ಸುದ್ದಿ ವಿಜಯ ಜಗಳೂರು.ಇಲ್ಲಿನ ನಟರಾಜ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಮನೋಹರಿ ಚಿತ್ರವನ್ನು ಮಾಜಿ ಶಾಸಕ ಎಚ್.ಪಿ ರಾಜೇಶ್ ಮತ್ತು ಬೆಂಬಲಿಗರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದ ಚೌಡಪ್ಪ ಅವರ ಪುತ್ರ ದುರ್ಗಸಿಂಹ ಹೊಸ ಪ್ರಯತ್ನದ ಮೂಲಕ ಕನ್ನಡ ಮನೋಹರಿ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಇದು ಈಗಾಗಲೇ ರಾಜ್ಯದ 35 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಎರಡನೇ ವಾರದಲ್ಲಿ ದಾಪುಗಾಲು ಇಟ್ಟಿದೆ ಇದು ನೂರು ದಿನಗಳ ಕಾಲ ಪ್ರದರ್ಶನವಾಗಲೀ ಎಂದು ಶುಭಾ ಹಾರೈಸಿದರು.
ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆಗಳಿರುತ್ತವೆ ಅದನ್ನು ಸಾಧಿಸುವ ಛಲವಿದ್ದರೇ ಯಶಸ್ವಿಯಾಗಲು ಸಾದ್ಯ ಅದಕ್ಕೆ ಸಾಕ್ಷಿ ದುರ್ಗ ಸಿಂಹ, ಕುಟುಂಬದಲ್ಲಿ ಬಡತನವಿದ್ದರೂ ಚಿತ್ರ ರಂಗದಲ್ಲಿ ಏನಾದರೂ ಸಾಧಿಸಬೇಕು ಎಂಬ ಅಂಬಲದಿಂದ ಬೆಂಗಳೂರಿನಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ ಕೆಲ ಸ್ನೆಹಿತರ ಸಹಕಾರದಿಂದ ಮೊದಲ ಸಿನಿಮಾ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಕಳಾಕಳಿಯುಳ್ಳ ಚಿತ್ರಗಳನ್ನು ಮಾಡಿ ಜನರ ಮನಸ್ಸು ಗೆಲ್ಲಲಿ ಎಂದರು.
ಚಿತ್ರ ರಂಗದಲ್ಲಿ ತುಂಬ ಪೈಪೋಟಿ ಇದೇ ಅನೇಕ ದೊಡ್ಡ ನಟರ ಸಿನಿಮಾಗಳು ಬಿಡುಗಡೆಯಾಗದೇ ನಿಂತಿವೆ. ಆದರೆ ದುರ್ಗಸಿಂಹ ನಟನೆ ಮನೋಹರಿ ಬಿಡುಗಡೆಯಾಗಿದೆ. ಇಂತಹ ಸಿನಿಮಾಗಳನ್ನು ನೋಡಿ ತಾಲೂಕಿನ ಜನರು ಬೆಂಬಲಿಸಬೇಕು ಎಂದರು.
ಚಿತ್ರ ರಂಗದಲ್ಲಿ ತುಂಬ ಪೈಪೋಟಿ ಇದೇ ಅನೇಕ ದೊಡ್ಡ ನಟರ ಸಿನಿಮಾಗಳು ಬಿಡುಗಡೆಯಾಗದೇ ನಿಂತಿವೆ. ಆದರೆ ದುರ್ಗಸಿಂಹ ನಟನೆ ಮನೋಹರಿ ಬಿಡುಗಡೆಯಾಗಿದೆ. ಇಂತಹ ಸಿನಿಮಾಗಳನ್ನು ನೋಡಿ ತಾಲೂಕಿನ ಜನರು ಬೆಂಬಲಿಸಬೇಕು ಎಂದರು.
ನಟ ದುರ್ಗ ಸಿಂಹ ಮಾತನಾಡಿ, ಮನೋಹರಿ ಚಿತ್ರದಲ್ಲಿ ಪಾತ್ರ ಮಾಡಿ ಕನ್ನಡ ಚಿತ್ರ ರಂಗವನ್ನು ಪ್ರವೇಶ ಮಾಡಿದ್ದೇನೆ. ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ ಆದರೆ ನಾನೂ ಹುಟ್ಟಿ ಬೆಳೆದ ತಾಲೂಕಿನಲ್ಲಿ ಚಿತ್ರ ಬಿಡುಗಡೆಯಾಗಿದ್ದರು ಜನರ ಸಾಕಷ್ಟು ಸಂಖ್ಯೆಯಲ್ಲಿ ಬಂದು ವೀಕ್ಷಣೆ ಮಾಡದೇ ಇರುವುದು ಬೇಸರ ತಂದಿದೆ. ಇದರಲ್ಲಿ ನಾನು ಇನ್ನಷ್ಟು ಹತ್ತಿರವಾಗುವಂತಹ ಸಿನಿಮಾಗಳಲ್ಲಿ ನಟಿಸಿ ನಿಮ್ಮ ಮುಂದೆ ಬರುತ್ತೇನೆ ಬೆಂಬಲಿಸಿ, ಹಾರೈಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೋವಿ ಸಮಾಜದ ಅಧ್ಯಕ್ಷ ದೇವರಾಜ್, ಮುಖಂಡರಾದ ಬಿ. ಲೋಕೇಶ್, ಪಲ್ಲಾಗಟ್ಟೆ ಶೇಖರಪ್ಪ, ರೇವಣ್ಣ, ಕೆಳಗೋಟೆ ಅಹಮದ್ ಅಲಿ, ಕುಬೇಂದ್ರಪ್ಪ, ವೆಂಕಟೇಶ್, ಮಾರಪ್ಪ, ಸಿದ್ದಪ್ಪ, ದಾಸಪ್ಪ, ವಿಜಯ್ ಕೆಂಚೋಳ್, ರಾಜಪ್ಪ ಸೇರಿದಂತೆ ಮತ್ತಿತರಿದ್ದರು.