ಕೆಳಗೋಟೆ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

Suddivijaya
Suddivijaya November 3, 2022
Updated 2022/11/03 at 3:57 AM

ಸುದ್ದಿವಿಜಯ ಜಗಳೂರು.ಕನ್ನಡ ರಾಜ್ಯೋತ್ಸವ ಹಿನ್ನೆಲೆ ಜಗಳೂರು ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 187 ವಿದ್ಯಾರ್ಥಿಗಳಿಗೆ ಪದವಿಧರ ವಿದ್ಯಾರ್ಥಿ ಸಿ. ಕುಮಾರ್‌ ಉಚಿತವಾಗಿ ನೋಟ್‌ಬುಕ್‌ ವಿತರಣೆ ಮಾಡಿದ್ದಾರೆ.

ನಂತರ ಮಾತನಾಡಿ, ಕೆಳಗೋಟೆ ಗ್ರಾಮದಲ್ಲಿ ಓದುವ ಬಹುತೇಕ ವಿದ್ಯಾರ್ಥಿಗಳು ಸಿರಿವಂತರ ಮಕ್ಕಳಲ್ಲಾ, ಕೂಲಿಕಾರ್ಮಿಕ, ರೈತರು, ತರಗಾರ ಹೀಗೆ ಅತಿ ಬಡಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮಕ್ಕಳಲ್ಲಿ ಓದುವ ಉತ್ಸಹವಿದ್ದರೂ ಪಾಲಕರ ಬಡತನದಿಂದ ಮಕ್ಕಳಿಗೆ ಬೇಕಾದ ಪಠ್ಯಪುಸ್ತಕ ಕೊಡಿಸಲು ಸಾದ್ಯವಾಗದೇ ಶಾಲೆ ಬಿಡಿಸಿ ಶಿಕ್ಷಣದಿಂದ ಮೊಟಕುಗೊಳಿಸಿದ್ದಾರೆ. ಹಾಗಾಗಿ ಬಡ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ಅಳಿಲು ಸೇವೆ ಮಾಡಿದ್ದೇನೆ ಎಂದರು.

ಮುಖ್ಯ ಶಿಕ್ಷಕ ಅಂಜಿನಪ್ಪ ಮಾತನಾಡಿ, ಕನ್ನಡ ರಾಜ್ಯೋತ್ಸವದ ನೆನಪಿಗಾಗಿ ಕುಮಾರ್‌ ಬಡ ಮಕ್ಕಳಿಗೆ ನೋಟ್‌ಬುಕ್‌ ನೀಡಿ ಮಾನವೀಯತೆ ಮೆರದಿದ್ದಾರೆ. ಇಂತಹ ಅನೇಕರು ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಸಹಾಯ, ನೆರವು ನೀಡುವುದರಿಂದ ವಿದ್ಯಾಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ್‌, ಶಿಕ್ಷಕರಾದ ರಾಜಪ್ಪ, ಮಹೇಶ್‌, ನಾಗರಾಜ್, ಕವಿತಾ ಗ್ರಾಮದ ಮುಖಂಡರು ಸೇರಿದಂತೆ ಇತರರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!