ಕಲ್ಲೇದೇವರಪುರ ಕಲ್ಲೇಶ್ವರಸ್ವಾಮಿಯ ಮಹಿಮೆ ಅಪಾರ

Suddivijaya
Suddivijaya April 4, 2023
Updated 2023/04/04 at 1:36 PM

Suddivijaya|Kannada News |04-0-42023

ಸುದ್ದಿವಿಜಯ,ಜಗಳೂರು:ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕಲ್ಲೇದೇವರಪುರದ ಶ್ರೀ ಕಲ್ಲೇಶ್ವರ ಸ್ವಾಮಿಯೂ ಈ ಭಾಗದ ಆರಾಧ್ಯ ಧೈವವಾಗಿದ್ದು, ಅಪಾರ ಮಹಿಮೆ ಹೊಂದಿದ ಪುಣ್ಯ ಕ್ಷೇತ್ರ ಎನಿಸಿಕೊಂಡಿದೆ.

ಜಗಳೂರು ತಾಲೂಕಿನ ಕಲ್ಲೇಶ್ವರ ದೇವರು ನೆಲಸಿದ ಸ್ಥಳವಾದ ಕಾರಣ ಗ್ರಾಮಕ್ಕೆ ಕಲ್ಲೇದೇವರಪುರ ಎಂದು ಹೆಸರು ಬಂದಿದೆ. ಕಲ್ಲೇದೇವರಪುರ ಗ್ರಾಮವು ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಈ ಗ್ರಾಮವು ಚಿತ್ರದುರ್ಗ-ಹೊಸಪೇಟೆ 50ರಲ್ಲಿ ಚಿತ್ರದುರ್ಗದಿಂದ 25 ಕಿ.ಮೀ ಜಗಳೂರಿನಿಂದ 15 ಕಿ.ಮೀ ದೂರದಲ್ಲಿದೆ.

ಕಲ್ಲೇಶ ನೆಲಸಿದ ಐತಿಹ್ಯ:

ಹಿಂದೆ ಈ ದೇವಾಲಯದ ಪ್ರದೇಶವೆಲ್ಲವೂ ಕಾಡು ಪೆಳೆಯಿಂದ ಕೂಡಿದ್ದು, ಪಕ್ಕದ ಬಯಲಿನಲ್ಲಿ ಮಲ್ಲಶೆಟ್ಟಿ ಎಂಬ ವ್ಯಾಪಾರಿಯೊಬ್ಬ ಪೆಳೆಯಿಂದ ಕಟ್ಟಿಗೆಯನ್ನು ತಂದು ನೆಲದಲ್ಲಿ ಹೂತ್ತಿದ್ದ ಒಂದು ಕಲ್ಲಿಗೆ ಮತ್ತೆರಡು ಕಲ್ಲುಗಳನ್ನು ಒಟ್ಟು ಒಲೆಯನ್ನು ಹೂಡಿಗೆ ಅಡುಗೆ ಮಾಡಿಕೊಳ್ಳಲು ಯತ್ನಿಸಿದಾ ಅನ್ನದ ಮಡಿಕೆಯಲ್ಲಿ ಅನ್ನದ ಜತೆಗೆ ರಕ್ತ ಕಾಣಲು ಶುರುವಾಯಿತು. ವ್ಯಾಪಾರಿ ಗಾಬರಿಯಿಂದ ದೇವರೆಂದು ನೆನಸಿಕೊಂಡನಂತೆ, ಆಗ ದೇವರು ನೀನು ಒಲೆಗುಂಡೆಂದು ಬಾವಿಸಿದ ನಾನು ಒಲೆಯ ಗುಂಡಲ್ಲಾ, ನಾನು ಕಲಿನಾಥ, ಕಲ್ಲೇಶ್ವರ ಎಂದು ಒಡಮೂಡಿದ ಕಲ್ಲಿನ ಶವಲಿಂಗದಿಂದ ಒಂದು ಚಿಕ್ಕದಾದ ಕಲ್ಲು ಸಿಡಿದು ಹೇಳಿತಂತೆ ನಿನ್ನ ವ್ಯಾಪಾರದ ಜಾಗದಲ್ಲಿ ಈ ಕಲ್ಲಿನಿಂದಲೇ ತೂಗಿ ಕೊಡು ನಿನಗೆ ಮಂಗಳವಾಗುತ್ತದೆ. ಎಂದಿತಂತೆ ಆಗ ವ್ಯಾಪಾರ ಮಾಡಿ ಗುಡಿ ಕಟ್ಟಿಸದನಂತೆ ಎಂದು ಹೇಳಲಾಗುತ್ತಿದೆ.

