ಜಗಳೂರು ತಾಲೂಕಿನ ತಮಲೇಹಳ್ಳಿಯಲ್ಲಿ ಮುಂದಿನ ವರ್ಷ ಜಿಲ್ಲಾ ಮಟ್ಟದ ಕ್ರಿಕೇಟ್ ಟೂರ್ನಿಮೆಂಟ್ : ಶಾಸಕ ಎಸ್.ವಿ.ಆರ್ ಭರವಸೆ

Suddivijaya
Suddivijaya January 22, 2023
Updated 2023/01/22 at 3:17 PM

ಸುದ್ದಿವಿಜಯ ಜಗಳೂರು.ತಮಲೇಹಳ್ಳಿಯಲ್ಲಿ ಮುಂದಿನ ವರ್ಷ ಜಿಲ್ಲಾ ಮಟ್ಟದ ಕ್ರಿಕೇಟ್ ಟೂರ್ನಿಮೆಂಟ್ ಆಯೋಜಿಸಲಾಗುವುದು ಎಂದು ಶಾಸಕ ಎಸ್.ವಿ ರಾಮಚಂದ್ರ ಭರವಸೆ ನೀಡಿದರು.

ಜಗಳೂರು ತಾಲೂಕಿನ ತಮಲೇಹಳ್ಳಿ ಗ್ರಾಮದಲ್ಲಿ ಯುವ ಸ್ವರಾಜ್‌ ಆಟಗಾರರ ವತಿಯಿಂದ 75ನೇ ವಷದ ಗಣರಾಜ್ಯೋತ್ಸವದ ಅಂಗವಾಗಿ 4ನೇ ಬಾರಿಗೆ ಹಮ್ಮಿಕೊಂಡಿದ್ದ ಶ್ರೀ ಆಂಜನೇಯ ಕಪ್‌ ತಾಲೂಕು ಮಟ್ಟದ ಟೆನ್ನಿಸ್‌ ಬಾಲ್‌ ಕ್ರಿಕೇಟ್‌ ಟೂರ್ನಿಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಗಳಿಂದ ಯುವಕರಲ್ಲಿ ಉತ್ಸುಕತೆ ತುಂಬಲಿದೆ. ಆಟವಾಡುವ ಪ್ರತಿಯೊಬ್ಬರು ಸಹೋದರ ಭಾವನೆಯಿಂದ ಹೊಂದಿರಬೇಕು, ಕ್ರೀಡೆ ಎಂದಾಗ ಸೋಲು-ಗೆಲುವು ಸಹಜವಾಗಿರುತ್ತದೆ ಎಲ್ಲವನ್ನು ಸಂತಸದಿಂದಲೇ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಯುವಕರ ಆಶಯದಂತೆ ತಮಲೇಹಳ್ಳಿ ಗ್ರಾಮದ ವೃತ್ತದಲ್ಲಿ ಮದಕರಿನಾಯಕ ಪುತ್ಥಳಿ ನಿರ್ಮಿಸಿಕೊಡಲಾಗುವುದು. ಇದಕ್ಕೆ ಬೇಕಾಗಿರುವ ಸ್ಥಳವನ್ನು ಸಿದ್ದತೆ ಮಾಡಿಕೊಳ್ಳಿ, ಗ್ರಾಮದ ಜನರೊಂದಿಗೆ ಚರ್ಚಿಸಿ ನಿರ್ಧಾರ ತೀರ್ಮಾನ ತೆಗೆದುಕೊಳ್ಳಿ ಆದಷ್ಟು ಬೇಗ ಪುತ್ಥಳಿ ಕೊಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿಳಿಚೋಡು ಮಹೇಶ್‌, ರುದ್ರೇಶ್‌, ಇಂದ್ರೇಶ್‌, ನಾಗರಾಜ್‌, ಗ್ಯಾಸ್‌ ಓಬಣ್ಣ, ವಿಜಯಕುಮಾರ್‌ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!