ಪಾಪನಾಯಕರು ಬುಡಕಟ್ಟು ನಾಯಕರ ಆರಾಧ್ಯ ಧೈವ

Suddivijaya
Suddivijaya February 7, 2023
Updated 2023/02/07 at 2:52 PM

ಸುದ್ದಿವಿಜಯ ಜಗಳೂರು.ಇತಿಹಾಸ ಪುರುಷ, ಪವಾಡಗಳ ಸೃಷ್ಟಿಸಿ ಜನರಿಗೆ ದೇವರಾಗಿರುವ ಪಾಪನಾಯಕ ನಾಯಕ ಜನಾಂಗದ ಆರಾಧ್ಯ ದೈವ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಬುಡಕಟ್ಟು ಜನಾಂಗದ ಆರಾಧ್ಯ ದೈವ ಪಾಪಾನಾಯಕ ದೇವಸ್ಥಾನದ ಕಳಶಾರೋಹಣ ಹಾಗೂ ಗುಗ್ಗರಿ ಹಬ್ಬದ ಹಿನ್ನೆಲೆ ಸೋಮವಾರ ರಾತ್ರಿ ಪಟ್ಟಣದಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಯಕ ಜನಾಂಗದವರು ಎಲ್ಲರೂ ಒಂದೇ. ಭಾರತೀಯರಲ್ಲಿ ವಿಭಿನ್ನ ದೈವಗಳಿರಬಹುದು ಆದರೆ ನಮ್ಮ ಸಂಸ್ಕøತಿ ಹಿಂದುತ್ವದವನ್ನೇ ಪಾಲಿಸುತ್ತದೆ ಎಂದರು. ಕ್ಷೇತ್ರದ ಅಭಿವೃದ್ಧಿಗೆ ಸರಕಾರ 57 ಕೆರೆ ತುಂಬಿಸುವ ಯೋಜನೆ ತಂದಿದೆ. ಜಗಳೂರು ಪಟ್ಟಣದ ಕೆರೆ ಏರಿ ಮೇಲೆ ವಿಸ್ತಾರವಾಗಿರುವ ಪಾಪನಾಯಕನ ದೇವಸ್ಥಾನ ಧಾರ್ಮಿಕ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ. ಪ್ರವಾಸಿಗರನ್ನು ಕೈಬೀಸಿ ಕರೆಯುಂತಾಗುತ್ತದೆ ಎಂದರು.

ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ಹಾಗೂ ಕೊಟ್ಟೂರೇಶ್ವರ ಸ್ವಾಮಿಯವರಂತೆ ಪಾಪನಾಯಕರು ಅನೇಕ ಪವಾಡಗಳನ್ನು ಮಾಡಿದ್ದಾರೆ. ಮ್ಯಾಸ ವ್ಯಾಸ ಮಂಡಲದ ಆರಾಧ್ಯ ದೈವ ಅವರು. ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ ದಾವಣಗೆರೆ, ಜಗಳೂರು ಕಡೆ ಬುಡಕಟ್ಟು ಜನರ ಆರಾಧ್ಯ ದೈವ ಪಾಪನಾಯಕರನ್ನು ಆರಾಧಿಸುವ ಅಪಾರ ಭಕ್ತರಿದ್ದಾರೆ. ಮೀಸಲಾತಿಯಲ್ಲಿ ಓಬಿಸಿಯಲ್ಲಿದೆ ಅದನ್ನು ಎಸ್ಟಿ ಪಟ್ಟಿಗೆ ಸೇರಿಸಿ ಎಂದು ಸರಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.

ನಾವು ಅತ್ಯಂತ ಹಿಂದುಳಿದವರು, ಕಾಡಿನ ಸಂಸ್ಕøತಿ ನಮ್ಮದು, ನಾವು ಕಾಡಿನ ನಾಯಕರು. ನಾವು ಹೃದಯ ವಂತರು. ಒರಟು ಸಮುದಾಯದವರು, ಭಾಷೆ ಕೆಟ್ಟದಿರಬಹುದು ಆದರೆ ಹೃದಯ ಶ್ರೀಮಂತಿಕೆಯುಳ್ಳವರು ಎಂದರು.

ಕಾರ್ಯಕ್ರಮದಲ್ಲಿ ಕೆ.ಪಿ.ಪಾಲಯ್ಯ, ಬೋರನಾಯಕ, ಸೂರಲಿಂಗಪ್ಪ, ಓಬಣ್ಣ, ಜಯಲಕ್ಷ್ಮೀ,ಪಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಬಿ.ಟಿ.ಕೃಷ್ಣಪ್ಪ, ಕಟ್ಟೆ ಮನೆ ದೈವಸ್ಥರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!