ಕಲ್ಲೇಶ್ವರ ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ 11, 12ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಗರ್ಭಗೃಹ ಅಂತರಾಳ, ನವರಂಗ, ಮಹಾಮಂಟಪ, ನಂದಿ ಮಂಟಪ, ಉಯ್ಯಾಲೆ ಕಂಬ ಹಾಗೂ ಮಹಾದ್ವಾರ ಗೋಪುರಗಳನ್ನು ಒಳಗೊಂಡ ವಿಸ್ತಾರವಾದ ದೇವಾಲಯವಾಗಿದೆ.
ಗರ್ಭಗೃಹದಲ್ಲಿ ಒಂದು ಅಡಿ ಎತ್ತರದ ಕಪ್ಪು ಶಿಲೆಯಲ್ಲಿ ಕಡೆಯಲಾದ ನಯವಾದ ಶಿವಲಿಂಗವಿದೆ. ನವರಂಗದ ಹೊಯ್ಸಳ ಶೈಲಿಯ ನಾಲ್ಕು ಕಂಬಗಳಿವೆ. ನವರಂಗದಲ್ಲಿ ಶಿವಲಿಂಗಕ್ಕೆ ಎದುರಾಗಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ನವರಂಗದಲ್ಲಿ ಗಣೇಶ ಹಾಗೂ ಪಶ್ಚಿಮಾಭಿಮುಖವಾಗಿ ಸ್ಥಾಪಿಸಲಾದ ಸೂರ್ಯನ ಮೂರ್ತಿ ಇದೆ. ಮುಖಮಂಟಪದ ಎದುರಿನಲ್ಲಿ ನಂದಿಯ ಶಿಲ್ಪವಿದ್ದು, ಇದನ್ನು ಅಂಕಲಿ ಬಸವಣ್ಣ ಎಂದು ಕರೆಯುತ್ತಾರೆ. ನವರಂಗದ ಮುಂಭಾಗದ ಮಹಾಮಂಟಪವು ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಮಂಟಪದ ಇಕ್ಕೆಲುಗಳಲ್ಲಿ ವೀರಭದ್ರ ಹಾಗೂ ಗೌರಮ್ಮ ದೇವರ ಗರ್ಭಗೃಹಗಳಿವೆ. ಮಹಾ ಮಂಟಪದ ಬಲಭಾಗದಲ್ಲಿ ವೀರಗಲ್ಲು ಇದ್ದುಮ ಇದನ್ನು ಈರಗಾರ ಹುಚ್ಚೇಶ್ವರ ಎಂದು ಕರೆಯುತ್ತಾರೆ. ಮಹಾಮಂಟಪದ ಮುಂಭಾಗದಲ್ಲಿ ನಂದಿ ಇದ್ದು ತೊಟ್ಟಿಪೆಳೆ ಬಸವಣ್ಣ ಎಂದು ಕರೆಯುತ್ತಾರೆ. ಗರ್ಭಗೃಹದ ಮೇಲೆ ಪಾಂಸನ ಮಾದರಿ ಶಿಖರವಿದೆ.

ದೇವಾಲಯದ ಹಿಂಭಾಗದಲ್ಲಿ ದೊಡ್ಡ ಮಜ್ಜನದ ಮಂಟಪವಿದೆ. ಇಂತಹ ದೊಡ್ಡ ಮಜ್ಜನ ಮಂಟಪ ಇಲ್ಲವೆಂದು ಹೇಳಲಾಗುತ್ತದೆ. ಈ ದೇವರಿಗೆ ತ್ರಿಕಾ ಪೂಜೆ ವಿಶೇಷ ಪೂಜೆ ನಡೆಯುತ್ತವೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಷೋತ್ತರ ಬಿಲ್ವಾರ್ಚನೆ, ವೇದ ಮಂತ್ರ ಘೋಷ, ನಿಯಮ ಬದ್ದವಾಗಿ ನಡೆಯುತ್ತವೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಯುತ್ತದೆ.

