ಸುದ್ದಿವಿಜಯ, ಜಗಳೂರು: ಗ್ರಾಮಪಂಚಾಯಿತಿ ನೂತನ ಕಟ್ಟಡದ ಸಭಾಭವನ ನಿರ್ಮಾಣಮಾಡಲು ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದಿಂದ 20 ಲಕ್ಷ ಅನುದಾನ ನೀಡುವೆ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಭಾನುವಾರ ಮನರೇಗಾ ಯೋಜನೆಯಡಿಯಲ್ಲಿ ಭಾರತ್ ನಿರ್ಮಾಣ ಸೇವಾ ಕೇಂದ್ರದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜನವರಿ ತಿಂಗಳಲ್ಲಿ ಕ್ಷೇತ್ರ ಪ್ರವಾಸ ಕೈಗೊಂಡು ಪ್ರತಿ ಗ್ರಾಪಂಗಳ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ಅನುಷ್ಠಾನಗೊಳಿಸುವಿಕೆ ಹಾಗೂ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರ ಕುಂದುಕೊರತೆ ಸಭೆ ನಡೆಸಲಾಗುವುದು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗ್ರಾಪಂ ಸದಸ್ಯರ ಗೌರವಧನ ಹೆಚ್ಚಳಮಾಡಿರುವುದು ಸ್ಥಳೀಯ ಸಂಸ್ಥೆಗಳ ಬಲ ಪಡಿಸಲು ಇದು ವೇದಿಕೆಯಾಗಿದೆ. ಸದಸ್ಯರಿಗೆ ಇನ್ಸುರೆನ್ಸ್ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಕೆಗೆ ನಮ್ಮ ಸರಕಾರ ಬದ್ಧವಾಗಿದೆ. ನಮಗೆ ಸ್ಪಂದಿಸಿದ ಸರಕಾರಕ್ಕೆ ಮತ್ತೊಮ್ಮೆ ಬಿಜೆಪಿ ಮತನೀಡಿ ವಿಧಾನಸಭೆಯಲ್ಲಿ ಧ್ವನಿಯಾಗಬೇಕು ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ಅಧ್ಯಕ್ಷೆ ಮಂಜಮ್ಮಭೀಮಪ್ಪ ಪೂಜಾರ್, ಉಪಾಧ್ಯಕ್ಷೆ ಯಲ್ಲಮ್ಮ,ಸದಸ್ಯರಾದ ಶರಣಪ್ಪ,.ಬಿ.ಟಿ ಬಸವರಾಜ್, ದೇವರಾಜ್, ಜ್ಯೋತೆಪ್ಪ, ನಗೀನಬಾನು, ಸುನಿತಾಸಿದ್ದೇಶ್, ರೇಖಾ, ಸುಂದರಪ್ಪ, ಎಸ್.ಕೆ.ಮಂಜುನಾಥ್, ಮುಖಂಡರಾದ ಮಾಗಡಿಮಂಜಪ್ಪ, ಪ್ರಕಾಶ್, ಭೀಮಪ್ಪ ಪೂಜಾರ್, ದೇವರಾಜ್, ರೇವಣಸಿದ್ದಪ್ಪ, ಹನುಮಂತಪ್ಪ, ಸಿದ್ದೇಶ್ ಪೂಜಾರ್, ನಾಗೇಂದ್ರಪ್ಪ, ಮಲ್ಲೇಶ್, ಪಿಡಿಓ ಶ್ರೀನಿವಾಸ್ ಸೇರಿದಂತೆ ಅನೇಕರು ಇದ್ದರು.