ಸುದ್ದಿವಿಜಯ, ಜಗಳೂರು: ಸಾರ್ವಜನಿಕರು ಸಂಚಾರ ಮಾಡುವಂತಹ ಗ್ರಾಮೀಣ ಸಂಪರ್ಕ ರಸ್ತೆಗೆ ಕೆಲವರಿಂದ ಅಡ್ಡಿಯಾಗುತ್ತಿದ್ದು, ಅವರ ವಿರುದ್ದ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಿರೇಮಲ್ಲನಹೊಳೆ ಮತ್ತು ಹುಚ್ಚವ್ವನಹಳ್ಳಿ ಗ್ರಾಮಸ್ಥರು ಗ್ರೇಡ್-2 ತಹಶೀಲ್ದಾರ್ ಮಂಜಾನಂದ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ತಾಲ್ಲೂಕಿನ ಹಿರೇಮಲ್ಲನಹೊಳೆ ಹಾಗು ಹುಚ್ಚವ್ವನಹಳ್ಳಿ ಕೊರಚರಹಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ಕೊರಚರಹಟ್ಟಿ ಗ್ರಾಮೀಣ ರಸ್ತೆಯು ರೈತರಿಗೆ ಹಾಗೂ ಗ್ರಾಮಸ್ಥರಿಗೆ ಸಂಚಾರ ಮಾಡಲು ಇಲ್ಲಿನ ರಸ್ತೆಬದಿಯ ಕೆಲ ರೈತರು ವಿನಾಕಾರಣ ಮಣ್ಣಿನ ದಿಬ್ಬಗಳು ಹಾಗು ಕಲ್ಲುಗಳನ್ನ ಅಡ್ಡ ಹಾಕುವ ಮೂಲಕ ದೌರ್ಜನ್ಯ ಮಾಡುತ್ತಾರೆ.
ಅತೀ ತುರ್ತು ಸಂದರ್ಭಗಳಲ್ಲಿ ಬೈಕ್ ಹಾಗು ಕಾರ್ ಗಳನ್ನು ತರುವಾಗ ಇನ್ನಿಲ್ಲದ ಕಿರಿಕಿರಿ ಉಂಟಾಗುತ್ತದೆ. ಶೀಘ್ರವೇ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಒತ್ತಾಯಿಸಿದರು.ಸುಮಾರು ವರ್ಷಗಳಿಂದ ನಾವು ಇದೇ ರಸ್ತೆಯಲ್ಲಿ ಎತ್ತಿನಗಾಡಿ, ಸೈಕಲ್, ಮೋಟರ್ ಸೇರಿದಂತೆ ಪಾದಾಚಾರಿ ಮೂಲಕ ಕೊರಚರಹಟ್ಟಿ ಹಿರೇಮಲ್ಲನಹೊಳೆ ಸಂಪರ್ಕ ಮಾಡುತ್ತಿದ್ದವೆ.
ಆದರೆ ಕೆಲವರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ ಸಾರ್ವಜನಿಕರಿಗೆ ತೊಂದರೆ ಮಾಡುವುದು ಸರಿಯಲ್ಲ.
ಯಾರದ್ದೋ ಸಿಟ್ಟಿಗೆ ನಮ್ಮಂತವರ ಮೇಲೆ ಹಕ್ಕು ಚಲಾಯಿಸುವುದು ಸರಿಯಲ್ಲ. ಸಾರ್ವಜನಿಕ ರಸ್ತೆ ಎಲ್ಲರ ಬಳಕೆಗೂ ಮುಕ್ತವಾಗಿದೆ. ರಸ್ತೆ ಏನಾದರು ನಿಮ್ಮ ಜಮೀನಿನಲ್ಲಿ ಇದ್ದರೆ ಅಳತೆ ಮಾಡಿಸಿ ಅದ್ದು ಬಸ್ತುಮಾಡಲಿ.
ಅದು ಬಿಟ್ಟು ಮುಂದಿನ ಹೊಲದ ರೈತರಿಗೆ ಸಾರ್ವಜನಿಕರಿಗೆ ತೊಂದರೆ ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷರು ವೆಂಕಟೇಶ್, ಗ್ರಾಪಂ ಮಾಜಿಸದಸ್ಯ ರವೀಶ್, ಯುವಮುಖಂಡ ರುದ್ರೇಶ್, ಸುರೇಶ್ ಇತರರು ಇದ್ದರು.