ಜಾತ್ರಾ ಮಹೋತ್ಸವ

ಕಲ್ಲೇಶ್ವರ ಜಾತ್ರೆ ಹಾಗೂ ನಂತರ ನಡೆಯುವ ದನಗಳ ಜಾತ್ರೆ ಪ್ರತಿ ವರ್ಷ ವೈಶಾಕ ಮಾಸದ ಹುಣ್ಣಿಮೆಯಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಐದನೇ ದಿನ ಮಹಾರಥೋತ್ಸವ ನಡೆಯುತ್ತದೆ. ಸುತ್ತಮುತ್ತಲನ ಹತ್ತಾರು ಹಳ್ಳಿಗಳಿಂದ ಬಂದ ಲಕ್ಷಾಂತರ ಜನರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಗ್ರಾಮದ ಸಮೀಪದಲ್ಲಿರುವ ಬಸಪ್ಪನಹಟ್ಟಿ ಬಸವಣ್ಣನ ಗುಡಿಯ ಅಂಗಳದಲ್ಲಿ ಕಲ್ಲೇಶ್ವರ ಸ್ವಾಮಿಯ ಪರೇವು ಆಚರಣೆ ನಡೆಸಲಾಗುತ್ತದೆ.

ಶಾಸನಗಳು:

ಜಗಳೂರಿನ 31,32(ಕ್ರಿ.ಶ1235), 33ನೇ ಕ್ರಿ.ಶ 1279) ಶಾಸನದಲ್ಲಿ ಈ ದೇವರಿಗೆ ದಾನ ಶಾಸನ ಬಗ್ಗೆ ವಿವರಣೆ ಇದೆ. ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ಕಾಲದಲ್ಲಿನ ನೀಡಿದ ದಾನವನ್ನು (ಕ್ರಿ.ಶ 1526) ಶಾಸನದಲ್ಲಿ ತಿಳಿಸಲಾಗಿದೆ.

“ ಕಲ್ಲೇಶ್ವರ ಸ್ವಾಮಿಯ ಜಾತ್ರೆ ಮತ್ತು ರಥೋತ್ಸವ ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಲ್ಲಿ ಆರು ದಿನಗಳ ಕಾಲ ಗ್ರಾಮದಲ್ಲಿ ಸಡಗರ ಸಂಭ್ರಮವಿರುತ್ತದೆ. ಸಾಕಷ್ಟು ವಿಶೇಷತೆ ಹೊಂದಿರುವ ಈ ದೇವಸ್ಥಾನವು ಲಕ್ಷಾಂತರ ಭಕ್ತರನ್ನು ಹೊಂದಿದೆ. ಇಲ್ಲಿ ಹೊತ್ತುಕೊಂಡ ಹರಕೆಗಳು ಈಡೇರಿದ ನಂತರ ಭಕ್ತರು ಬಂದು ವಿಶೇಷ ಪೂಜೆ, ಅನ್ನದಾಸೋಹ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ನೂರಾರು ವರ್ಷಗಳಿಂದಲೂ ಪೂಜೆ ನಡೆಯುತ್ತಾ ಬಂದಿದೆ”
– ರುದ್ರಮುನಿ ಪ್ರಧಾನ ಅರ್ಚಕರು.

ಏಪ್ರಿಲ್ 11ಕ್ಕೆ ರಥೋತ್ಸವ:

ಏ.7ಕ್ಕೆ ಕಂಕಣಧಾರಣೆ, ಏ.8ಕ್ಕೆ ಮದಲಿಂಗಶಾಶ್ತç ಮತ್ತು ಗಜೋತ್ಸವ ಏ.9ಕ್ಕೆ ಅಶ್ವ ವಾಹನೋತ್ಸವ, ಏ.10ಕ್ಕೆ ವೃಷಭೋತ್ಸವ, ಏ.11ಕ್ಕೆ ಮಧ್ಯಾಹ್ನ 4ಗಂಟೆಗೆ ಕಲ್ಲೇಶ್ವರ ಸ್ವಾಮಿಯ ದೊಡ್ಡ ರಥೋತ್ಸವ ಜರುಗಲಿದೆ. ಏ.12ಕ್ಕೆ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಕೋಲಾಟ, ಏ.13ಕ್ಕೆ ಓಕಳಿ ಕಾರ್ಯಕ್ರಮ ನಡೆಯಲಿದೆ.

