ಸುದ್ದಿವಿಜಯ, ಜಗಳೂರು: ಜಿಲ್ಲಾ ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ಡಾ.ಚನ್ನಪ್ಪ ಅವರ ಆದೇಶದಂತೆ ಜಗಳೂರು ತಾಲೂಕು ಪಂಚಾಯಿತಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕರಾಗಿದ್ದ ವೈ.ಎಚ್.ಚಂದ್ರಶೇಖರ್ ಅವರನ್ನು ಪ್ರಭಾರಿ ಕಾರ್ಯನಿರ್ವಹಕ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು. ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ತಾಪಂ ಇಓ ಆಗಿದ್ದ ಬಿ.ಲಕ್ಷ್ಮೀಪತಿ ಅವರು ವೈಯೋನಿವೃತ್ತಿ ಆಗಿದ್ದರಿಂದ ವೈ.ಎಚ್.ಚಂದ್ರಶೇಖರ್ ಅವರನ್ನು ಪ್ರಭಾರಿ ಇಓ ಆಗಿ ನೇಮಿಸಲಾಗಿದೆ.
ಅಧಿಕಾರ ಸ್ವೀಕರಿಸಿದ ನಂತರ ತಾಪಂ ಅಧಿಕಾರಿಗಳು, ವಿವಿಧ ಗ್ರಾಪಂ ಪಿಡಿಒಗಳು, ಸ್ನೇಹಿತರು ಅವರನ್ನು ಅಭಿನಂದಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಿಡಿಓ ಆಗಿ ಮತ್ತು ಸಹಾಯಕ ನಿದೇಶಕರಾಗಿ 12 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವವಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರಕಾರದ ನಿಯಮಗಳ ಅನುಸಾರ ಸಾರ್ವಜನಿಕರಿಗೆ ಸಲ್ಲಬೇಕಾದ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯವನ್ನು ಚಾಚೂ ತಪ್ಪದೇ ನಿರ್ವಹಿಸುತ್ತೇನೆ ಎಂದರು. ನನ್ನ ಮೇಲೆ ವಿಶ್ವಾಸವಿಟ್ಟು ಪ್ರಭಾರಿ ಇಓ ಆಗಿ ನೇಮಿಸಿದ ಜಿಪಂ ಕಾರ್ಯನಿರ್ವಹಕ ಅಧಿಕಾರಿ ಡಾ.ಎ.ಚನ್ನಪ್ಪ ಮತ್ತು ಕ್ಷೇತ್ರದ ಶಾಸಕರಾದ ಎಸ್.ವಿ.ರಾಮಚಂದ್ರ ಅವರಿಗೂ ಅಭಾರಿಯಾಗಿರುತ್ತೇನೆ ಎಂದರು.
ಈ ವೇಳೆ ತೋರಣಗಟ್ಟೆ, ಬಿದರಕೆರೆ, ಕೆಚ್ಚೇನಹಳ್ಳಿ ಗ್ರಾಪಂ ಪಿಡಿಒ ಮರುಳಸಿದ್ದಪ್ಪ, ಪಿಡಿಒಗಳಾದ ವಾಸುದೇವ್, ಲೋಹಿತ್‍ಕುಮಾರ್, ಶಿವಕುಮಾರ್, ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.