ಸುದ್ದಿವಿಜಯ, ಜಗಳೂರು: ಯಾವದ ಸಮುದಾಯದಲ್ಲಿ ಜನಿಸಿದ ಶ್ರೀಕೃಷ್ಣ ಪರಮಾತ್ಮ ಹಿಂದೂ ಧರ್ಮದ ರಕ್ಷಣೆಗೆ ಸಾರಿದ ಸಂದೇಶ ಕಲಿಯುಗಕ್ಕೂ ಪ್ರಸ್ತುತವಾಗಿದೆ. ಯಾದವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ನಾನು ಸದಾ ಸಿದ್ದನಿದ್ದೇನೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಭರಮವಸೆ ನೀಡಿದರು.
ತಾಲೂಕಿನ ಚಿಕ್ಕಮಲ್ಲನಹೊಳೆ, ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ, ಸಿದ್ದಮ್ಮನಹಳ್ಳಿ ಗ್ರಾಮಗಳಲ್ಲಿ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀಕೃಷ್ಣ ಜಾತಿ ಧರ್ಮಕ್ಕೆ ಸೀಮಿತವಲ್ಲ ಎಲ್ಲರ ಮನದಲ್ಲಿ ನೆಲೆಸಿದ್ದಾರೆ. ಅವರು ನೆಮ್ಮದಿ ಶಾಂತಿಯ ಸಂಕೇತಕ್ಕೆ ಸಾಕ್ಷಿಯಾಗಿದ್ದು. ದೈವೀಪುರುಷರಾಗಿ ಇಂದಿಗೂ ಇತಿಹಾಸದಲ್ಲಿ ಅವಿಸ್ಮರಣೀಯರಾಗಿದ್ದಾರೆ.ಪಟ್ಟಣದಲ್ಲಿ ಆಗಸ್ಟ್ 26 ರಂದು ಸರ್ಕಾರಿ ಹಾಗೂ ಯಾದವ ಸಮಾಜದ ಸಹಯೋಗದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಮಾತನಾಡಿ, ಯಾವದ ಸಮುದಾಯದ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಸಂಪತ್ತು ಗಳಿಕೆ ಮಾಡಬಹುದು ಆದರೆ ಶಿಕ್ಷಣವನ್ನು ಗಳಿಸಲು ಶ್ರದ್ದೆ ಪರಿಶ್ರಮ ಅಗತ್ಯ.
ಸರಕಾರಿ ಕೆಲಸಗಳನ್ನೇ ಅವಲಂಬಿಸದೆ ಸ್ವಾವಲಂಬಿ ಬದುಕು ನಿರ್ಮಿಸಿಕೊಳ್ಳಬೇಕು. ಸರಕಾದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು.ಅಲೆಮಾರಿ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು. ಗ್ರಾಮಗಳಲ್ಲಿ ಸಾಮರಸ್ಯ ಸೌಹಾರ್ದತೆಯಿಂದ ಜೀವನಸಾಗಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕೆಪಿಸಿಸಿ ಎಸ್ ಟಿ ಘಟಕದ ಕೆ.ಪಿ.ಪಾಲಯ್ಯ,ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಅವರು ಭಾಗವಹಿಸಿ ಶುಭಕೋರಿದರು.
ಸಂದರ್ಭದಲ್ಲಿ ವಿಎಸ್ ಎಸ್ ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖಂಡರಾದ ಅರವಿಂದ ಪಟೇಲ್, ಇಂದ್ರೇಶ್, ಬಾಲರಾಜ್, ತಿಪ್ಪೇಸ್ವಾಮಿ, ರಂಗಪ್ಪ, ಬಕ್ಕೇಶ್, ಪ್ರಾಂಶುಪಾಲ ನಾಗಲಿಂಗಪ್ಪ, ಮಾದಿಹಳ್ಳಿ ಮಂಜುನಾಥ್, ಮಹಾಂತೇಶ್ ಸೇರಿದಂತೆ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.