ಸುದ್ದಿವಿಜಯ,ಜಗಳೂರು: ತಾಲೂಕಿನ ಮೆದಗಿನಕೆರೆ ಗ್ರಾಮದ ಬಳಿ ಇರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಕಳೆದ ಆ.23 ರ ಸಂಜೆ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುನೀಲ್ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಖಂಡಿಸಿ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆ (ಎಸ್‍ಎಫ್‍ಐ) ವತಿಯಿಂದ ಗುರುವಾರ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಸರಕಾರಕ್ಕೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರ ಮೂಲಕ ಸರಕಾರಕ್ಕೆ ಮನವಿ ನಡೆಸಿದರು.
ವಿದ್ಯಾರ್ಥಿ ಸಾವು ಅನುಮಾನಾಸ್ಪದವಾಗಿದೆ. ಪ್ರಾಂಶುಪಾಲರಾದ ರೂಪಕಲಾ ಮತ್ತು ವಾರ್ಡ್‍ನ್ ಮಂಜುನಾಥ್ ಅವರು ನೇರ ಕಾರಣ ಜವಾಬ್ದಾರರಾಗಿದ್ದಾರೆ. ಮೃತ ವಿದ್ಯಾರ್ಥಿ ತಂದೆ ಬಡವರಾಗಿದ್ದು ಅವರಿಗೆ ಖಾಯಂ ಉದ್ಯೋಗ ನೀಡಬೇಕು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಮುಚ್ಛಯ ಸಂಘದವತಿಯಿಂದ ನೀಡುವ ಪರಿಹಾರದ ಮೊತ್ತವನ್ನು 10 ಲಕ್ಷಗಳವರೆಗೆ ಹೆಚ್ಚಿಸಬೇಕು.
ಬಾಲಕನ ಸಾವಿನ ವಿಚಾರದಲ್ಲಿ ಸಊಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪೋಷಕರಿಗೆ ನ್ಯಾಯ ಸಿಗದೇ ಹೋದರೆ ರಾಜ್ಯಾದಾದ್ಯಂತ ಉಗ್ರಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಸ್‍ಎಫ್‍ಐ ಮಖಂಡಾದ ಜಿ.ಮಹೇಶ್ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ಎಸ್‍ಎಫ್‍ಐ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಗಳು ಭಾಗವಹಿಸಿದ್ದರು.