ಸುದ್ದವಿಜಯ, ಜಗಳೂರು: ಕಾಂಗ್ರೆಸ್ ವರಿಷ್ಠರ ಆದೇಶದ ಮೇರೆಗೆ, ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ತಾಲೂಕಿನ ಮರೇನಹಳ್ಳಿ ಗ್ರಾಮದ ಕುಮಾರ್ ಸೋಮವಾರ ನೇಮಕಾವಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಪಕ್ಷದ ಸಂಘಟನೆ, ಹೋರಾಟದಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಹಾಗೂ ದಾವಣಗೆರೆ ಜಿಲ್ಲೆಯ ಪಕ್ಷದ ಮುಖಂಡರುಗಳ ಶಿಫಾರಸ್ಸಿನೊಂದಿಗೆ ಈ ನೇಮಕಾತಿ ಮಾಡಲಾಗಿದೆ. ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಸಚಿನ್ ಮೀಗಾ ಆದೇಶದಲ್ಲಿ ತಿಳಿಸಿದ್ದಾರೆ.ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಮರೇನಹಳ್ಳಿ ಕುಮಾರ್ ನೇಮಕವಾದರು
ಬೆಂಗಳೂರಿನಲ್ಲಿ ಶ್ರೀ ಕುಮಾರ್ ರವರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಿದ ಸಚಿನ್ ಮೀಗಾರವರು ತಮಗೆ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಹಾಗೂ ಕಿಸಾನ್ ಕಾಂಗ್ರೆಸ್ ಮೂಲಕ ರೈತರನ್ನು ಪಕ್ಷದಲ್ಲಿ ಸಂಘಟಿಸಲು ಶ್ರಮಿಸಬೇಕು ಎಂದು ತಿಳಿಸಿದರು.
ಈ ದಿಸೆಯಲ್ಲಿ ತಾವುಗಳು ರಾಜ್ಯ ಮತ್ತು ದಾವಣಗೆರೆ ಜಿಲ್ಲೆಯ ಮುಖಂಡರುಗಳ ಸಹಕಾರದೊಂದಿಗೆ ಬ್ಲಾಕ್ ಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುತ್ತೀರೆಂದು ಸೂಚನೆ ನೀಡಿದರು.