ಸುದ್ದಿವಿಜಯ ಜಗಳೂರು.ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಜ.೧೭ರಿಂದ ೧೯ರವರೆಗೂ ದೊಣ್ಣೆ ಕೆಂಚಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ.
ಜ.೧೭ರ ಮಂಗಳವಾರ ಬೆಳಗ್ಗೆ ಚರಗ ಹರಿಸುವುದು ದೊಣ್ಣೆ ಕೆಂಚಮ್ಮ ದೇವಿ ಚೌಕಿ ಕಟ್ಟೆಗೆ ಬರುವುದು. ಜ.೧೮ರ ಬುಧವಾರ ಮಧ್ಯಾಹ್ನ ೧.೩೦ಕ್ಕೆ ದೇವಿಗೆ ಹರಕೆ ಮೀಸಲು ಅರ್ಪಿಸುವುದು. ಜ.೧೯ರ ಗುರುವಾರ ಮಧ್ಯಾಹ್ನ ೧ಕ್ಕೆ ಗಂಗೆ ಪೂಜೆ, ೩ಗಂಟೆಗೆ ಗಾವಿನ ಉತ್ಸವ ಜರುಗುವುದು.
ಜಾತ್ರಾ ಮಹೋತ್ಸವಕ್ಕೆ ಸಂಸದ ಜಿ.ಎಂ ಸಿದ್ದೇಶ್ವರ್, ಶಾಸಕ ಎಸ್.ವಿ ರಾಮಚಂದ್ರ,ಹಿರಿಯೂರು ಶಾಸಕಿ ಪೂರ್ಣಿಮಾ ಶ್ರಿನಿವಾಸ್, ಮಾಜಿ ಶಾಸಕರಾದ ಎಚ್.ಪಿ ರಾಜೇಶ್, ತಿಪ್ಪೇಸ್ವಾಮಿ, ತಹಸೀಲ್ದಾರ್ ಸಂತೋಷ್‌ಕುಮಾರ್, ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ, ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಸೇರಿದಂತೆ ಮತ್ತಿತರರು ಭಾಗವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮ:
ಜ.೧೮ರಂದು ರಾತ್ರಿ ೯ಕ್ಕೆ ಶಂಕರ್ ಬಾಬು ಅರ್ಪಿಸುವ ಪ್ರೀತಮ್ ಮೆಲೋಡೀಸ್ ಆರ್ಕೇಸ್ಟ್ರಾ ಭದ್ರಾವತಿ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಜ.೧೯ ಗುರುವಾರ ಸಂಜೆ ೭.೩೦ರಿಂದ ೧೧.೩೦ರವರೆಗೆ ಸಾಮಾನ್ಯ ಸಮಾನ ಮನಸ್ಕರ ವೇದಿಕೆ ಮತ್ತು ಸಮಸ್ತ ಗ್ರಾಮಸ್ಥರ ಸಹಕಾರದಿಂದ ಕಾಮಿಡಿ ಕಿಲಾಡಿಗಳು ಮೂಗು ಸುರೇಶ್ ರವರ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟರಿಂದ ಹಾಸ್ಯ ರಸಮಂಜರಿ ಕಾಯಕ್ರಮ ನಡೆಯಲಿದೆ ಎಂದು ಚಿತ್ರ ನಿರ್ದೇಶಕ ಮಹಾಂತೇಶ್ ತಿಳಿಸಿದರು.