವಾಮಿ, ತಿಪ್ಪೇಸ್ವಾಮಿ, ಕರಿಯಮ್ಮ, ದುಗ್ಗೇಶ್ ದೊಡ್ಡಮನಿ ಸೇರಿದಂತೆ ಇತರೆ ಶಿಕ್ಷಕರು ವಿಕಲಚೇತನರ ಪೆÇೀಷಕರು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!