ಎಸ್‍ಸಿ, ಎಸ್‍ಟಿ ಪಂಗಡಗಳ ಮೂಲಭೂತ ಹಕ್ಕುಗಳಿಗೆ ಹೋರಾಟ ಅನಿವಾರ್ಯ: ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ!

Suddivijaya
Suddivijaya December 15, 2022
Updated 2022/12/15 at 12:46 PM

ಸುದ್ದಿವಿಜಯ, ಜಗಳೂರು: ರಾಜನಹಳ್ಳಿಯಲ್ಲಿ ಫೆ.8 ಮತ್ತು 9ರಂದು ಐದನೇ ವರ್ಷದ ವಾಲ್ಮೀಕಿ ಜಾತ್ರೆ ಹಮ್ಮಿಕೊಂಡಿದ್ದು, ಇಡೀ ರಾಜ್ಯದಲ್ಲಿರುವ ನಾಯಕ ಸಮುದಾಯದ ಜನರು ಸೇರಿಕೊಂಡು ನಮ್ಮ ಸಂವಿಧಾನ ಹಕ್ಕನ್ನು ಜಾರಿಗೊಳಿಸಬೇಕು ಎಂದು ಸರಕಾರಗಳನ್ನು ಒತ್ತಾಯ ಮಾಡೋಣ ಎಂದು ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಾತ್ರೆ ಹಿನ್ನೆಲೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದ ಜಾತಿಗಳಾದ ಪ.ಜಾತಿ ಹಾಗೂ ಪ.ಪಂಗಡದವರು ಸಂಘಟಿತರಾಗಿ ಸಂವಿಧಾನಡಿಯಲ್ಲಿ ಸಿಗಬೇಕಾದ ಮೂಲಭೂತ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ.

ಕೇಂದ್ರ ಸರಕಾರ 2019ರಲ್ಲಿ 1991ರಲ್ಲಿ ಈ ರಾಜ್ಯದ ನಾಯಕ ಸಮಾಜದ ಅನೇಕ ಪರ್ಯಾಯ ಪದಗಳನ್ನು ಪರಿಶಿಷ್ಠ ಪಂಗಡದ (ಬೇಡ, ಬೇಡರ್ ನಾಯಕ್, ನಾಯಕ, ವಾಲ್ಮೀಕಿ) ಪಟ್ಟಿಗೆ ಸೇರಿಸಿತ್ತು. ತದ ನಂತರ 2019ರಲ್ಲೂ ನಾಯಕ ಜಾತಿಯ ತಳವಾರ ಮತ್ತು ಪರಿವಾರ ಎಂದು ಎರಡು ಪದಗಳನ್ನು ಕೇಂದ್ರ ಸರಕಾರ ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಿದೆ.

ಯಾವುದೇ ಒಂದು ಜಾತಿಯನ್ನು ಎಸ್ಸಿ ಮತ್ತು ಎಸ್ಟಿ ಪಟ್ಟಿಗೆ ಸೇರಿಸುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ. ಶಿಫಾರಸ್ಸು ಮಾಡಬಹುದು ಅದನ್ನು ಪರಿಶೀಲಿಸಿ ಸೇರ್ಪಡೆಗೊಳಿಸುವ ಪರಮಾಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರ ಅಧಿಕಾರವಿದೆ ಎಂದರು.

ಜಗಳೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ವಾಲ್ಮೀಕಿ ಜಾತ್ರೆಯ ಕರ ಪತ್ರಗಳನ್ನು ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಬಿಡುಗಡೆಗೊಳಿಸಿ ಮಾತನಾಡಿದರು.
ಜಗಳೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ವಾಲ್ಮೀಕಿ ಜಾತ್ರೆಯ ಕರ ಪತ್ರಗಳನ್ನು ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಬಿಡುಗಡೆಗೊಳಿಸಿ ಮಾತನಾಡಿದರು.

