ಸುದ್ದಿವಿಜಯ,ಜಗಳೂರು.ಪತಿ ಹಾಗೂ ಅತ್ತೆ, ಮಾವನ ಕಿರುಕುಳದಿಂದ ಬೇಸತ್ತು ಮಗುವಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ, ಪೊಲೀಸ್ ಇಲಾಖೆ ತುಂಬ ನಿರ್ಲಕ್ಷ ತೋರಿದೆ ಎಂದು ಪಾಲಕರು ಡಿ.ವಿ ಅಂಜುಜಾ ನಾಗಾರಾಜ್ ಆಪಾಧಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದುವರೆ ವರ್ಷಗಳ ಹಿಂದೆ ನನ್ನ ಮಗಳು ಲಿಖಿತಾ ಹಾಗೂ ದಾವಣಗೆರೆ ಮಹಾಗನಗರ ಪಾಲಿಕೆಯ ಇಂಜಿನಿಯರ್ ಮನೋಜ್‌ಕುಮಾರ್‌ಗೆ ತುಂಬ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾಗಿ ಕೆಲವೇ ತಿಂಗಳಲ್ಲಿ ಮಗಳನ್ನು ನೆಮ್ಮದಿಯಿಂದ ಇರಲು ಬಿಡದೇ ಪತಿ ಹಾಗೂ ಅವರ ತಂದೆ,ತಾಯಿ ವರದಕ್ಷಿಣೆ ಕಿರುಕುಳ, ಮಾನಸಿಕ ಹಾಗೂ ದೈಹಿಕೆ ಹಿಂಸೆ ನೀಡಿದ್ದರಿಂದ ಬೇಸತ್ತ ಲಿಖಿತಾ ತನ್ನ ಹತ್ತು ತಿಂಗಳ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಆದರೆ ಈ ಘಟನೆಗೆ ಕಾರಣರಾದ ಮೂರು ಜನರ ಬದಲಾಗಿ ಕೇವಲ ಮನೋಜ್‌ಕುಮಾರ್ ಮಾತ್ರ ಜೈಲಿನಲ್ಲಿದ್ದಾನೆ ಅವರ ತಂದೆ ತಾಯಿ ಹೊರಗಡೆ ಇದ್ದಾರೆ. ಅವರನ್ನು ಬಂಧಿಸಿ ಶಿಕ್ಷೆ ಕೊಡಿಸದೇ ಹೋದರೆ ಪೊಲೀಸ್ ಠಾಣೆಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
“ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡು ಈಗಾಗಲೇ ಪತಿ ಮನೋಜ್‌ಕುಮಾರ್‌ಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ, ಅವರ ಪಾಲಕರ ಬಗ್ಗೆ ಸಾಕಷ್ಟು ಬಾರಿ ಹುಡುಕಾಟ ನಡೆಸಲಾಗಿದೆ, ಆದರೆ ಸುಳಿವು ಸಿಕ್ಕಿಲ್ಲ, ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಯಾಗುತ್ತದೆ”
-ಮಂಜುನಾಥ್ ಪಂಡಿತ್, ಸಿಪಿಐ