ಸುದ್ದಿವಿಜಯ, ಜಗಳೂರು: ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತಮ್ಮ ಅವಧಿಯಲ್ಲಿ ದೇಶದ ಆಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದರು ಎಂದು ಮಾಜಿ ಶಾಸಕ ಎಚ್.ಪಿ ರಾಜೇಶ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಇಂದಿರಾಗಾಂಧಿ ಜಾಣ್ಮೆ, ಹೊಸತನದ ಭಾರತಕ್ಕೆ ಅಡಿಗಲ್ಲು ಹಾಕಿದವರು.
ಹಸಿರು ಕ್ರಾಂತಿ, ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣ, ಶಿಮ್ಲಾ ಒಪ್ಪಂದ, ಬಾಂಗ್ಲಾ ಉದಾರೀಕರಣ, ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಅವರ ದೂರದೃಷ್ಟಿಯ ಆಲೋಚನೆ, ವಿದೇಶಿ ನೀತಿಗಳು ಅವರ ಚಾಣಾಕ್ಷ ರಾಜಕಾರಣಕ್ಕೆ ಉದಾಹರಣೆಗಳಿವೆ ಎಂದರು.
ಹೆಚ್ಚಿನ ಇಳುವರಿಯ ಬೀಜಗಳು, ನೀರಾವರಿ ಯೋಜನೆ, ಆರ್ಥಿಕತೆಗೆ ಉತ್ತೇಜನ, ಆಹಾರ ಉತ್ಪಾದನಾ ಕ್ಷೇತ್ರಕ್ಕೆ ಒತ್ತು ಮತ್ತು ಪರಮಾಣು ಕಾರ್ಯಕ್ರಮಗಳ ನೇತೃತ್ವ ವಹಿಸಿದರು. 1974ರಲ್ಲಿ ಭೂಗತ ಪರಮಾಣು ಸ್ಪೋಟ ನಡೆಸಿ ವಿಶ್ವಕ್ಕೆ ಭಾರತದ ಶಕ್ತಿಯನ್ನು ಮೊದಲ ಬಾರಿಗೆ ಪರಿಚಯಿಸಿದರು ಎಂದು ತಿಳಿಸಿದರು.
ಮಹಿಳಾ ಕೇಲವ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಲ್ಲ ದೇಶದ ಆಡಳಿತ ಚುಕ್ಕಾಣಿ ಹಿಡಿದು ಸಮರ್ಥ ಆಡಳಿತ ನೆಡೆಸಬಹುದು ಎಂದು ತೋರಿಸಿ ಕೊಟ್ಟಂತಹ ಉಕ್ಕಿನ ಮಹಿಳೆಯಾಗಿದ್ದರು. ಅವಂತಹ ಧಕ್ಷ ಪ್ರಾಮಾಣಿಕ ಹಾಗು ಸಾಮಾಜಿಕ ಕಳಕಳಿ ಮನೋಭಾವವನ್ನ ನಾವೆಲ್ಲರು ಅಳವಡಿಸಿಕೊಳ್ಳೊಣ. ಸ್ವಾತಂತ್ರ್ಯ ಭಾರತದ ನಂತರ ಪ್ರಧಾನ ಮಂತ್ರಿಗಳಾಗಿದ್ದ ನೆಹರೂ ಅವರ ಮಗಳಾಗಿ ಅವರ ಜ್ಯಾತ್ಯಾತೀತ ತತ್ವಗಳನ್ನ ಮೈಗೂಡಿಸಿಕೊಂಡಿದ್ದ ಇಂದಿರಾಗಾಂಧಿ ಅವರು ಸದಾ ಬಡವರ ದೀನ ದಲಿತರ ಕಾರ್ಮಿಕರ ಪರ ಚಿಂತನೆ ಉಳ್ಳಂತವರಾಗಿದ್ದರು ಎಂದರು.
ಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ದೇಶದಲ್ಲಿ ಬಡವರ ಕಲ್ಯಾಣಕ್ಕಾಗಿ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸುವ ಮೂಲಕ ಪ್ರತಿ ಹಳ್ಳಿಗಳ ಅಬಿವೃದ್ದಿಗೆ ಹಲವಾರು ಯೋಜನೆ ಜಾರಿಗೊಳಿಸಿದರು.
ಉಚಿತ ಪಡಿತರ, ಬಟ್ಟೆ, ಉಚಿತ ಶಿಕ್ಷಣ ನೀಡುವ ಮೂಲಕ ದೇಶವನ್ನ ಸುಭದ್ರವಾಗಿ ಕಟ್ಟಿದಂತಹ ಧೀರ ಉಕ್ಕಿನ ಮಹಿಳೆಯಾಗಿದ್ದರು, ಇದಲ್ಲದೆ ದೇಶದ ವಿದೇಶಾಂಗ ನೀತಿ , ವಿಜ್ಜಾನ ಮತ್ತು ಸಾಮಾಜಿಕ ಅಬಿವೃದ್ದಿಗೆ ತಮ್ಮನ್ನ ತಾವು ತೊಡಗಿಸಿಕೊಂಡು ದೇಶಕ್ಕಾಗಿ ಪ್ರಾಣವನ್ನೆ ತ್ಯಾಗ ಮಾಡಿದಂತ ಹುತಾತ್ಮ ಮಹಿಳೆ ನಮ್ಮ ಪಕ್ಷದ ಹೆಮ್ಮೆಯ ನಾಯಕಿ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಗೌಡ್ರು , ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆಂಚಮ್ಮ, ಹೊಸಕೆರೆ ಗ್ರಾ.ಪಂ ಸದಸ್ಯೆ ರೂಪ, ಮಹಿಳಾ ಕಾಂಗ್ರೆಸ್ ಸದಸ್ಯರಾದ ಶರಣಮ್ಮ, ಜ್ಯೋತಿ, ಎಸ್ಸಿ ಘಟಕ ಬ್ಲಾಕ್ ಅಧ್ಯಕ್ಷ ಬಿ.ಲೋಕೇಶ್, ಕಾರ್ಮಿಕ ಘಟಕ ಅಧ್ಯಕ್ಷ ಪಿ.ರೇವಣ್ಣ, ಇಂಟೆಕ್ ಅಧ್ಯಕ್ಷ ಹೊನ್ನೂರಸ್ವಾಮಿ, ಮುಖಂಡರಾದ ಮರೇನಹಳ್ಳಿ ಶೇಖರಣ್ಣ, ಐನಳ್ಳಿ ರಾಜು, ಮದಕರಿ, ಅನಿಲ್, ವೆಂಕಟೇಶ್, ಹನುಮಂತಾಪುರ ರಾಜು, ಸುರೇಶ್ ನಾಯ್ಕ, ಶಿವಮೂರ್ತಿ, ಸಿದ್ದಣ್ಣ ಸೇರಿದಂತೆ ಹಲವರು ಇದ್ದರು.