ಸುದ್ದಿವಿಜಯ,ಜಗಳೂರು: ದೇಶದಲ್ಲಿ 130 ಕೋಟಿ ಜನರಿದ್ದು ಅದರಲ್ಲಿ ಶೇ.10 ರಷ್ಟು ಮಾನಸಿ ಅಸ್ವಸ್ಥರಾಗಿದ್ದಾರೆ ಅದಲ್ಲಿ ಶೇ.09 ರಷ್ಟು ಮಂದಿ ಸಂಪೂರ್ಣ ಮಾನಸೀಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞರಾದ ಡಾ.ಮರುಳಸಿದ್ದಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಮನೋವೈದ್ಯಕೀಯ ವಿಭಾಗ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು, ದಿ ಲೀವ್ ಲವ್ ಲಾಫ್ ಫೌಂಡೇಷನ್ ಬೆಂಗಳೂರು ಮತ್ತು ತಾಪಂ ಹಾಗೂ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ತಾಪಂ ಸಭಾಂಗಣದಲ್ಲಿ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒತ್ತಡ ಬದುಕಿನಿಂದ ಮನುಷ್ಯನ ಮನಸ್ಸು ವಿಚಲಿತವಾಗುತ್ತಿದೆ. ದೈಹಿಕ ಆರೋಗ್ಯ ಸದೃಢವಾಗಿದ್ದರೆ ಸಾಲದು ಮಾನಸಿಕ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಆರ್ಥಿಕ ಮತ್ತು ಸಾಮಾಜಿಕ ಜೀವನ ಉತ್ತಮ ವಾಗಿರುತ್ತದೆ ಎಂದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಇಲಾಖೆಯ ಉದ್ದೇಶ ಜನರಿಗೆ ಮನವರಿಕೆ ಮಾಡುವುದಾಗಿದೆ. 20 ವರ್ಷಗಳ ಹಿಂದೆ ವಿಶ್ವಸಂಸ್ಥೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಜಾರಿಗೆ ತಂದಿತು. ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕ ಒತ್ತಡಗಳು ಹೆಚ್ಚಾಗುತ್ತಿದ್ದು ಅದಕ್ಕಾಗಿ ಮೊಬೈಲ್ ಯುನಿಟ್ ಮೂಲಕ ಗ್ರಾಮಗಳಲ್ಲಿ ಮಾನಸಿಕ ಅಸ್ವಸ್ಥರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ.
ಆಶಾ ಕಾರ್ಯಕರ್ತೆಯರು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿ. ಮಾನಸಿಕ ಅಸ್ವಸ್ಥರು ಕಂಡು ಬಂದರೆ ಸಮೀಪದ ಆರೋಗ್ಯ ಇಲಾಖೆಗೆ ಕರೆತನ್ನಿ ಮತ್ತು ಅವರಿಗೆ ಸರಕಾರದಿಂದ ಚಿಕಿತ್ಸೆ ನೀಡಲಾಗುವುದು ಎಂದರು.
ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾತನಾಡಿ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾನಸಿಕ ರೋಗಿಗಳ ಬಗ್ಗೆ ಹೆಚ್ಚು ಅರ್ಜಿಗಳು ಬರುತ್ತಿವೆ. ಸರಕಾರದಿಂದ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ತಾಪಂ ಇಓ ವೈ.ಎಚ್.ಚಂದ್ರಶೇಖರ್, ದೇಹ ಸದೃಢವಗಿದ್ದರೆ ಮನಸ್ಸು ಸದೃಢವಾಗಿರುತ್ತದೆ. ಎಲ್ಲರೂ ಮಾನಸಿಕ ಆರೋಗ್ಯದ ಕರೆ ಹೆಚ್ಚು ಒತ್ತು ನೀಡಿದರೆ ಕುಟುಂಬ ನೆಮ್ಮದಿಯಿಂದ ಬದಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ಪ್ರಾಧ್ಯಾಪಕರಾದ ಡಾ.ಟಿ.ಶಿವಕುಮಾರ್ ಮಾತನಾಡಿದರು. ಈ ವೇಳೆ ತಾ.ವೈದ್ಯಾಧಿಕಾರಿ ಡಾ.ನಾಗರಾಜ್, ಡಾ.ಕೆ.ಕೆ.ಪ್ರಕಾಶ್, ಎಸ್.ಸಂತೋಷ್, ಡಿ.ದುಂಡೇಶ್, ಡಾ.ಮುರಳಿಧರ್, ಎ.ಎಲ್ ಜನಾರ್ಥನ್, ಎ.ಪಿ.ಬೀರೇಂದ್ರ ಕುಮಾರ್ ಮತ್ತು ತಾಲೂಕಿನ 500ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.