ಸುದ್ದಿವಿಜಯ,ಜಗಳೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆದೇಶದ ಅನ್ವಯ ಶುಕ್ರವಾರ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಕನ್ನಡದ ನಾಡು ನುಡಿ ಗಾಯನಕ್ಕೆ ಧ್ವನಿ ಗೂಡಿಸಿ ಕನ್ನಡ ಡಿಂಡಿಮ ಮೊಳಗಿಸಿದರು.
ನಿವೃತ್ತ ಶಿಕ್ಷಕ ಎಂ.ಡಿ. ಆಂಜನೇಯ ಕಂಠ ಸಿರಿಯಲ್ಲಿ ಭಾರಿಸು ಕನ್ನಡ ಡಿಂಡಿಮವಾ, ಓ ಕರ್ನಾಟಕ ಹೃದಯ ಶಿವಾ, ಹಚ್ಚೇವು ಕನ್ಬಡದ ದೀಪ, ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಕನ್ನಡ ಭಾವ ಗೀತೆಗಳಿಗೆ ಪಟ್ಟಣದ ಜೆ.ಎಂ. ಇಮಾಂ ಸ್ಮಾರಕ ಶಾಲೆ, ಸರಕಾರಿ ಪದವಿಪೂರ್ವ ಕಾಲೇಜು, ಮಾಲತಿ ಕಾಲೇಜು,
ನಾಲಂದ ಕಾಲೇಜು, ಎನ್‍ಎಂಕೆ, ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢ ಶಾಲೆ, ಬೇಡರ ಕಣ್ಣಪ್ಪ ಶಾಲೆ, ಹನುಂತರೆಡ್ಡಿ ಪ್ರೌಢ ಶಾಲೆ, ನವ ಚೇತನ, ರಾಜರಾಜೇಶ್ವರಿ ಕಾಲೇಜು, ದೇವರಾಜ ಅರಸು ಕಾಲೇಜು, ಆರ್‍ವಿಎಸ್ ಸ್ಕೂಲ್ ಸೇರಿದಂತೆ ಅನೇಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಇಲಾಖೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿ ಕನ್ನಡ ಡಿಂಡಿಮ ಮೊಳಗಿಸಿದರು.
ದೈಹಿಕ ಶಿಕ್ಣಣ ಪರಿವೀಕ್ಷಕ ಸುರೇಶ್ ರೆಡ್ಡಿ, ಸರ್ವರಿಗೂ ಕನ್ನಡದ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ತಹಶಿಲ್ದಾರ್ ಜಿ.ಸಂತೋಷ್ ಕುಮಾರ್, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಇಒ ಚಂದ್ರಶೇಖರ್, ಬಿಇಒ ಉಮಾದೇವಿ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಆರ್‍ಐ ಕುಬೇರನಾಯ್ಕ, ಪಪಂ ಅಧ್ಯಕ್ಷರಾದ ವಿಶಾಲಾಕ್ಷಿ ಓಬಳೇಶ್, ಉಪಾಧ್ಯಕ್ಷರಾದ ನಿರ್ಮಲಾ ಕುಮಾರಿ, ಶಿಕ್ಣಣ ಇಲಾಖೆ ಡಿಡಿ ಹಾಲೇಶಪ್ಪ, ಪಿಎಸ್ ಐ ಬಸವರಾಜ್,
ಸಿಡಿಪಿಒ ವೀರೆಂದ್ರಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿದೇಶಕರಾದ ವೆಂಕಟೇಶ್ ಮೂರ್ತಿ, ಪಪಂ ಸದಸ್ಯರಾದ ತಿಪ್ಪೇಸ್ವಾಮಿ, ಮಹಮ್ಮದ್ ಆಲಿ, ಲುಕ್ಮಾನ್ ವುಲ್ಲಾಖಾನ್, ಲಲಿತಾ ಶಿವಣ್ಣ, ಬಿಆರ್ ಸಿ ಹನುಮಂತಪ್ಪ, ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಾಬುರೆಡ್ಡಿ ಉಪಸ್ಥಿತರಿದ್ದರು.