ಸುದ್ದಿವಿಜಯ ಜಗಳೂರು.ವಾಲ್ಮೀಕಿಯೂ ಕವಿಕುಲದ ಗುರುವಾಗಿ ಹಲವಾರು ಕವಿ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಶನಿವಾರ ಯುವಕರ ಬಳಗದಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಕ್ತಿಯೂ ಕೆಟ್ಟ ಕೆಲಸಗಳನ್ನು ಬಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಿ ಭಕ್ತಿಮಾರ್ಗದಲ್ಲಿ ನಡೆಯಬೇಕು, ಮಹರ್ಷಿಗಳ ನೆಪಿಗಾಗಿ ಜಯಂತಿಯನ್ನು ಆಚರಿಸಲಾಗುತ್ತದೆ. ಅವರು ರಾಮಾಯಣವನ್ನು ಬರೆದರು ಅವರ ಅಸ್ತಿತ್ವಕ್ಕೆ ಹೊಸ ಪರಾಕಾಷ್ಠೆಯನ್ನು ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಬಹುತೇಕರು ಕೃಷಿಕರೆ, ಜಮೀನು ಮತ್ತು ಕೂಲಿ ನಂಬಿಕೊAಡೇ ಬದುಕುವ ಪಾಲಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ದುಡಿದು ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ ಆಸೆ. ಆಕಾಂಕ್ಷೆಗಳಿಗೆ ಒಳಗಾಗಿ ಶಿಕ್ಷಣ ಮೊಟಕುಗೊಳಿಸಿ ಪ್ರೀತಿ, ಪ್ರೇಮದಿಂದ ಓಡಿ ಹೋಗಿ ಸುಂದರವಾದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.
ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ನಾಯಕ ಸಮಾಜದಲ್ಲಿ ಹುಟ್ಟಿದ ವಾಲ್ಮೀಕಿ ಒಬ್ಬ ಭೇಟೆಗಾರನಾಗಿ ಅರಣ್ಯದಲ್ಲಿ ವಾಸವಾಗಿದ್ದವನು, ದೈವ ಕೃಪೆಯಿಂದ ಜ್ಞಾನೋದಯವಾಗಿ ರಾಮಾಯಣ ಬರೆದು ಶ್ರೀರಾಮ,ಸೀತೆ ಮತ್ತು ಹನುಮಂತನಿಗೆ ಜೀವ ತುಂಬಿದ್ದಾರೆ. ಅವರ ಆದರ್ಶ ಗುಣಗಳನ್ನು ಎಲ್ಲರು ಮೈಗೂಡಿಸಿಕೊಂಡು ನಡೆಯಬೇಕು ಎಂದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ರಾಮಾಯಣ ಬರೆದ ವಾಲ್ಮೀಕಿ ಅಜ್ಞಾನದಲ್ಲಿದ್ದ ಲೋಕಕ್ಕೆ ಬೆಳಕು ತಂದುಕೊಟ್ಟರು. ಶ್ರೀರಾಮ ಎಂದು ಗೊತ್ತಾಗಿದ್ದೇ ವಾಲ್ಮೀಕಿಯಿಂದ ಆದರೆ ರಾಮನಿಗಿದ್ದ ಭಕ್ತಿ, ವಾಲ್ಮೀಕಿಯ ಮೇಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಿಜಿ ಸೌಂಡ್ಸ್ಗೆ ಹೆಜ್ಜೆ:
ವಾಲ್ಮೀಕಿ ಜಯಂತಿಯ ಅಂಗವಾಗಿ ಗ್ರಾಮದಲ್ಲಿ ವಾಲ್ಮೀಕಿ ಭಾವ ಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಸಂಜೆ ಸರ್ಕಾರಿ ಶಾಲೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಡಿಜಿ ಸೌಂಡ್ಸ್ ಗೆ ಯುವಕರು ಕುಣಿದು ಸಂಭ್ರಮಿಸಿದರು. ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಾಗಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಿತಿ ಅಧ್ಯಕ್ಷ ಚಿಂತಪ್ಪ, ವ್ಯವಸ್ಥಾಪಕ ಶಿವು, ಮುಖಂಡರಾದ ಡಿ.ವಿ ನಾಗಪ್ಪ, ಪ್ರಕಾಶ್‌ಗೌಡ, ಬಸವನಗೌಡ, ಅಹಮದ್‌ಅಲಿ, ನಾಗರಾಜ್, ಗೌಡ, ಅರಣ್ಯ ಇಲಾಖೆಯ ಬಸವರಾಜ್, ಭದ್ರಿ ಸೇರಿದಂತೆ ಮತ್ತಿತರಿದ್ದರು.