Contents
ಕಲ್ಲೇಶ ನೆಲಸಿದ ಐತಿಹ್ಯ:ಜಾತ್ರಾ ಮಹೋತ್ಸವಕಲ್ಲೇಶ್ವರ ಜಾತ್ರೆ ಹಾಗೂ ನಂತರ ನಡೆಯುವ ದನಗಳ ಜಾತ್ರೆ ಪ್ರತಿ ವರ್ಷ ವೈಶಾಕ ಮಾಸದ ಹುಣ್ಣಿಮೆಯಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಐದನೇ ದಿನ ಮಹಾರಥೋತ್ಸವ ನಡೆಯುತ್ತದೆ. ಸುತ್ತಮುತ್ತಲನ ಹತ್ತಾರು ಹಳ್ಳಿಗಳಿಂದ ಬಂದ ಲಕ್ಷಾಂತರ ಜನರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಗ್ರಾಮದ ಸಮೀಪದಲ್ಲಿರುವ ಬಸಪ್ಪನಹಟ್ಟಿ ಬಸವಣ್ಣನ ಗುಡಿಯ ಅಂಗಳದಲ್ಲಿ ಕಲ್ಲೇಶ್ವರ ಸ್ವಾಮಿಯ ಪರೇವು ಆಚರಣೆ ನಡೆಸಲಾಗುತ್ತದೆ.ಶಾಸನಗಳು:ಜಗಳೂರಿನ 31,32(ಕ್ರಿ.ಶ1235), 33ನೇ ಕ್ರಿ.ಶ 1279) ಶಾಸನದಲ್ಲಿ ಈ ದೇವರಿಗೆ ದಾನ ಶಾಸನ ಬಗ್ಗೆ ವಿವರಣೆ ಇದೆ. ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ಕಾಲದಲ್ಲಿನ ನೀಡಿದ ದಾನವನ್ನು (ಕ್ರಿ.ಶ 1526) ಶಾಸನದಲ್ಲಿ ತಿಳಿಸಲಾಗಿದೆ.“ ಕಲ್ಲೇಶ್ವರ ಸ್ವಾಮಿಯ ಜಾತ್ರೆ ಮತ್ತು ರಥೋತ್ಸವ ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಲ್ಲಿ ಆರು ದಿನಗಳ ಕಾಲ ಗ್ರಾಮದಲ್ಲಿ ಸಡಗರ ಸಂಭ್ರಮವಿರುತ್ತದೆ. ಸಾಕಷ್ಟು ವಿಶೇಷತೆ ಹೊಂದಿರುವ ಈ ದೇವಸ್ಥಾನವು ಲಕ್ಷಾಂತರ ಭಕ್ತರನ್ನು ಹೊಂದಿದೆ. ಇಲ್ಲಿ ಹೊತ್ತುಕೊಂಡ ಹರಕೆಗಳು ಈಡೇರಿದ ನಂತರ ಭಕ್ತರು ಬಂದು ವಿಶೇಷ ಪೂಜೆ, ಅನ್ನದಾಸೋಹ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ನೂರಾರು ವರ್ಷಗಳಿಂದಲೂ ಪೂಜೆ ನಡೆಯುತ್ತಾ ಬಂದಿದೆ”
– ರುದ್ರಮುನಿ ಪ್ರಧಾನ ಅರ್ಚಕರು.
ಏಪ್ರಿಲ್ 11ಕ್ಕೆ ರಥೋತ್ಸವ:
Share this Article
Leave a comment

Leave a Reply

Your email address will not be published. Required fields are marked *

error: Content is protected !!