ಆದರೆ ಮೀಸಲಾತಿ ಹೆಚ್ಚಳ ಮಾಡುವ ಪರಮಾಧಿಕಾರ ರಾಜ್ಯ ಸರಕಾರಕ್ಕಿದೆ. ಈಗಾಗಲೇ ಕೇಂದ್ರ ಸರಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಶೇ.24.5 ಮೀಸಲಾತಿಯನ್ನು ಕೊಟ್ಟಿದೆ. ಎಸ್ಟಿ 7, ಎಸ್ಸಿ 17 ಮೀಸಲಾತಿ ಇದೆ. ಬಹುತೇಕ ಆಯಾ ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ಹಾಗೂ ಎಸ್ಸಿ, ಎಸ್ಟಿಯ ಜಾತಿಗನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕಿದೆ. ರಾಜಕೀಯ ಇಚ್ಚಾಶಕ್ತಿ ಕೊರತೆ, ಸಂಘಟನೆ ಕೊರೆತೆ ಯಿಂದ ನಮ್ಮ ಮೀಸಲಾತಿ ಹೆಚ್ಚಳ ನೆನಗುದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಸರಕಾರದ ಕೊನೆ ಬಜೆಟ್‍ನಲ್ಲಿ ಎಸ್ಸಿ,ಎಸ್ಟಿಗೆ ಸುಮಾರು 29 ಸಾವಿರ ಕೋಟಿ ಮೀಸಲಿಟ್ಟಿದ್ದರು. ಬಿಜೆಪಿ ಸರಕಾರದ ಕೊನೆಯ ಬಜೆಟ್‍ನಲ್ಲಿ ಕಡಿತಗೊಳಿಸಿ ಕೇವಲ 21 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ 51 ಶಾಸಕರು, 7 ಮಂದಿ ಸಂಸದರಿದ್ದಾರೆ. ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಮೀಸಲಾತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇವರೆಲ್ಲರೂ ಒಗ್ಗಟ್ಟಾಗಿ ಸರ್ಕಾರವನ್ನು ಪ್ರಶ್ನೆಸಿದಾಗ ಮಾತ್ರ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಲಿದೆ ಎಂದು ತಿಳಿಸಿದರು.

ಕೊಳವೆಬಾವಿ ಕಡಿತ:
ಕಾಂಗ್ರೆಸ್ ಅಧಿಕಾರದಲ್ಲಿ ಎಚ್. ಆಂಜನೇಯ ಸಚಿವರಾಗಿದ್ದಾಗ ಎಸ್ಸಿ ಸಮುದಾಗಳಿಗೆ 700 ಕೊಳವೆಬಾವಿಗಳನ್ನು ಕೊರೆಸಿದ್ದರು. ಇದರಿಂದ ನೀರಾವರಿ ಪ್ರದೇಶಗಳಾಗಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಲು ಸಹಕಾರಿಯಾಗಿದೆ ಎಂದರು. ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರತಿ ಕ್ಷೇತ್ರಕ್ಕೂ 25ರಿಂದ 30 ಕೊಳವೆ ಬಾವಿಗಳನ್ನು ಕೊಡಲಾಗುತ್ತಿತ್ತು. ಇದೀಗ ಕೇವಲ 15 ಮಾತ್ರ ಸಿಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರಗಳು ಈ ರಾಜ್ಯದ ಎಸ್ಸಿ, ಎಸ್ಟಿ ಜನಾಂಗವು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಡಾ.ಬಿ.ಆರ್ ಅಂಬೇಡ್ಕರ್ ರವರು ಆಯಾ ರಾಜ್ಯ ಬಜೆಟ್‍ಗಳಲ್ಲಿ ಹಣ ಮೀಸಲಿಡಬೇಕು ಎಂದು ಅವಕಾಶ ಮಾಡಿಕೊಟ್ಟಿದ್ದಾರೆ. ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರೆ ಈವರೆಗೂ ಸಂಘಟನೆಯ ಕೊರತೆಯಿಂದ ಅನೇಕ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದೇವೆ ವಿಷಾದ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 50ರಿಂದ 60 ಲಕ್ಷ ಜನಸಂಖ್ಯೆ ಹೊಂದಿರುವ ನಾಯಕ ಸಮುದಾಯ ಒಗ್ಗಟ್ಟಿನಿಂದ ಹೋರಾಟ ನಡೆಸಿ ಮೀಸಲಾತಿ ಪಡೆಯಬೇಕು. ಹೀಗಾಗಲೇ 81 ತಾಲೂಕುಗಳಲ್ಲಿ ಪ್ರವಾಸ ಮಾಡಿ ಸಮಾಜವನ್ನು ಸಂಘಟಿಸಲಾಗುತ್ತಿದೆ. ಫೆ.8,9ರಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಒಗ್ಗೂಡಿ ಶಕ್ತಿ ಪ್ರದರ್ಶಿ ರಾಜ್ಯ, ರಾಷ್ಟ್ರದ ಗಮನಸೆಳೆಯಬೇಕು ಎಂದರು.

ಈ ವೇಳೆ ವಾಲ್ಮೀಕಿಯ ಜಾತ್ರೆಯ ಸಂಯೋಜ ಕೆ.ಪಿ ಪಾಲಯ್ಯ, ಮುಖಂಡರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ನಾಯಕ ಸಮಾಜದ ಕಾರ್ಯದರ್ಶಿ ಸೂರಲಿಂಗಪ್ಪ, ಬಿಳಿಚೋಡು ಮಹೇಶ್, ಬಿಸ್ತುವಳ್ಳಿ ಬಾಬು, ಕೃಷ್ಣಮೂರ್ತಿ, ಲೋಕೇಶ್, ರೇವಣ್ಣ, ಜಿ.ಎಚ್ ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ರವಿಕುಮಾರ್, ಹನುಮಂತಪ್ಪ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!