ಸುದ್ದಿವಿಜಯ,ಜಗಳೂರು: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಆಗಸ್ಟ್ 13 ರಿಂದ 15 ವರೆಗೆ ಮನೆ ಮನೆಯಲ್ಲೂ ರಾಷ್ಟ್ರೀಯ ದ್ವಜ ಅಭಿಯಾನ ಹರ್ ಘರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ಜಗಳೂರು ತಾಲೂಕು ಕಚೇರಿಯ ಮುಂದೆ ತಹಸಿಲ್ದಾರ್ ಜಿ.ಸಂತೋಷ್ ಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಈಗಾಗಲೇ ಸರಕಾರದ ಮಾರ್ಗಸೂಚಿಯಂತೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಲಿ ಅಭಿಯಾನವನ್ನು ಆಗಸ್ಟ್ 13 ರಿಂದ 15 ರವರೆಗೆ ಹಮ್ಮಿಕೊಳ್ಳುವಂತೆ ನಾಗರೀಕರಿಗೆ ಮನವಿ ಮಾಡಲಾಗಿದ್ದು, ಆಯಾ ದಿನಗಳಂದು ರಾಜ್ಯದಲ್ಲಿ ಇರುವಂತಹ ಎಲ್ಲಾ ಮನೆಗಳ ಸರಕಾರಿ ಕಚೇರಿ ಕಟ್ಟಡಗಳು, ಸರಕಾರೇತ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಸರಕಾರದ ಮಾರ್ಗಸೂಚಿಯಿದೆ. ಎಲ್ಲರ ಮನೆ ಮನಗಳಲ್ಲೂ ತ್ರಿವರ್ಣ ಧ್ವಜ ಹಾರಲಿ ಎಂದರು.
ಈಗಾಗಲೇ ಪಟ್ಟಣ ಪಂಚಾಯಿತಿ ವತಿಯಿಂದ ಧ್ವನಿ ವರ್ಧಕಗಳ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗಿದೆ. ಅದೇ ರೀತಿ ತಾಪಂ ವತಿಯಿಂದ ಗ್ರಾಮೀಣ ಭಾಗದ ತಮ್ಮ ತಮ್ಮ ಪಂಚಾಯಿತಿಗಳ ವತಿಯಿಂದ ಪ್ರತಿ ಹಳ್ಳಿಗಳಲ್ಲಿ ಮನೆ ಮೇಲೆ ಧ್ವಜ ಹಾರಿಸಲು ವಿವಿಧ ಪ್ರಕಾರದ ಮಾಧ್ಯಮಗಳನ್ನು ಬಳಸಿ ಸಾರ್ವಜನಿಕರಿಗೆ ತಿಳಿಸಲಾಗಿದೆ.
ರಾಷ್ಟ್ರ ದ್ವಜ ಮನೆಗಳ ಮೇಲೆ ಹಾರುವ ಮುಖಾಂತರ ರಾಷ್ಟ್ರ ಭಕ್ತಿ ಹೆಚ್ಚಿಸಲಿ ಮನೆಗಳಲ್ಲಿ ಸಾರ್ವಜನಿಕರು ತಮ್ಮ ಮನೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ನಮ್ಮ ದೇಶ ಭಕ್ತಿ ದೇಶಾಭಿಮಾನ ಎತ್ತಿಹಿಡಿಯುವ ಮೂಲಕ ನಮ್ಮ ರಾಷ್ಟ್ರ ಪ್ರೇಮವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಆರಿಸಲು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶಿಸಿದೆ ಎಂದರು.
ಪ.ಪಂ ಮುಖ್ಯಾಧಿಕಾರಿ ಲೋಕನಾಯ್ಕ್ ಮಾತನಾಡಿ, ಆಗಸ್ಟ್ 13 ರಿಂದ 15 ವರೆಗೆ “ಮನೆ ಮನೆಯಲ್ಲೂ ರಾಷ್ಟ್ರೀಯ ದ್ವಜ ಅಭಿಯಾನ ಹರ್ ಘರ್ ತಿರಂಗಾ ” ಕಾರ್ಯಕ್ರಮದ ಪ್ರಯುಕ್ತ ಕೇಂದ್ರ ಸರ್ಕಾರದಿಂದ ಸರಬರಾಜು ಮಾಡಿದ ಎಲ್ಲ ಧ್ವಜಗಳನ್ನು ಮಾರಾಟ ಮಾಡಬೇಕಾಗಿರುವುದರಿಂದ ಧ್ವಜ ಒಂದಕ್ಕೆ 22 ರೂಪಾಯಿಗಳು ಕೊಟ್ಟು ನಮ್ಮ ಪಟ್ಟಣ ಪಂಚಾಯಿತಿ ವತಿಯಿಂದ ಸಾರ್ವಜನಿಕರು ಖರೀದಿಸಬೇಕು. ರಾಷ್ಟ್ರ ಧ್ವಜಗಳನ್ನು ಮಾತ್ರ ಸಾರ್ವಜನಿಕರು ತಮ್ಮ ಮನೆಯ ಮೇಲೆ ಆರಿಸಬೇಕು ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ. ಪ.ಪಂ.ಅರೋಗ್ಯ ನಿರೀಕ್ಷಕ
ಕಿಫಾಯಿತ್ ಅಮ್ಮದ್, ತಾಲೂಕು ಕಚೇರಿ ಸಿಬ್ಬಂದಿಗಳಾದ ಕಾಂತರಾಜ್, ಲಂಕೇಶ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.