ಸುದ್ದಿವಿಜಯ,ಜಗಳೂರು: ತಾಲೂಕಿನ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ (ಫಿಕಾರ್ಡ್) ನೂತನ ಅಧ್ಯಕ್ಷರಾಗಿ ಮೆದಿಕೇರನಹಳ್ಳಿ ಗ್ರಾಮದ ಎಂ.ವಿ.ರಾಜು ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಎಂ.ವಿ.ರಾಜು ಅವರ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಹೀಗಾಗಿ ಅವರನ್ನು ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹರೀಶ್ ಕುಮಾರ್ ಘೋಷಿಣೆ ಮಾಡಿದರು.
ಈ ವೇಳೆ ಫಿಕಾರ್ಡ್ ಬ್ಯಾಂಕಿನ ಉಪಾಧ್ಯಕ್ಷರಾದ ಎಂ.ಎನ್. ಚನ್ನಬಸಪ್ಪ ನಿರ್ದೇಶಕರುಗಳಾದ ಕೆ.ಬಿ. ಸಿದ್ದೇಶ್, ಜೆ.ಎಸ್.ಮಲ್ಲಿಕಾರ್ಜುನ,ಚೌಡಮ್ಮ,ಬಿ.ಡಿ.ಹನುಮಂತರೆಡ್ಡಿ, ಪಿ.ಎಸ್.ಮಂಜಣ್ಣ, ಎಂ.ಟಿ.ಧನಂಜಯರೆಡ್ಡಿ,ಜೆ. ಶ್ರೀನಿವಾಸ್, ಸೈಯದ್ ಕಲಿಂ,ಕೆ.ಜಿ.ಲೋಲಾಕ್ಷಮ್ಮ ಕಟ್ಟಿಗೆಹಳ್ಳಿ, ಕೆ.ಎಚ್.ಮಂಜಪ್ಪ, ವ್ಯವಸ್ಥಾಪಕರಾದ ಟಿ.ಎನ್.ಭೂಷಣ್ ನೂತನ ಅಧ್ಯಕ್ಷರಾದ ಎಂ.ವಿ. ರಾಜು ಅವರಿಗೆ ಅಭಿನಂದನೆ ಸಲ್ಲಿಸಿದರು.