ಸುದ್ದಿವಿಜಯ,ಜಗಳೂರು.ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಲ್ಲಿ ಭೌದ್ಧಿಕ ವಿಕಸನ ವೃದ್ಧಿಯಾಗುತ್ತದೆ ಎಂದು ಪಟ್ಟಣದ ಜೆಎಂ ಇಮಾಂ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಹಾಜಿ ಜೆ ಕೆ ಹುಸೇನ್ ಮಿಯ್ಯಾ ಸಾಬ್ ಹೇಳಿದರು.
ಪಟ್ಟಣದ ಜೆ.ಎಂ.ಇಮಾಂ ಶಾಲೆಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲಾ ಹಂತದ ನಲಿ ಕಲಿಕಾಯಕ’ ಚಿಲಿಪಿಲಿ ಮಲಾರ ಎಂಬ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ಪಠ್ಯದಿಂದಷ್ಟೇ ಅಲ್ಲ. ಪಠ್ಯೇತರ ಚಟುವಟಿಕೆಗಳು ಮಕ್ಕಳ ಮನೋವಿಕಸಕ್ಕೆ ಕಾರಣವಾಗುತ್ತದೆ. ನಾಲ್ಕು ಮೂಲೆಗಳ ಮಧ್ಯೆ ಶಿಕ್ಷಣ ಸೀಮಿತವಾಗಬಾರದು ಎಂದು ಶಾಲಾ ಹಂತದಲ್ಲಿ ಶಾಲಾ ಹಂತದಲ್ಲಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಪ್ರತಿಭಾ ಕಾರಂಜಿ ಏರ್ಪಡಿಸಲಾಗಿದೆ.
ಸುಮಾರು 800 ಪಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಕೋಲಾಟ, ನೃತ್ಯ, ಜಾನಪದ ಪ್ರಕಾರಗಳು, ರಂಗೋಲಿ ಸ್ಪರ್ಧೆ, ಆಶುಭಾಷಣ, ಮಕ್ಕಳು ಕಥೆ ಹೇಳುವ ಸ್ಪರ್ಧೆ, ಕ್ವಿಜ್ ಕಾಂಪಿಟೇಷನ್, ವೇಷಭೂಷಣ ಸ್ಪರ್ಧೆ ಸೇರಿದಂತೆ ಅನೇಕಾ ಕ್ರಿಯಾತ್ಮಕ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಪ್ರತಿ ವರ್ಷವೂ ನಮ್ಮ ಶಾಲೆಯಲ್ಲಿ ಮಕ್ಕಳ ಭೌದ್ಧಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ವಿವಿಧ ಚಟುವಟಿಕೆಗಳನ್ನು ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೋತ್ಸಹಿಸಲಾಯಿತು.
ಈ ವೇಳೆ ಆಡಳಿತಾಧಿಕಾರಿ ಮಹ್ಮದ್ ಹುಸೇನ್, ಮುಖ್ಯ ಶಿಕ್ಷಕರುಗಳಾದ ಎಸ್‍ಎಂ ವಿಜಯಲಕ್ಷ್ಮಿ, ಜೆ.ಆರ್.ಶಂಕರ್, ಎಸ್.ಹಾಲಪ್ಪ ಸೇರಿದಂತೆ ಎಲ್ಲ ಶಿಕ್ಷಕರು, ಪೋಷಕರು ಭಾಗವಹಿಸಿದರು.